ವಿಜ್ಞಾನ-ತಂತ್ರಜ್ಞಾನ

ಜ್ಯೋನಿಯ ಶಕ್ತಿಶಾಲಿ ಜಿಪ್ಯಾಡ್

ಇಲೈಫ್-7 ಮತ್ತು ಮಿನಿಯ ಯಶಸ್ಸಿನ ಬಳಿಕ ಜ್ಯೋನಿ ಸಂಸ್ಥೆಯು ಜಿಪ್ಯಾಡ್ ಬಿಡುಗಡೆ ಮಾಡಿದೆ. ಜಿ4 ಮತ್ತು ಎಂ2 ಎಂಬ ಎರಡು...

ಇಲೈಫ್-7 ಮತ್ತು ಮಿನಿಯ ಯಶಸ್ಸಿನ ಬಳಿಕ ಜ್ಯೋನಿ ಸಂಸ್ಥೆಯು ಜಿಪ್ಯಾಡ್ ಬಿಡುಗಡೆ ಮಾಡಿದೆ.
ಜಿ4 ಮತ್ತು ಎಂ2 ಎಂಬ ಎರಡು ಉತ್ಪನ್ನಗಳನ್ನು ಮಾರುಕಟ್ಟೆಗೆ ತಂದಿದ್ದು, ಕ್ರಮವಾಗಿ 3200 ಮತ್ತು 4200 ಎಂಎಎಚ್ ಬ್ಯಾಟರಿಯನ್ನು ಇದು ಹೊಂದಿದೆ. ಇವೆರಡು ಫೋನ್ ಎಚ್‌ಡಿ ಎಲ್‌ಸಿಡಿ ಸ್ಕ್ರೀನ್‌ನ್ನು ಹೊಂದಿವೆ. ಫೇಸ್ ಬ್ಯೂಟಿ ಎಫೆಕ್ಟ್, ಹ್ಯಾಂಡ್ಸ್ ಫ್ರೀ ಫೋಟೋ ಗೆಸ್ಚರ್, ಮೋಷನ್ ಸೆನ್ಸಿಂಗ್, ಪನೋರಮಾ, ಫೇಸ್ ಡಿಟೆಕ್ಷನ್ ಸೇರಿದಂತೆ ಆಧುನಿಕ ತಂತ್ರಜ್ಞಾನವನ್ನು ಇವೆರಡೂ ಮೊಬೈಲ್‌ಗಳಲ್ಲಿ ಅಳವಡಿಸಲಾಗಿದೆ. ಮತ್ತೊಂದು ವಿಶೇಷತೆಯೆಂದರೆ ಕಡಿಮೆ ದರದಲ್ಲಿ ಮಾರುಕಟ್ಟೆಯಲ್ಲಿನ ಎಲ್ಲ ಫೀಚರ್ಸ್‌ಗಳು ಈ ಮೊಬೈಲ್‌ಗಳಲ್ಲಿ ಸಿಗುತ್ತಿವೆ. ಇಷ್ಟು ಬೃಹತ್ ಸಾಮರ್ಥ್ಯದ ಬ್ಯಾಟರಿ ಮೊಬೈಲ್‌ನಲ್ಲಿ ಲಭ್ಯವಾಗುತ್ತಿರುವುದು ಇದೇ ಮೊದಲು. ಗ್ರಾಫೈಟ್ ಬ್ಲ್ಯಾಕ್ ಮತ್ತು ಸಿಲ್ವರ್ ಮೆಟಾಲಿಕ್ ಬಣ್ಣದಲ್ಲಿ ಲಭ್ಯವಿದೆ. 5.7 ಇಂಚಿನ ಜಿಪ್ಯಾಡ್ ಜಿ4 ಮೊಬೈಲ್ 1.5 ಗಿಗಾ ಹರ್ಟ್ಸ್ ಕ್ವಾಡ್ ಕೋರ್ ಪ್ರೊಸೆಸರ್ ಹಾಗೂ 4.2 ಜೆಲ್ಲಿಬೀನ್ ಓಎಸ್‌ನಲ್ಲಿ ಇದು ಮಾರುಕಟ್ಟೆಗೆ ಬಂದಿದೆ. 13 ಎಂಪಿ ರೇರ್ ಹಾಗೂ 5 ಎಂಪಿ ಫ್ರಂಟ್ ಕ್ಯಾಮರಾವನ್ನು ಇದು ಹೊಂದಿದೆ. ಎಂ2 ಮೊಬೈಲ್ 5 ಇಂಚಿನ ಸ್ಕ್ರೀನ್ ಹೊಂದಿದ್ದು, ಅದ್ಭುತ ಬ್ಯಾಟರಿ ಸಾಮರ್ಥ್ಯ ಪಡೆದಿದೆ. ಜೆಲ್ಲಿಬೀನ್ ಓಎಸ್‌ನಲ್ಲಿ ಇದು ಲಭ್ಯವಿದೆ. ಜಿಪ್ಯಾಡ್‌ನಂತೆ ಮಲ್ಟಿ-ಟಚ್ ಇಂಟರ್‌ಫೇಸ್‌ನ್ನು ಇದಕ್ಕೂ ಒದಗಿಸಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಎಲ್ಲವನ್ನೂ ತಡೆಯಲು ಸಾಧ್ಯವಿಲ್ಲ': CJP ದೆಹಲಿ ಪ್ರತಿಭಟನೆಗೆ ನಿರ್ಬಂಧ ಕುರಿತು ಕೇಂದ್ರಕ್ಕೆ ಸುಪ್ರೀಂ ಕೋರ್ಟ್ ಚಾಟಿ

'ಮಕ್ಕಳನ್ನು ಪ್ರತಿಭಟನೆಗಳಿಂದ ದೂರವಿಡಿ': ದೆಹಲಿ ಪ್ರತಿಭಟನೆಗೆ ಸಿದ್ಧತೆ, ಮಸೀದಿ ಮೈಕ್‌ನಲ್ಲಿ ಪೊಲೀಸರ ಮನವಿ! Video

ಭಾರತೀಯ ಮೂಲದ ನ್ಯಾಯಶಾಸ್ತ್ರಜ್ಞೆಗೆ ಈ ಬಾರಿಯ ನೊಬೆಲ್ ಶಾಂತಿ ಪ್ರಶಸ್ತಿ; ನವನೇತಮ್ ನವಿ ಪಿಳ್ಳೈಗೆ ಒಲಿದ ನೊಬೆಲ್ ಶಾಂತಿ ಗರಿ

Ramayana: ಕೊನೆಗೂ 'ರಾಮಾಯಣ' ರಿಲೀಸ್ ಡೇಟ್ ಫಿಕ್ಸ್; ದೀಪಾವಳಿಗೂ ಮೊದಲೇ ಬಿಡುಗಡೆ

ಯಮನಿಗೇ ಚಳ್ಳೇಹಣ್ಣು: ಗುದ್ದಿದ ಲಾರಿಯನ್ನೇ ಹಿಡಿದು ಪ್ರಾಣ ಉಳಿಸಿಕೊಂಡ ಯುವತಿ!-ರೋಚಕ Video