ವಿಜ್ಞಾನ-ತಂತ್ರಜ್ಞಾನ

ಮೆಸೇಜ್ ಕಳಿಸಿದ ನಂತರವೂ ಡಿಲೀಟ್ ಮಾಡಬಹುದಾದ ಆ್ಯಪ್

ಕಳಿಸಿದ ಮೆಸೇಜನ್ನು ತಕ್ಷಣವೇ ಡಿಲೀಟ್ ಮಾಡಲು ನೆರವಾಗುತ್ತದೆ...

ವಾಷಿಂಗ್ಟನ್: ನೀವು ಯಾರಿಗಾದರು ತಪ್ಪಾಗಿ ಎಸ್ಎಂಎಸ್ ಮೆಸೇಜ್ ಕಳಿಸಿಬಿಟ್ಟು, ಅಯ್ಯೊ ಅವರು ಅದನ್ನು ನೋಡದಿದ್ದರೆ ಸಾಕಪ್ಪ ಎನ್ನುವಂತಾಗಿದ್ದರೆ, ಇದೀಗ ಅದಕ್ಕಾಗಿ ಬಂದಿದೆ ಹೊಸ ಆ್ಯಪ್. 'ಇನ್ವಿಸಿಬಲ್ ಟೆಕ್ಸ್ಟ್' ಆ್ಯಪ್. ಇದು ನೀವು ಕಳಿಸಿದ ಮೆಸೇಜನ್ನು ತಕ್ಷಣವೇ ಡಿಲೀಟ್ ಮಾಡಲು ನೆರವಾಗುತ್ತದೆ.

ಇದು ನೀವು ಕಳಿಸಿದ ಮೆಸೇಜನ್ನು ಅವರು ಇನ್ನೂ ತೆರೆಯದಿದ್ದರೆ, ಅದನ್ನು ಡಿಲೀಟ್ ಮಾಡಲು ಕಳುಹಿಸಿದವರಿಗೆ ಸಹಾಯ ಮಾಡುತ್ತದೆ ಎಂದು ಈವೀಕ್ ನಿಯತಕಾಲಿಕೆ ವರದಿ ಮಾಡಿದೆ.

ಬಳಕೆದಾರರು ಈ ಆ್ಯಪ್ ನ ಮೂಲಕ ವಿಡಿಯೋಗಳನ್ನು, ಟೆಕ್ಸ್ಟ್ ಗಳನ್ನು, ವಾಯ್ಸ್ ಮೆಸೇಜ್ ಗಳನ್ನು ಮತ್ತು ಪಿಕ್ಚರ್ ಮೆಸೇಜ್ ಗಳನ್ನು ಕಳಿಸಬಹುದು ಮತ್ತು ಆ ಮೆಸೇಜ್ ಗಳಿಗೆ ಟೈಮರ್ ಗಳನ್ನು ಸೆಟ್ ಮಾಡಬಹುದು. ಆ ನಿರ್ದಿಷ್ಟ ಸಮಯದೊಳಗೆ ಆ ಮೆಸೇಜನ್ನು ನೋಡದಿದ್ದರೆ ಅದು ಸ್ವಯಂ-ನಾಶವಾಗುತ್ತದೆ.

ಆ್ಯಂಡ್ರಾಯ್ಡ್, ಐಓಎಸ್ ಮತ್ತು ಬ್ಲ್ಯಾಕ್ ಬೆರ್ರಿ ಮೊಬೈಲ್ ಗಳಿಗೆ ಲಭ್ಯವಿರುವ ಈ ಆ್ಯಪ್, ಮೆಸೇಜ್ ಎನ್ಕ್ರಿಪ್ಶನ್ ಮತ್ತು ಡಿವೈಸ್ ಪೇರಿಂಗ್ ಸಂಯೋಜಿಸುವ ತಂತ್ರಜ್ಞಾನವನ್ನು ಬಳಸಿಕೊಳ್ಳುತ್ತದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಬಾಲಿವುಡ್ ಹಿರಿಯ ನಟ ನಾನಾ ಪಾಟೇಕರ್ ಇನ್ನಿಲ್ಲ

"ಜೀವಕ್ಕೆ ಕುತ್ತು ತರುವ ಹಾದಿ": ರಷ್ಯಾ ಸೇನಾ ನೇಮಕಾತಿ ಆಮಿಷಗಳಿಗೆ ಬಲಿಯಾಗದಂತೆ ನಾಗರಿಕರಿಗೆ ಭಾರತ ಕಟ್ಟುನಿಟ್ಟಿನ ಸೂಚನೆ, 69 ಭಾರತೀಯರ ಬಿಡುಗಡೆಗೆ ಪಟ್ಟು..!

CM ಡಿ.ಕೆ. ಶಿವಕುಮಾರ್‌ಗಾಗಿ IndiGo flight ಲೇಟ್? VVIP ಸಂಸ್ಕೃತಿ ವಿರುದ್ಧ ಪ್ರಯಾಣಿಕರ ಆಕ್ರೋಶ..!

ಬರಗಾಲದ ಬೆನ್ನಲ್ಲೇ ಬೆಲೆ ಏರಿಕೆ ಬರೆ: ಮಧ್ಯಮ ವರ್ಗದವರಿಗೆ ಆರ್ಥಿಕ ಹೊಡೆತ, ಅಕ್ಕಿ ದರ ಗಗನಕ್ಕೆ..!

ಬರ ಎಫೆಕ್ಟ್: ರೈತರ ನೆರವಿಗೆ ಧಾವಿಸಿದ ಸರ್ಕಾರ; 1,250 ಕೋಟಿ ರೂ. ಮೊದಲ ಕಂತು ಬಿಡುಗಡೆ..!