ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ವಿಜ್ಞಾನ-ತಂತ್ರಜ್ಞಾನ

ಮಂಗಳ ಗ್ರಹದಲ್ಲಿ 'ಟ್ರಾಫಿಕ್ ಸಿಗ್ನಲ್'?

ಮಂಗಳ ಗ್ರಹದಲ್ಲಿ ಏಲಿಯನ್ ಗಳು ರಸ್ತೆ ದಾಟಲು ಟ್ರಾಫಿಕ್ ಸಿಗ್ನಲ್...

webmaster
Updated On : 26 Sept 2014, 2:26 am

ನ್ಯೂಯಾರ್ಕ್: ಮಂಗಳ ಗ್ರಹದಲ್ಲಿ ಏಲಿಯನ್ ಗಳು ರಸ್ತೆ ದಾಟಲು ಟ್ರಾಫಿಕ್ ಸಿಗ್ನಲ್ ಬಳಸುತ್ತಿವೆಯೇ? ನಾಸಾದ ಕ್ಯೂರಿಯಾಸಿಟಿ ಮಾರ್ಸ್ ರೋವರ್ ಮಂಗಳ ಗ್ರಹದ ಪ್ರದೇಶದಲ್ಲಿ 'ಟ್ರಾಫಿಕ್ ಸಿಗ್ನಲ್'ಅನ್ನು ಹೋಲುವಂತಹ ಚಿತ್ರವೊಂದನ್ನು ತೆಗೆದಿದೆ.

ಬ್ರಿಟಿಷ್ ಯುಎಫ್ಓ ಆಸಕ್ತ ಜೋಸೆಫ್ ವೈಟ್ ಎಂಬುವವರು ಈ 'ಟ್ರಾಫಿಕ್ ಸಿಗ್ನಲ್'ಅನ್ನು ಗುರುತಿಸಿದ್ದಾರೆ. ಕ್ಯೂರಿಯಾಸಿಟಿ ತನ್ನ ಸುತ್ತಾಟದ ಸಂರ್ಧದಲ್ಲಿ ಈ ಫೋಟೊ ತೆಗೆದಿದೆ.

ನಾನು ಮೊದಲಿನಿಂದಲೂ ನಾಸಾದ ಚಿತ್ರಗಳನ್ನು ಗಮನಿಸುತ್ತಿದ್ದೇನೆ ಮತ್ತು ಮತ್ತು ಪ್ರತಿದಿನ ನಾಸಾದ ವೆಬ್ ಸೈಟ್ ನಿಂದ ಅವನ್ನು ತೆಗೆದುಕೊಳ್ಳುತ್ತಿದ್ದೇನೆ ಎಂದು ವೆಸ್ಟರ್ನ್ ಡೇಲಿ ಪ್ರೆಸ್ ಗೆ ವೈಟ್ ಹೇಳಿದ್ದಾರೆ.

ಈ ಚಿತ್ರವನ್ನು ನೋಡಿದಾಗ ನನಗೆ ಇದು ಸ್ವಲ್ಪ ವಿಚಿತ್ರವಾಗಿಯೂ ಆಸಕ್ತಿದಾಯವಾಗಿಯೂ ಕಂಡುಬಂತು ಎಂದು ಅವರು ಹೇಳಿದ್ದಾರೆ.

ಸದ್ಯಕ್ಕೆ ನಾವೆಲ್ಲ ನಾಸಾದ ಪ್ರತಿಕ್ರಿಯೆಗಾಗಿ ಕಾಯಬೇಕು, ಅಲ್ಲಿಯವರಗೆ ಇದು ಮತ್ತೊಂದು ಬಂಡೆ ಎಂದುಕೊಳ್ಳೋಣ ಎಂದು ವರದಿ ಹೇಳಿದೆ.

ಕೃಪೆ: ಐಎಎನ್ಎಸ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement