ಬರಲಿವೆ ಸೆಲ್ಫ್ ಹೀಲಿಂಗ್ ವಿಮಾನ ರೆಕ್ಕೆಗಳು!
ಬ್ರಿಟನ್ ವಿಜ್ಞಾನಿಗಳು ಹೊಸ ಪ್ರಯೋಗ ನಡೆಸಿದ್ದು ಹಾನಿಗೊಳಗಾದಾಗ ಸ್ವಯಂ ಸರಿಪಡಿಸಿಕೊಳ್ಳುವ ವಿನೂತನ ವಿಮಾನ ರೆಕ್ಕೆಗಳನ್ನು ಸಿದ್ಧಪಡಿಸಿದ್ದಾರೆ.
ಲಂಡನ್: ಬ್ರಿಟನ್ ವಿಜ್ಞಾನಿಗಳು ಹೊಸ ಪ್ರಯೋಗ ನಡೆಸಿದ್ದು ಹಾನಿಗೊಳಗಾದಾಗ ಸ್ವಯಂ ಸರಿಪಡಿಸಿಕೊಳ್ಳುವ ವಿನೂತನ ವಿಮಾನ ರೆಕ್ಕೆಗಳನ್ನು ಸಿದ್ಧಪಡಿಸಿದ್ದಾರೆ.
ವೈಜ್ಞಾನಿಕ ಕಲ್ಪನೆಯಿಂದ ಇದು ಸಾಧ್ಯವಾಗಿದ್ದು, ಸೆಲ್ಫ್ ಹೀಲಿಂಗ್ (ಸ್ವಯಂ ಸರಿಪಡಿಸಿಕೊಳ್ಳಬಹುದಾದ) ತಂತ್ರಜ್ಞಾನ ಇನ್ನು ಮುಂದಿನ ದಿನಗಳಲ್ಲಿ ಸಾಮಾನ್ಯದ ವಿಷಯವಾಗಲಿದೆ ಎಂದು ಬ್ರಿಟನ್ ವಿಜ್ಞಾನಿಗಳು ತಿಳಿಸಿದ್ದಾರೆ. ಅಲ್ಲದೇ ಒಡೆದು ಹೋಗಿರುವ ಮೊಬೈಲ್ ಸ್ಕ್ರೀನ್ ಗಳನ್ನು ಸರಿಪಡಿಸಲು ಈ ತಂತ್ರಜ್ಞಾನ ಸಹಕಾರಿಯಾಗಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಕಾರ್ಬನ್ ಫೈಬರ್ ಉತ್ಪನ್ನದ ಕ್ಷಿಪ್ರ ರಾಸಾಯನಿಕ ಕ್ರಿಯೆಯಿಂದ ಹಾನಿಗೊಳಗಾಗಿರುವ ಪ್ರದೇಶವನ್ನು ಗಟ್ಟಿಯಾಗಿಸುತ್ತದೆ. ಈ ಮೂಲಕ ಸೆಲ್ಫ್ ಹೀಲಿಂಗ್ ತಂತ್ರಜ್ಞಾನ ಕಾರ್ಯನಿರ್ವಹಿಸಲಿದೆ. ಹಾನಿಗೀಡಾಗಿರುವ ಪ್ರದೇಶದಲ್ಲಿ ಹೀಲಿಂಗ್ ಏಜೆಂಟ್ ನಂತೆ ಕಾರ್ಯನಿರ್ವಹಿಸಲಿರುವ ವಸ್ತುವಿಗೆ ಬಣ್ಣ ನೀಡಬಹುದಾಗಿರುವುದರಿಂದ ಹಾನಿಗೀಡಾಗಿರುವ ಪ್ರದೇಶವನ್ನು ತಪಾಸಣೆ ನಡೆಸುವ ಪ್ರಕ್ರಿಯೆ ಇಂಜಿನಿಯರ್ ಗಳಿಗೆ ಸುಲಭವಾಗಲಿದೆ. ಈ ತಂತ್ರಜ್ಞಾನದಿಂದ ವಿಮಾನಯಾನ ಸುರಕ್ಷತೆ ತಪಾಸಣೆಯಲ್ಲಿ ಉಂಟಾಗುವ ವಿಳಂಬವನ್ನು ಮತ್ತಷ್ಟು ಕಡಿಮೆ ಮಾಡಲಿದೆ ಎಂದು ನಿರೀಕ್ಷಿಸಲಾಗಿದೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.