ಮಾರ್ಸ್ ಆರ್ಬಿಟರಿ ಮಿಷನ್(ಮಾಮ್) ಉಪಗ್ರಹ ಉಡಾವಣೆ ಯಶಸ್ವಿಯಾದ ಬೆನ್ನಲ್ಲೇ ಭಾರತೀಯ ಬಾಹ್ಯಾಕಾಶ ಸಂಶೋದನಾ ಸಂಸ್ಥೆ (ಇಸ್ರೋ) ಎರಡನೇ ಮಾಮ್ ಸಿದ್ಧತೆಗೆ ಸಜ್ಜಾಗಿದೆ.
ಇಸ್ರೋದ ಮಹತ್ವಾಕಾಂಕ್ಷೆಯ ಯೋಜನೆ ಮಾರ್ಸ್ ಆರ್ಬಿಟರಿ ಮಿಷನ್ ಯಶಸ್ವಿಯಾಗಿ ಉಡಾವಣೆಯಾಯಿತು. ಈ ಹಿನ್ನಲೆಯಲ್ಲಿ ಇಸ್ರೋ 2ನೇ ಮಾಮ್ ಸಿದ್ಧತೆಗೆ ಸಜ್ಜಾಗಿದ್ದು, 2018ರ ಗುರಿ ಹೊಂದಿದೆ.
ಇಸ್ರೋದ ಸ್ಯಾಟಲೈಟ್ ಸೆಂಟರ್ ನಿರ್ದೇಶಕ ಎಸ್. ಶಿವಕುಮಾರ್ ಅವರು ಈ ಮಾಹಿತಿಯನ್ನು ನೀಡಿದ್ದಾರೆ. 2018ರೊಳಗೆ ಇಸ್ರೋ ಎರಡನೇ ಮಾಮ್‌ನ್ನು ಉಡಾವಣೆ ಮಾಡುವ ಗುರಿ ಹೊಂದಿದೆ. ಇದಕ್ಕೆ ಸರ್ಕಾರ ಪೂರ್ಣ ಬೆಂಬಲ ನೀಡುವುದಾಗಿ ಹೇಳಿದೆ ಎಂದು ತಿಳಿಸಿದ್ದಾರೆ.
2014 ಸೆಪ್ಟೆಂಬರ್ 24ರಂದು ಮಾಮ್ ಉಪಗ್ರಹವನ್ನು ಉಡಾವಣೆ ಮಾಡಲಾಯಿತು. ಈ ಉಪಗ್ರಹ ಆಘ್ರಾಣಿಸುವ, ರುಚಿಹಿಡಿಯುವ ಮತ್ತು ಮಂಗಳ ವಾತಾವರಣವನ್ನು ಗಮನಿಸುವ ಸಾಧನಗಳನ್ನು ಒಳಗೊಂಡಿದೆ. ದೇಶೀಯವಾಗಿ ನಿರ್ಮಿತ 5 ಪೇಲೋಡ್‌ಗಳನ್ನು ಈ ಉಪಗ್ರಹ ಹೊಂದಿದೆ. ಇದು ಮಂಗಳಗ್ರಹದಲ್ಲಿ ಜೀವಿಗಳಿರುವ ಸಾಧ್ಯತೆ ಕುರಿತು ಪರೀಕ್ಷೆ ನಡೆಸಲಿದೆ.