ಮಂಗಳಗ್ರಹದಲ್ಲಿ ಪಿರಮಿಡ್ ಆಕೃತಿ 
ವಿಜ್ಞಾನ-ತಂತ್ರಜ್ಞಾನ

ಮಂಗಳನಲ್ಲಿ ರೋವರ್ ಸೆರೆಹಿಡಿದ ಚಿತ್ರಗಳು ಪಿರಮಿಡ್ ಆಕೃತಿಯಂತಿವೆ!

ಮಂಗಳಗ್ರಹ ಕುರಿತ ಸಂಶೋಧನೆಗಾಗಿ ನಾಸಾ ವಿಜ್ಞಾನಿಗಳು ಉಡಾಯಿಸಿದ ಮಾರ್ಸ್ ಕ್ಯೂರಿಯಾಸಿಟಿ ರೋವರ್ ಉಪಗ್ರಹ ಹೊಸದೊಂದು...

ವಾಷಿಂಗ್ಟನ್: ಮಂಗಳಗ್ರಹ ಕುರಿತ ಸಂಶೋಧನೆಗಾಗಿ ನಾಸಾ ವಿಜ್ಞಾನಿಗಳು ಉಡಾಯಿಸಿದ ಮಾರ್ಸ್ ಕ್ಯೂರಿಯಾಸಿಟಿ ರೋವರ್ ಉಪಗ್ರಹ ಹೊಸದೊಂದು ಚಿತ್ರಗಳನ್ನು ಸೆರೆಹಿಡಿದು ನಾಸಾಗೆ ಕಳುಹಿಸಿದ್ದು, ಈ ಆಕೃತಿಗಳು 'ಪಿರಮಿಡ್'ಗಳನ್ನು ಹೋಲುವಂತಿದೆ ಎಂದು ನಾಸಾ ವಿಜ್ಞಾನಿಗಳು ಹೇಳಿದ್ದಾರೆ.

ಮಂಗಳಗ್ರಹದಲ್ಲಿ ಒಂದಾನೊಂದು ಕಾಲದಲ್ಲಿ ಪುರಾತನ ನಾಗರೀಕತೆ ಇತ್ತೆಂಬ ಕಲ್ಪನೆಗೆ ಪುಷ್ಠಿ ನೀಡಿದೆ. ಸಣ್ಣ ಗಾತ್ರದ ಕಾರಿನಷ್ಟಿರುವ ಈ ಆಕೃತಿ ಥೇಟ್ ಪಿರಮಿಡ್‘ಗಳನ್ನು ಹೋಲುತ್ತಿದೆ. ಈಜಿಫ್ಟಿನ ಪಿರಮೀಡ್ ಗಳ ರೀತಿಯೇ ಇಲ್ಲೂ ಬೃಹತ್ ಗಾತ್ರದ ಪಿರಮಿಡ್ ಗಳಿದ್ದು ಕಾಲಾನಂತರ ಮರಳಿನಲ್ಲಿ ಮುಳುಗಿರಬಹುದೆಂದು ಶಂಕಿಸಲಾಗಿದೆ.

ಈ ಆಕೃತಿಗಳು ನೋಡುವುದಕ್ಕೆ ಪಿರಮಿಡ್ ರೀತಿ ಕಾಣುತ್ತಿದ್ದು, ನೇರವಾದ ಅಂಚುಗಳು, ನುಣುಪಾದ ಮೇಲ್ಮೈ, ಚೂಪಾದ ಶಿಖರ ಎಲ್ಲವೂ ಮನುಷ್ಯನೇ ಇದನ್ನ ರೂಪಿಸಿರಬಹುದೆಂಬ ಅನುಮಾನವನ್ನು ದಟ್ಟಗೊಳಿಸಿದೆ.

ಮಂಗಳ ಗ್ರಹದಲ್ಲಿರುವ ಕೆಂಪು ಕಾಯದ ಬಗೆಗಿರುವ ಕುತೂಹಲವನ್ನು ಬಯಲಿಗೆಳೆಯುವ ನಿಟ್ಟಿನಲ್ಲಿ ನಾಸಾ ವಿಜ್ಞಾನಿಗಳು 26.11.2011ರಂದು ಉಡಾಯಿಸಿದ ‘ಮಾರ್ಸ್ ಕ್ಯೂರಿಯಾಸಿಟಿ ರೋವರ್’ ಮಂಗಳ ಗ್ರಹದ ಕೌತುಗಳನ್ನು ಒಂದೊಂದಾಗೇ ಬಯಲಿಗೆಳೆಯುತ್ತಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಮತದಾನದ ಹಕ್ಕನ್ನೇ ಕಸಿದರೆ ಯಾವ ಪಕ್ಷವೂ ಸುರಕ್ಷಿತವಾಗಿರಲ್ಲ': SIR ವಿರುದ್ಧ ದೇಶಾದ್ಯಂತ ಹೋರಾಟಕ್ಕೆ CJP ಕರೆ

ಸ್ಟಿಂಗ್‌ ಆಪರೇಷನ್ ಆರೋಪ: ಶಾಂಗ್ರೀಲಾ ಹೋಟೆಲ್‌ನಲ್ಲಿ ಯಾರ ಜೊತೆ ಕುಳಿತಿದ್ರಿ; ಸಿಎಂ ಶಿವಕುಮಾರ್ ವಿರುದ್ಧ HDK ಹೊಸ ಬಾಂಬ್

ಒಂದು ಕ್ಷಣದ ನಿರ್ಲಕ್ಷ್ಯ, ವಿಚಿತ್ರ ರನೌಟ್‌ಗೆ ತಿಲಕ್ ವರ್ಮಾ ಬಲಿ; ಗಂಭೀರ್ ಫುಲ್ ಗರಂ! ಆಗಿದ್ದೇನು? Video

3rd T20I: ಆಲೌಟ್ ನಲ್ಲೂ ವಿಚಿತ್ರ ದಾಖಲೆ ಬರೆದ ಟೀಂ ಇಂಡಿಯಾ!

"ಜಗತ್ತಿಗೆ ಅಗತ್ಯವಿರುವ ಪರಿಹಾರಗಳು ನಿಮ್ಮಲ್ಲಿವೆ": ಚೆನ್ನೈನಲ್ಲಿ 'Gen Z ಯನ್ನುದ್ದೇಶಿಸಿ ಪ್ರಧಾನಿ ಮೋದಿ ಮಾತು