ಮಂಗಳಗ್ರಹ 
ವಿಜ್ಞಾನ-ತಂತ್ರಜ್ಞಾನ

ಮಂಗಳನಲ್ಲಿನ ಕಣಿವೆಯ 3ಡಿ ಫೋಟೋಗಳನ್ನು ಇಸ್ರೋಗೆ ಕಳಿಸಿದ ಮಾಮ್

ಭಾರತೀಯ ಬಾಹ್ಯಾಕಾಶ ಸಂಶೋಧನಾ ಕೇಂದ್ರದ ಮಹತ್ವಾಕಾಂಕ್ಷಿಯ ಮಾರ್ಸ್ ಆರ್ಬಿಟರ್ ಮಿಷನ್ ಅಥವಾ ಮಂಗಳಯಾನ, ಮಂಗಳನಲ್ಲಿನ ಕೆಲವೊಂದು 3ಡಿ...

ನವದೆಹಲಿ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಕೇಂದ್ರದ ಮಹತ್ವಾಕಾಂಕ್ಷಿಯ ಮಾರ್ಸ್ ಆರ್ಬಿಟರ್ ಮಿಷನ್ ಅಥವಾ ಮಂಗಳಯಾನ, ಮಂಗಳನಲ್ಲಿನ ಕೆಲವೊಂದು 3ಡಿ ಚಿತ್ರಗಳನ್ನು ಇಸ್ರೋ ಸಂಸ್ಥೆಗೆ ಕಳುಹಿಸಿದೆ.
ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆಯಲ್ಲಿ ಮಂಗಳಯಾನ ಮಂಗಳನಲ್ಲಿನ 5 ಸಾವಿರ ಕಿಮೀ ಉದ್ದದ ಕಣಿವೆಯ ಫೋಟೋವನ್ನು ಭೂಮಿಗೆ ರವಾನಿಸಿದೆ. ಮಂಗಳಯಾನದಲ್ಲಿ ಅಳವಡಿಸಿರುವ ಮಾರ್ಸ್ ಕಲರ್ಸ್ ಕ್ಯಾಮೆರಾ ಮೂರು ವಿಭಿನ್ನ ರೀತಿಯ 3ಡಿ ಚಿತ್ರಗಳನ್ನು ಸೆರೆಹಿಡಿದಿದೆ. 
ಜುಲೈ 19 ರಂದು ಮಂಗಳನಿಂದ 1857 ಕಿಮೀ ದೂರದಲ್ಲಿದ್ದ ವೇಳೆ ಈ ಫೋಟೋವನ್ನು ಸೆರೆ ಹಿಡಿದಿದೆ. ಇದೇ ವರ್ಷದ ಆರಂಭದಲ್ಲಿ ಮಂಗಳಯಾನ ಹಲವು ಚಿತ್ರಗಳನ್ನು ಭೂಮಿಗೆ ರವಾನಿಸಿತ್ತು. 
ಕೇವಲ 450 ಕೋಟಿ ರುಪಾಯಿ ವೆಚ್ಚದಲ್ಲಿ ನಿರ್ಮಿಸಲಾಗಿದ್ದ ಮಾರ್ಸ್ ಆರ್ಬಿಟರ್ ಮಿಷನ್ 2013 ನವೆಂಬರ್ 5ರಂದು ಆಂಧ್ರಪ್ರದೇಶದ ಸತೀಶ್ ಧವನ್ ಉಡಾವಣಾ ಕೇಂದ್ರದಿಂದ ಉಡಾವಣೆಯಾದ ಮಾಮ್ 2014 ಸೆಪ್ಟೆಂಬರ್ 24ರಂದು ಯಶಸ್ವಿಯಾಗಿ ಮಂಗಳ ಗ್ರಹದ ಕಕ್ಷೆಗೆ ಸೇರಿತು. ಆ ಮೂಲಕ ಇಡೀ ವಿಶ್ವದ ಯಾವುದೇ ದೇಶ ಮಾಡದ ಸಾಧನೆಯನ್ನು ಇಸ್ರೋ ಮಾಡಿ ತೋರಿಸಿತ್ತು. ಮೊದಲ ಯತ್ನದಲ್ಲೇ ಮಂಗಳಯಾನ ಯಶಸ್ವಿಗೊಳಿಸಿದ ಏಕೈಕ ರಾಷ್ಟ್ರವೆಂಬ ಖ್ಯಾತಿ ಭಾರತಕ್ಕೆ ಲಭಿಸಿತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

TMCಗೆ ಸೆಡ್ಡು ಹೊಡೆದ ಬಂಡಾಯ ಸಂಸದರಿಗೆ ಶಾಕ್‌: 20 ಮಂದಿಗೆ ಲೋಕಸಭಾ ಸಚಿವಾಲಯ ನೋಟಿಸ್‌, 7 ದಿನಗಳೊಳಗೆ ಉತ್ತರಿಸುವಂತೆ ಸೂಚನೆ..!

ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಮಹತ್ತರ ಬದಲಾವಣೆ ಸಾಧ್ಯತೆ; ನಾಲ್ವರು ಮುಖ್ಯಮಂತ್ರಿಗಳಿಗೆ ಸ್ಥಾನ?

ಇರಾನ್‌ ತೈಲ ವಹಿವಾಟಿಗೆ ಅಮೆರಿಕಾ ಬ್ರೇಕ್: ಭಾರತದ 4 ಕಂಪನಿಗಳು ಕಪ್ಪುಪಟ್ಟಿಗೆ, 3 ಪ್ರಜೆಗಳ ಮೇಲೂ ನಿರ್ಬಂಧ..!

"ಮದುವೆ ಅಂದ್ರೆ ಗುಲಾಮಗಿರಿಯಲ್ಲ, ಮನೆಗೆಲಸ ಮಾಡು-ಅತ್ತೆ-ಮಾವನ ನೋಡ್ಕೋ ಅನ್ನೋಕೆ ಗಂಡನಿಗೆ ಹಕ್ಕಿಲ್ಲ": ಹೈಕೋರ್ಟ್ ಮಹತ್ವದ ತೀರ್ಪು..!

ಬಿಡದಿ ಟೌನ್‌ಶಿಪ್‌ ಯೋಜನೆ: ರೈತರ ಭೂಮಿ ಕಸಿಯಲ್ಲ, denotification ಮಾಡಲ್ಲ- ಸಿಎಂ ಡಿಕೆ. ಶಿವಕುಮಾರ್ ಸ್ಪಷ್ಟನೆ