ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ವಿಜ್ಞಾನ-ತಂತ್ರಜ್ಞಾನ

ಫೇಸ್ ಬುಕ್ ಮೆಸೆಂಜರ್ ಡೌನ್ಲೋಡ್ ಮಾಡಿದ ಒಂದು ಬಿಲಿಯನ್ ಬಳಕೆದಾರರು

ಫೇಸ್ ಬುಕ್ ಮೆಸೆಂಜರನ್ನು (ಅಂತರ್ಜಾಲದಲ್ಲಿ ಸಂದೇಶ ಹಂಚಿಕೊಳ್ಳುವ ಆಪ್) ಆಂಡ್ರಾಯ್ಡ್ ಫೋನುಗಳು ಮತ್ತು ಟ್ಯಾಬ್ಲೆಟ್ ಗಳಿಗೆ ಒಂದು ಬಿಲಿಯನ್ ಬಾರಿ

ಫೇಸ್ ಬುಕ್ ಮೆಸೆಂಜರ್ ಲೋಗೋ
Guruprasad Narayana
Updated On : 10 Jun 2015, 3:31 am

ನವದೆಹಲಿ: ಫೇಸ್ ಬುಕ್ ಮೆಸೆಂಜರನ್ನು (ಅಂತರ್ಜಾಲದಲ್ಲಿ ಸಂದೇಶ ಹಂಚಿಕೊಳ್ಳುವ ಆಪ್) ಆಂಡ್ರಾಯ್ಡ್ ಫೋನುಗಳು ಮತ್ತು ಟ್ಯಾಬ್ಲೆಟ್ ಗಳಿಗೆ ಒಂದು ಬಿಲಿಯನ್ ಬಾರಿ ಇಳಿಸಿಕೊಳ್ಳಲಾಗಿದೆ ಎಂದು ಫೇಸ್ ಬುಕ್ ನ ಸಂದೇಶಾಧಾರಿ ಸೇವೆಗಳ ಉಪಾಧ್ಯಕ್ಷ ಡೇವಿಡ್ ಮಾರ್ಕಸ್ ತಿಳಿಸಿದ್ದಾರೆ.

ಆದುದರಿಂದ ಈಗ ಈ ಮೆಸಂಜರ್ ಒಂದು ಬಿಲಿಯನ್ ಗಿಂತಲೂ ಹೆಚ್ಚು ಬಾರಿ ಡೌನ್ಲೋಡ್ ಆಗಿರುವ ವಾಟ್ಸ್ ಆಪ್, ಜಿಮೇಲ್, ಯುಟ್ಯೂಬ್, ಸರ್ಚ್ ಮತ್ತು ಮ್ಯಾಪುಗಳ (ಭೂಪಟ) ಬಳಗಕ್ಕೆ ಸೇರಿಕೊಂಡಿದೆ ಎಂದು ಟೆಕ್ ಕ್ರಂಚ್ ವರದಿ ಮಾಡಿದೆ.

ಸಂದೇಶ ಹಂಚಿಕೊಳ್ಳುವುದು, ವಿಡಿಯೋ ಕಾಲ್, ಧ್ವನಿ ಕ್ಲಿಪ್ಗಳು ಹಂಚಿಕೊಳ್ಳುವುದು ಇತ್ಯಾದಿ ಸೌಕರ್ಯಗಳುಳ್ಳ ಈ ಆಪ್ ಇತ್ತೀಚೆಗೆ ಭಾರಿ ಜನಪ್ರಿಯತೆ ಪಡೆದಿದೆ.

ವಾಟ್ಸ್ ಆಪ್ ಕೂಡ ತನ್ನ ಒಡೆತನದಲ್ಲೇ ಇರುವುದರಿಂದ ಮೆಸೇಜಿಂಗ್ ಕ್ಷೇತ್ರದಲ್ಲಿ ಫೇಸ್ಬುಕ್ ಈಗ ಅತಿ ದೊಡ್ಡ ಮಾರುಕಟ್ಟೆ ಹೊಂದಿದೆ.

ಫೇಸ್ ಬುಕ್ ಮೀರಿಸುವ ಮುಂದಿನ ಅಂತರ್ಜಾಲ ಆಪ್ ಯಾವುದು ಎಂದು ಜನರು ಒಂದು ವರ್ಷದಿಂದ ಕೇಳುತ್ತಿದ್ದ ಪ್ರಶ್ನೆಗೆ ಫೇಸ್ಬುಕ್ ಮೆಸೆಂಜರ್ ಮೂಲಕ ಉತ್ತರಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments