ವಿಜ್ಞಾನ-ತಂತ್ರಜ್ಞಾನ

ಮಾರುಕಟ್ಟೆಗೆ ಲಗ್ಗೆಯಿಟ್ಟ ಗೂಗಲ್ 'ಆಂಡ್ರಾಯ್ಡ್ ಒನ್'

ಭಾರತದ ಮಾರುಕಟ್ಟೆಗೆ ಗೂಗಲ್ ತನ್ನ ಅಗ್ಗದ ಸ್ಮಾರ್ಟ್‌ಫೋನ್ ಸರಣಿಯ ಮೊದಲನೆಯ ಆಂಡ್ರಾಯ್ಡ್ ಒನ್ ಅನ್ನು...

ನವದೆಹಲಿ: ಭಾರತದ ಮಾರುಕಟ್ಟೆಗೆ ಗೂಗಲ್ ತನ್ನ ಅಗ್ಗದ ಸ್ಮಾರ್ಟ್‌ಫೋನ್ ಸರಣಿಯ ಮೊದಲನೆಯ ಆಂಡ್ರಾಯ್ಡ್ ಒನ್ ಅನ್ನು ಸೋಮವಾರ ಬಿಡುಗಡೆ ಮಾಡಿದ್ದು, ಆಂಡ್ರಾಯ್ಡ್‌ ಒನ್‌ ಫೋನ್‌ 6,399 ರು.ಗಳಿಗೆ ದೊರೆಯಲಿದೆ.


ಸ್ವದೇಶಿ ಮೊಬೈಲ್ ತಯಾರಕರಾದ ಸ್ಪೈಸ್, ಮೈಕ್ರೋಮ್ಯಾಕ್ಸ್ ಮತ್ತು ಕಾರ್ಬನ್ ಕಂಪನಿಗಳ ಸಹಯೋಗದೊಂದಿಗೆ ಗೂಗಲ್ ಈ ಸಾಧನಗಳನ್ನು ಬಿಡುಗಡೆ ಮಾಡಿದ್ದು, ಸದ್ಯ ಆನ್‌ಲೈನ್‌ನಲ್ಲಿ ಈ ಸಾಧನಗಳು ಲಭ್ಯವಿದೆ.

ಆನ್‌ಲೈನ್ ಮಾರಾಟ ತಾಣಗಳಾದ ಫ್ಲಿಪ್‌ಕಾರ್ಟ್, ಅಮೆಜಾನ್ ಮತ್ತು ಸ್ನಾಪ್‌ಡೀಲ್ ಹಾಗೂ ರಿಲಯನ್ಸ್ ಡಿಜಿಟಲ್, ಕ್ರೋಮಾ ಮತ್ತು ದಿ ಮೊಬೈಲ್ ಸ್ಟೋರ್ ಮಳಿಗೆಗಳ ಮೂಲಕ ಆಂಡ್ರಾಯ್ಡ್ ಒನ್ ಸ್ಮಾರ್ಟ್‌ಫೋನ್‌ಗಳು ಮಾರಾಟವಾಗುತ್ತಿವೆ.

'ಆಂಡ್ರಾಯ್ಡ್‌ ಒನ್‌' ಯೋಜನೆ ಮೂಲಕ ಸ್ಥಳೀಯ ಮೊಬೈಲ್‌ ಉತ್ಪಾದಕ ಕಂಪನಿಗಳ ಜತೆಗೂಡಿ ಅಗ್ಗದ ಬೆಲೆಗೆ ಉತ್ತಮ ಗುಣಮಟ್ಟದ ಸ್ಮಾರ್ಟ್‌ಫೋನ್‌ಗಳನ್ನು ಗೂಗಲ್‌ ಮಾರುಕಟ್ಟೆಗೆ ತಂದಿದೆ. ಗೂಗಲ್‌ ತನ್ನ ಪಾಲುದಾರ ಕಂಪನಿಗಳಿಗೆ ಹಾರ್ಡ್‌ವೇರ್‌ ರೆಫರೆನ್ಸ್‌ ಬೋರ್ಡ್‌ಗಳು ಮತ್ತು ಸಾಫ್ಟ್‌ವೇರ್‌ ಬೆಂಬಲ ನೀಡುತ್ತದೆ.




Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಎಳೆದೊಯ್ದು ವಶಕ್ಕೆ ಪಡೆದ ಪೊಲೀಸರು; ಬಸ್‌ನ ಟೈರ್ ಪಂಕ್ಚರ್ ಮಾಡಿದ ಕಾರ್ಯಕರ್ತರು

We’re getting married! ನಾವು ಮದುವೆ ಆಗುತ್ತಿದ್ದೇವೆ: ಕೊನೆಗೂ ಭಾವಿ ಪತಿ ಜತೆ ಗುಡ್ ನ್ಯೂಸ್ ನೀಡಿದ ನಟಿ ಸ್ಪಂದನಾ

'ನನ್ನ ಚೋಲಿ ಬಗ್ಗೆ 6 ಜನರಿಂದ ಪ್ಯಾನಲ್ ಡಿಸ್ಕಷನ್, ಸಂಸ್ಕೃತಿ ಬಟ್ಟೆಯಲ್ಲ, ಹೃದಯದಲ್ಲಿದೆ'; ರಾಖಿ ಜಾಹೀರಾತು ವಿವಾದ ಬಗ್ಗೆ ಮೌನ ಮುರಿದ ನಟಿ Kriti Sanon

ಜಿಲ್ಲಾ, ತಾಲೂಕು ಪಂಚಾಯ್ತಿ ಎಲೆಕ್ಷನ್'ಗೆ ಕೊನೆಗೂ ಮುಹೂರ್ತ ಫಿಕ್ಸ್; ನಾಳೆಯೇ ಮೀಸಲಾತಿ ಪಟ್ಟಿ ಪ್ರಕಟ

KPSC ನೇಮಕಾತಿ ಹಗರಣ: ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್, ಸದಸ್ಯೆ ಗೀತಾ 13 ದಿನ ED ಕಸ್ಟಡಿಗೆ