ನವದೆಹಲಿ: ಭಾರತೀಯ ಉದ್ದಿಮೆದಾರರಿಬ್ಬರು ಗರ್ನಮ್ ಸನ್ನಿ ಮತ್ತು ಇಂದರದೀಪ್ ಬಸ್ಸಿ ನೂತನ ಸಾಮಾಜಿಕ ಜಾಲತಾಣ ಆಪ್ ಅಭಿವೃದ್ಧಿಪಡಿಸಿದ್ದು ಅದು ಫೇಸ್ಬುಕ್ ಅನ್ನು ಬಹಳ ಹೋಲುತ್ತದೆ ಎಂದಿದ್ದಾರೆ.
'ಆಶಿಕಿ' ಎಂದು ಕರೆಯಲಾಗಿರುವ ಈ ಆಪ್ ನಲ್ಲಿ ತಮ್ಮ ಪ್ರೊಫೈಲ್ ಫೋಟೋಗಳಿಗೆ ಹಿನ್ನಲೆ ಚಿತ್ರವನ್ನು ಹಾಕಿಕೊಳ್ಳಬಹುದಾಗಿದೆ ಹಾಗು ಎರಡು ಪ್ರೊಫೈಲ್ ಫೋಟೋಗಳನ್ನು ಆಯ್ಕೆ ಮಾಡಿಕೊಳ್ಳಬಹುದಾಗಿದೆ.
"ಸಾಮಾಜಿಕ ಜಾಲತಾಣವನ್ನು ಆಸಕ್ತಿದಾಯಕವಾಗಿ ಮತ್ತು ವಿಭಿನ್ನವಾಗಿ ಅಭಿವೃದ್ಧಿಪಡಿಸುವುದು ನನ್ನ ಕನಸಾಗಿತ್ತು. ಫೇಸ್ಬುಕ್ ನಲ್ಲಿ ಮಾಡಬಹುದಾದ್ದನ್ನೆಲ್ಲಾ ನೀವು ಆಶಿಕಿ ಯಲ್ಲಿ ಮಾಡಬಹುದು ಅಲ್ಲದೆ ಬೇರೆಯ ವಿಭಿನ್ನ ಫೀಚರ್ ಗಳನ್ನು ಸೇರಿಸಿದ್ದೇವೆ" ಎನ್ನುತ್ತಾರೆ ಆಶಿಕಿ ಕಾರ್ಯನಿರ್ವಹಣಾ ಅಧಿಕಾರಿ ಗರ್ನಮ್ ಸನ್ನಿ.
ಹ್ಯಾಶ್ ಟ್ಯಾಗ್ ಫೀಚರ್ ಕೂಡ ಲಭ್ಯವಿದ್ದು ಅದರ ಮೇಲೆ ಒತ್ತುವ ಮೂಲಕ ಅದೇ ವಿಷಯದ ಸಾರ್ವಜನಿಕ ಪೋಸ್ಟ್ ಗಳನ್ನು ಹುಡುಕಬಹುದಾಗಿದೆ.
ಮೆಸೆಂಜರ್ ಕೂಡ ಆಶಿಕಿಯಲ್ಲಿ ಲಭ್ಯವಿದ್ದು, ಈ ಆಪ್ ಅನ್ನು ಆಂಡ್ರಾಯ್ಡಿನ ಗೂಗಲ್ ಪ್ಲೇ ಸ್ಟೋರ್ ಮತ್ತು ಆಪಲ್ ನ ಆಪ್ ಸ್ಟೋರ್ ನಲ್ಲೂ ಡೌನ್ ಲೋಡ್ ಮಾಡಬಹುದಾಗಿದೆ.