ಚೆನ್ನೈ ಜಲಪ್ರಳಯದ ಚಿತ್ರ ಸೆರೆ ಹಿಡಿದ ನಾಸಾ
ಚೆನ್ನೈ ಜಲಪ್ರಳಯಕ್ಕೆ ಕಾರಣವಾದ ಮಳೆಯ ವಿವರಗಳನ್ನು ಮತ್ತು ಭೂಪಟಗಳನ್ನು ನಾಸಾ ಬಹಿರಂಗಪಡಿಸಿದೆ. ವಿಶೇಷವಾಗಿ ರಚಿಸಿದ ಅನಿಮೇಷನ್ ಭೂಪಟ...
ವಾಷಿಂಗ್ಟನ್ : ಚೆನ್ನೈ ಜಲಪ್ರಳಯಕ್ಕೆ ಕಾರಣವಾದ ಮಳೆಯ ವಿವರಗಳನ್ನು ಮತ್ತು ಭೂಪಟಗಳನ್ನು ನಾಸಾ ಬಹಿರಂಗಪಡಿಸಿದೆ. ವಿಶೇಷವಾಗಿ ರಚಿಸಿದ ಅನಿಮೇಷನ್ ಭೂಪಟವನ್ನು ಕೆಲವು ದಿನಗಳ ಹಿಂದೆ ನಾಸಾ ಅರ್ಥ್ ಅಬ್ಸರ್ವೇಟರಿ ಬ್ಲಾಗ್‌ನಲ್ಲಿ ಪ್ರಕಟಿಸಿತ್ತು.
ಡಿಸೆಂಬರ್ 1-2 ರಂದು ಸುರಿದ ಮಳೆಯ ತೀವ್ರತೆ ಮತ್ತು ವ್ಯಾಪ್ತಿಯನ್ನು ಈ ಭೂಪಟದಲ್ಲಿ ಕಾಣಬಹುದು. 1901ರ ನಂತರ ಚೆನ್ನೈಯಲ್ಲಿ ಸುರಿದ ಶತಮಾನದ ಮಹಾಮಳೆಯಾಗಿದೆ ಇದು. ಉಪಗ್ರಹಗಳ ಮೂಲಕ ನಾಸಾ ಕ್ಲಿಕ್ಕಿಸಿದ ಫೋಟೋಗಳನ್ನು ಜೋಡಿಸಿ ಆನಿಮೇಷನ್ ಮ್ಯಾಪ್ ರಚಿಸಲಾಗಿದೆ.
ಈಶಾನ್ಯ ತೀರಗಳಲ್ಲಿ ಈ ದಿವಸಗಳಲ್ಲಿ 500 ಮಿ.ಮಿ ಮಳೆ ಸುರಿದಿತ್ತು ಎಂದು ನಾಸಾ ಹೇಳಿದೆ. ಮಾತ್ರವಲ್ಲದೆ ಹೆಚ್ಚಿನ ಮಳೆ ಸುರಿದು ಅನಾಹುತ ಸಂಭವಿಸುವ ಸಾಧ್ಯತೆಯಿದೆ ಎಂಬ ಮುನ್ನೆಚ್ಚರಿಕೆಯನ್ನೂ ನೀಡಿತ್ತು.
ಈ ನಿಟ್ಟಿನಲ್ಲಿ ಚೆನ್ನೈನಲ್ಲಿರುವ ಅಮೆರಿಕದ ಕಂಪನಿಗಳೆಗೆ ಮುನ್ನೆಚ್ಚರಿಕೆನ್ನೂ ನೀಡಲಾಗಿತ್ತು. ಮುನ್ನೆಚ್ಚರಿಕೆ ಹಿನ್ನೆಲೆಯಲ್ಲಿ ಕಂಪನಿಗಳು ತಮ್ಮ ನೌಕರರನ್ನು ತಾತ್ಕಾಲಿಕವಾಗಿ ಬೆಂಗಳೂರಿಗೆ ವರ್ಗಾವಣೆಯನ್ನೂ ಮಾಡಿದ್ದವು.
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.