ಭಾರತದಲ್ಲಿ ಗ್ರಾಹಕರಿಗಾಗಿ ಇದೇ ಮೊದಲ ಬಾರಿಗೆ ಮೊಟೊ ಕೇರ್ ಆರಂಭಿಸಿದೆ. ಬೆಂಗಳೂರಿನಲ್ಲಿ ಇದರ ಶಾಖೆ ಜಯನಗರದ 4ನೇ ಬ್ಲಾಕ್‍ನಲ್ಲಿದೆ.
ಭಾರತದ ಮೊಬೈಲ್ ಜಗತ್ತಿನಲ್ಲಿ ಮೊಟೊರೋಲಾ' ದ್ದು ತುಂಬಾ ಪರಿಚಿತ ಹೆಸರು. ಆಧರೆ, ಇದವರೆಗೆ ಭಾರತದಲ್ಲಿ ಅದು ಒಂದೇ ಒಂದು ಗ್ರಾಹಕ ಕೇಂದ್ರವನ್ನು ತೆರೆದಿಲ್ಲ. ಇದರಿಂದ ತೀರ್ವ ಅನಾನುಕೂಲವಾಗುತ್ತಿದೆ ಎಂಬ ದೂರು ಗ್ರಾಹಕರದ್ದಾಗಿತ್ತು. ಈ ಕಾರಣಕ್ಕೆ ಹಲವು ಮೊಟೊ ಮೊಬೈಲ್ ಕೊಂಡುಕೊಳ್ಳಲು ಹಿಂದೇಟು ಹಾಕುತ್ತಿದ್ದರು. ಈಗ ಆ ತಲೆನೋವು ಇಲ್ಲ. ಗ್ರಾಹಕರಿಗೆ ಉತ್ತಮ ಸೇವೆ ಮತ್ತು ಸ್ಪಂದನೆಗಾಗಿ ಭಾರತದಲ್ಲಿ ಮೊದಲ ಮೊಟೊ ಕೇರ್ ಕೇಂದ್ರವನ್ನು ಆರಂಭಿಸಿದೆ.
ನಮ್ಮ ಬೆಂಗಳೂರಿನಲ್ಲೂ ಗ್ರಾಹಕ ಕೇಂದ್ರ ಸ್ಥಾಪನೆಯಾಗಿದೆ. ಇದರಿಂದ ಗ್ರಾಹಕರಿಗೆ ನೇರವಾಗಿ ಮೊಬೈಲ್ ಸೆಟ್ ಗಳನ್ನು ನೋಡುವ ಅವಕಾಷ ಲಭಿಸಲಿದ್ದು, ಫೀಚರ್ ಗಳು, ನೇರ ಅನುಭವ, ಫೋಟೋದಲ್ಲಿನ ಸ್ಪಷ್ಟತೆ ಹಾಗೂ ಟಚ್ ಸ್ಕ್ರೀನ್ ನ ಹಿತ ಹೇಗಿದೆ ಎಂಬ ಬಗ್ಗೆ ಸ್ಥಳದಲ್ಲೇ ಹೋಗಿ ಅನುಭವ ಪಡೆದುಕೊಳ್ಳಬಹುದು. ಇದರಿಂದ ಮೊಬೈಲ್ ಬೇಕೇ ಬೇಡವೇ ಎಂದು ನಿರ್ಧರಿಸಲು ಸಹಾಯಕ. ಈ ಕೇಂದ್ರ ತೆರೆಯಲು ಪ್ರಮುಖ ಕಾರಣ ಭಾರತೀಯ ಮಾರುಕಟ್ಟೆಯಲ್ಲಿ ಮೊಬೈಲ್ ಗೆ ಇರುವ ಬೇಡಿಕೆ. ಇದಕ್ಕಾಗಿಯೇ ಜಯನಗರ 4 ನೇ ಬ್ಲಾಕ್ ನಲ್ಲಿ ಮೊಟೊಕೇರ್ ತೆರೆಯಲಾಗಿದೆ.
ಏನೇನು ಸೇವೆ?
ಉತ್ತಮ ಸೇವೆ ನೀಡುವುದೇ ತನ್ನ ಗುರಿ ಎಂದು ಹೇಳಿಕೊಂಡಿರುವ ಮೊಟೊರೋಲಾ ಬೇಕಾದ ಸಿಬ್ಬಂದಿಯನ್ನು ನೇಮಿಸಿಕೊಂಡಿದೆ. ಸಾಫ್ಟ್ ವೇರ್ ಅಪ್ ಡೇಟ್, ಹಾರ್ಡ್ ವೇರ್ ರಿಪೇರಿ ಮತ್ತು ಗ್ರಾಹಕರ ಸಮಸ್ಯೆಗಳನ್ನು ಇಲ್ಲಿ ಬಗೆಹರಿಸುವ ವ್ಯವಸ್ಥೆ ಮಾಡಲಾಗಿದೆ.
ಪ್ರದರ್ಶನ
ಮೊಟೊ ಎಕ್ಸ್ ನ ಎಲ್ಲ ಆವೃತ್ತಿ, ಮೊಟೊ ಜಿ, ಮೊಟೊ ಇ, ಮೊಟೊ ಟರ್ಬೊ, ಮೊಟೊ ನಕ್ಸಸ್ ಮತ್ತು ಮೊಟೊ 360 ಸೇರಿದಂತೆ ಎಲ್ಲ ಉತ್ಪನ್ನಗಳ ಪ್ರದರ್ಶನ ಇಲ್ಲಿರುತ್ತವೆ. ಫ್ಲಿಪ್ ಕಾರ್ಟ್ ನಲ್ಲೂ ಮೊಬೈಲ್ ಬುಕ್ಕಿಂಗ್ ವ್ಯವಸ್ಥೆ ಇದೆ.
ಹೆಚ್ಚುವರಿ ಸೌಲಭ್ಯ
ಮೊಟೊಕೇರ್ ಆ್ಯಪ್ ಅಥವಾ ಗ್ರಾಹಕ ಸಹಾಯವಾಣಿಯೂ ಇದೆ. ಅಲ್ಲದೆ, ಮೊಟೊ ಕೇರ್ ಆನ್ ವೀಲ್ಸ್ ಪ್ರಾಯೋಗಿಕ ಯೋಜನೆಯನ್ನು ದೆಹಲಿಯಲ್ಲಿ ಪ್ರಾರಂಭಿಸಲಾಗಿದೆ. ಯಾವುದೇ ಗ್ರಾಹಕ ಮೊಟೊ ಉತ್ಪನ್ನ (ಮೊಬೈಲ್ ) ಖರೀದಿಸಿದ 30 ದಿನಗಳೊಳಗೆ ಸಮಸ್ಯೆ ಬಂದಲ್ಲಿ, ಕರೆ ಮಾಡಿದರೆ ಸಾಕು...ಮೊಟೊ ವ್ಯಾನ್ ಗಳು ಆ ಗ್ರಾಹಕನ ಮನೆ ಬಾಗಿಲಿಗೆ ಬರಲಿವೆ. ಸಮಸ್ಯೆ ಬಗ್ಗೆ ತಿಳಿದು ಬಗೆಹರಿಸುತ್ತದೆ. ಅಲ್ಲದೆ, ಆನ್ ಲೈನ್ ಪೋರ್ಟಲ್ ಮೂಲಕ ಸೇವೆ ನೀಡುತ್ತಿದೆ. ಭಾರದಲ್ಲಿ 150 ಕ್ಕೂ ಹೆಚ್ಚು ರಿಪೇರಿ ಕೇಂದ್ರಗಳನ್ನು ತೆರೆಯಲಾಗಿದ್ದು,
ಪೂರ್ತಿ ವಿವರ ನೋಡಲು ವೆಬ್ ಸೈಟ್ - motorola.com ಗೆ ಸಂಪರ್ಕಿಸಿ
ಬೆಂಗಳೂರಿನ ಮೊಟೊ ಕೇರ್ ಸೆಂಟರ್ ವಿಳಾಸ -ಮೊಟೊಕೇರ್ ಸೆಂಚರ್, ವಿಜಯಾ ಜ್ಯೂನಿಯರ್ ಕಾಲೇಜ್, ಜಯನಗರ 4 ನೇ ಬ್ಲಾಕ್, 11 ನೇ ಮುಖ್ಯ ರಸ್ತೆ, ಬೆಂಗಳೂರು.