ನವದೆಹಲಿ: ಪ್ರಧಾನಿ ಮೋದಿ ಅವರ ಮೇಕ್ ಇನ್ ಇಂಡಿಯಾ ಮಹತ್ವದ ಯೋಜನೆಯಡಿ ಚೀನಾದ ಕ್ಸಿಯಾಮಿ ಕಂಪನಿ ಭಾರತೀಯರಿಗಾಗಿ ಸ್ಮಾರ್ಟ್ ಫೋನ್ ಅನ್ನು ತಯಾರಿಸಿದೆ. ಎಮ್ ಐ4ಐ ಎಂಬ ಸ್ಮಾರ್ಟ್ ಫೋನ್ ಅನ್ನು ತಯಾರಿಸಿದ್ದು ದರ ಕೇವಲ ರು.12,999 ಆಗಿದೆ. ಈ ಫೋನ್ ತಯಾರಿಸಲು 15 ತಿಂಗಳು ಹಿಡಿದೆ. ಭಾರತೀಯ ಗ್ರಾಹಕರ ಅಗತ್ಯತೆ ಗಮನಿಸಿ ತಯಾರಿಸಲಾಗಿದೆ ಎಂದು ಕ್ಸಿಯಾಮಿ ಉಪಾಧ್ಯಕ್ಷ ಹೂಗೋ ಬುರ್ರಾ ತಿಳಿಸಿದ್ದಾರೆ.
ವೈಶಿಷ್ಟ್ಯಗಳು
- ಪಾಲಿಕಾರ್ಬೋನೇಟ್ ಮೇಲ್ಮೈ
- ಸ್ಟೈನ್‍ಲೆಸ್ ಸ್ಟೀಲ್ ಬಟನ್
- 5 ಇಂಚು, 1080ಪಿ ಡಿಸ್‍ಪ್ಲೇ
- ಸ್ನೇಪ್‍ಡ್ರಾಗನ್ 615 ಸೆಕೆಂಡ್
ಜೆನ್ 64 ಬಿಟ್ 8 ಕೋರ್ ಪ್ರೊಸೆಸರ್
- ಕ್ಯಾಮೆರಾ 13 ಎಂಪಿ, ಫ್ರಂಟ್ ಕ್ಯಾಮೆರಾ 5 ಎಂಪಿ
- 2 ಜಿಬಿ ರ್ಯಾಮ್, 16 ಜಿಬಿ ಇಂಟರ್ನಲ್ ಮೆಮೋರಿ, 1.5 ದಿನ ಬ್ಯಾಟರಿ