ಸಾಂದರ್ಭಿಕ ಚಿತ್ರ 
ವಿಜ್ಞಾನ-ತಂತ್ರಜ್ಞಾನ

ರಾಕೆಟ್ ಅನ್ನು ಯಶಸ್ವಿಯಾಗಿ ಭೂಮಿಗಿಳಿಸುವ ಪ್ರಯೋಗ!

ಗಗನಕ್ಕೆ ಹಾರಿಬಿಡುವ ರಾಕೆಟ್ ಅನ್ನು...

-ಬಾಹ್ಯಾಕಾಶ ಸಂಶೋಧನಾ ಕ್ಷೇತ್ರಕ್ಕೆ ಹೊಸ ದಿಕ್ಕು ನೀಡಲಿರುವ ಸ್ಪೇಸ್ ಎಕ್ಸ್

ವಾಷಿಂಗ್ಟನ್:
ಗಗನಕ್ಕೆ ಹಾರಿಬಿಡುವ ರಾಕೆಟ್ ಅನ್ನು ಭೂಮಿ ಮೇಲೆ ಯಶಸ್ವಿಯಾಗಿ ಇಳಿಸುವ ಮಹತ್ವದ ಪರೀಕ್ಷೆಯೊಂದು ಮಂಗಳವಾರ ನಡೆಯಲಿದೆ.

ರಾಕೆಟ್‌ಗಳನ್ನು ನಿರ್ಮಿಸುವ ಖಾಸಗಿ ಸಂಸ್ಥೆ ಸ್ಪೇಸ್ ಎಕ್ಸ್ ಈ ಪ್ರಯೋಗ ನಡೆಸಲಿದೆ. ಒಂದು ವೇಳೆ ಈ ಪ್ರಯೋಗ ಯಶಸ್ವಿಯಾದರೆ ಬಾಹ್ಯಾಕಾಶ ಸಂಶೋಧನಾ ಕ್ಷೇತ್ರದಲ್ಲಿ ಹೊಸ ಇತಿಹಾಸ ದಾಖಲಾಗಲಿದೆ.

ಸಾಮಾನ್ಯವಾಗಿ ಉಪಗ್ರಹವನ್ನು ಹೊತ್ತು ಗಗನಕ್ಕೆ ನೆಗೆಯುವ ರಾಕೆಟ್ ನಂತರ ಸುಟ್ಟುಭಸ್ಮವಾಗುತ್ತದೆ. ಆದರೆ, ಸ್ಪೇಸ್ ಎಕ್ಸ್ ಈ ರಾಕೆಟ್‌ಗಳನ್ನು ಯಶಸ್ವಿಯಾಗಿ ಭೂಮಿ ಮೇಲೆ ಇಳಿಸಿ ಅವುಗಳನ್ನು ಮುಂದಿನ ಯೋಜನೆಗೆ ಮರುಬಳಕೆ ಮಾಡಿಕೊಳ್ಳುವ ಯೋಜನೆ ಹಾಕಿಕೊಂಡಿದೆ.

ಈ ಮೂಲಕ ಉಪಗ್ರಹ ಉಡ್ಡಯನ ಯೋಜನೆಗೆ ತಗಲುವ ವೆಚ್ಚವನ್ನು ಕಡಿಮೆಗೊಳಿಸುವುದು ಕಂಪನಿ ಗುರಿ. ಇದಕ್ಕಾಗಿ ಪ್ಲೋರಿಡಾದ ಕೇಪ್ ಕೆನವೆರಲ್ ಏರ್‌ಫೋರ್ಸ್ ಕೇಂದ್ರದಲ್ಲಿ ಫಾಲ್ಕೋನ್-9 ರಾಕೆಟ್ ಅನ್ನು ಉಡ್ಡಯನ ಮಾಡಲಾಗುವುದು. ಹಾಗೆ ಹಾರಿ ಬಿಡುವ ರಾಕೆಟನ್‌ನ ಮೊದಲ ಹಂತ ಭೂಮಿ ಮೇಲೆ ಯಶಸ್ವಿಯಾಗಿ ಇಳಿದರೆ, ಎರಡನೇ ಹಂತವು ಪೇಲೋಡ್‌ಗಳನ್ನು ಭೂಕಕ್ಷೆಯಲ್ಲಿ ಕೂರಿಸುವ ಕಾರ್ಯವನ್ನು ಮುಂದುವರಿಸಲಿವೆ.

ತೇಲುವ ವೇದಿಕೆ: ಸಾಮಾನ್ಯವಾಗಿ ರಾಕೆಟ್‌ನ ಮೊದಲ ಹಂತ 14 ಮಹಡಿಗಳ ಕಟ್ಟದಷ್ಟು ಎತ್ತರವಿರುತ್ತದೆ. ಹಾಗಾಗಿ ಇಷ್ಟೊಂದು ಗಾತ್ರದ ರಾಕೆಟ್‌ನ ಮೊದಲ ಭಾಗ ಯಶಸ್ವಿಯಾಗಿ ಇಳಿಯಲು ಸಮುದ್ರದಲ್ಲಿ ತೇಲುವ ವೇದಿಕೆಯೊಂದನ್ನು ನಿರ್ಮಿಸಲಾಗದೆ.

ಇದರ ಗಾತ್ರ 300 ಅಡಿ ಉದ್ದ ಹಾಗೂ 170 ಅಡಿ ಅಗಲ. ಅಗಸದಿಂದ ಕೆಳಗೆ ಬೀಳುವ ರಾಕೆಟ್‌ನ ಮೊದಲ ಭಾಗ ಸಮುದ್ರದಲ್ಲಿ ಇಳಿಯುವಾಗಿ ಯಾವುದೇ ಹಾನಿಯಾಗದಂತೆ ಈ ವೇದಿಕೆ ನೋಡಿಕೊಳ್ಳಲಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಾಜ್ಯ ಸರ್ಕಾರಕ್ಕೆ 'ಸ್ಟಿಂಗ್ ಆಪರೇಷನ್' ಆತಂಕ: ಟ್ರ್ಯಾಪ್‌ಗೆ ಯತ್ನ ನಡೆಯುತ್ತಿದೆ, ಹುಷಾರಾಗಿರಿ ; 5 ಸಚಿವರಿಗೆ ಡಿಕೆಶಿ ಎಚ್ಚರಿಕೆ ಸಂದೇಶ

‘ವೈಯಕ್ತಿಕ ಮಹತ್ವಾಕಾಂಕ್ಷೆ ಅಲ್ಲ, ಧ್ಯೇಯಕ್ಕಾಗಿ ಬದುಕಿದ್ದೇನೆ, ದೇಶದ ಜನತೆಗೆ ತಲೆಬಾಗುತ್ತೇನೆ’: ಆಡಳಿತದಲ್ಲಿ 25 ವರ್ಷ ಪೂರೈಸಿದ ಪ್ರಧಾನಿ ಮೋದಿ ಮಾತು; Video

ರಷ್ಯಾ ಕರಾವಳಿಯಲ್ಲಿ ಡ್ರೋನ್ ದಾಳಿ: ಹೊತ್ತಿ ಉರಿದ ತೈಲ ಟ್ಯಾಂಕರ್‌, 23 ಭಾರತೀಯ ಸಿಬ್ಬಂದಿ ಪಾರು..!

Lionel Messi: 21 ವರ್ಷಗಳ ಬಳಿಕ ತವರಿನಲ್ಲೇ ಫುಟ್ಬಾಲ್​ ದಿಗ್ಗಜ ಲಿಯೋನೆಲ್ ಮೆಸ್ಸಿ ಭಾವುಕ ವಿದಾಯ; ಹೇಗಿತ್ತು ನೋಡಿ ಅಂತಿಮ ಪಂದ್ಯ; Video

‘ದಯವಿಟ್ಟು ಮಲಗಬೇಡಿ, ನಮಗೆ ನೀವು ಬೇಕು’: ಸಾವಿನ ದವಡೆಯಲ್ಲಿದ್ದ ಸ್ಮಿತ್ ಮಚ್ಚರ್'ಗೆ ಧೈರ್ಯ ತುಂಬಿದ ದಂತ ವೈದ್ಯ, Flydubai ವಿಮಾನದಲ್ಲಿ ಆ 45 ನಿಮಿಷಗಳಲ್ಲಿ ನಡೆದಿದ್ದೇನು..?