ಸಾಂದರ್ಭಿಕ ಚಿತ್ರ 
ವಿಜ್ಞಾನ-ತಂತ್ರಜ್ಞಾನ

ಶೀಘ್ರದಲ್ಲೇ ಹಾರಾಡಲಿದೆ ಕಿಟಕಿ ಇಲ್ಲದ ಪಾರದರ್ಶಕ ವಿಮಾನ

ಕೂತಲ್ಲೇ ಬಾನಂಗಳದ ಹೊರಗೆ...

ಲಂಡನ್: ಕೂತಲ್ಲೇ ಬಾನಂಗಳದ ಹೊರಗೆ ಏನಾಗುತ್ತಿದೆ ಎಂಬ ದೃಶ್ಯವನ್ನು ವಿಮಾನ ಪ್ರಯಾಣಿಕರು ಇನ್ನು ಮುಂದೆ ಕಾಣಬಹುದು.

ಹೌದು. ಇಂತಹ ವಿಮಾನವನ್ನು ಬ್ರಿಟಿಷರು ಅಭಿವೃದ್ಧಿಗೊಳಿಸಿದ್ದಾರೆ. ಕಿಟಕಿ ರಹಿತ ವಿಮಾನವನ್ನು ಬ್ರಿಟಿಷರು ಅಭಿವೃದ್ಧಿಗೊಳಿಸಿದ್ದು, ವಿಮಾನ ಪೂರ್ಣ ಪಾರದರ್ಶಕತೆಯಿಂದ ಕೂಡಿದೆ.

ಅಂತೂ ಪ್ರಯಾಣಿಕರಿಗಾಗಿಯೇ ಇಂತಹ ವಿಮಾನವನ್ನು ಅಭಿವೃದ್ಧಿಗೊಳಿಸಿದಂತಿದೆ. ಈ ನೂತನ ವಿಮಾನವು ಕಿಟಕಿಯ ಬದಲು ಪಾರದರ್ಶಕ ಪರದೆ ಹೊಂದಿದೆ.

ಈ ವಿಮಾನವನ್ನು ಸೆಂಟರ್ ಫಾರ್ ಪ್ರೋಸೆಸ್ ಇನ್ನೋವೇಶನ್‌ನ ಬ್ರಿಟಿಷ್ ವಿಜ್ಞಾನಿಗಳು ಮತ್ತು ಇಂಜಿನಿಯರ್‌ಗಳು ಅಭಿವೃದ್ಧಿಗೊಳಿಸಿದ್ದು, " ದಿ ವಿಂಡೋಲೆಸ್ ಕ್ಯಾಬಿನ್ ವಿತ್ ಎ ವೀವ್‌" ಎಂದು ಹೆಸರಿಟ್ಟಿದ್ದಾರೆ.

ಈ ವಿಮಾನವು ಹೈ ಡೆಫಿನೀಷನ್ ಡಿಸ್‌ಪ್ಲೇ ಟೆಕ್ನಾಲಜಿಯನ್ನು ಹೊಂದಿದ್ದು, ವಿಶ್ವದಲ್ಲೆ ಪ್ರಪ್ರಥಮ ಪಾರದರ್ಶಕ ವಿಮಾನ ಇದಾಗಿದೆ.

ಅಭಿವೃದ್ಧಿಯಾಗಿರುವ ಈ ವಿಮಾನವನ್ನು ಪರೀಕ್ಷಾರ್ಥ ಪ್ರಯೋಗಕ್ಕೆ ಒಳಪಡಿಸಿದ ನಂತರ, ವಿಮಾನ ಹಾರಾಟಕ್ಕೆ ಅವಕಾಶ ನೀಡಲಾಗುವುದು ಎಂದು ಸಂಸ್ಥೆಯ ಅಧಿಕಾರಿಗಳು ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಬಾಲಿವುಡ್ ಹಿರಿಯ ನಟ ನಾನಾ ಪಾಟೇಕರ್ ಇನ್ನಿಲ್ಲ

"ಜೀವಕ್ಕೆ ಕುತ್ತು ತರುವ ಹಾದಿ": ರಷ್ಯಾ ಸೇನಾ ನೇಮಕಾತಿ ಆಮಿಷಗಳಿಗೆ ಬಲಿಯಾಗದಂತೆ ನಾಗರಿಕರಿಗೆ ಭಾರತ ಕಟ್ಟುನಿಟ್ಟಿನ ಸೂಚನೆ, 69 ಭಾರತೀಯರ ಬಿಡುಗಡೆಗೆ ಪಟ್ಟು..!

INDIA ಬ್ಲಾಕ್ ನಲ್ಲಿ ಬಿರುಕು?: ಆಪ್ ಕೈ ಕೊಟ್ಟ ಬೆನ್ನಲ್ಲೇ ಭೋಜನ ಕೂಟಕ್ಕೆ ಸಮಾಜವಾದಿ ಪಕ್ಷ ಗೈರು!

ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಎಳೆದೊಯ್ದು ವಶಕ್ಕೆ ಪಡೆದ ಪೊಲೀಸರು; ಬಸ್‌ನ ಟೈರ್ ಪಂಕ್ಚರ್ ಮಾಡಿದ ಕಾರ್ಯಕರ್ತರು

ಭಾರತವನ್ನು ಜಾಗತಿಕ ಶಕ್ತಿಯಾಗಿಸಿದ್ದು ಮೋದಿ, ಅಂತಹವರ ವಿರುದ್ಧವೇ ಸಂಚು: ಸರ್ಬಿಯಾ ಮಾಜಿ ಅಧ್ಯಕ್ಷ, Video ವೈರಲ್