ಪುರುಷರಿಗಾಗಿ "ಏಸಿ ಶೂಸ್'
ಪುರುಷರಿಗಾಗಿ ತಯಾರಿಸಲಾದ ಈ ಏರ್ ಕಂಡಿಷನ್ಡ್ ಶೂಗಳು ಎಂದಿಗೂ ನಾರುವುದಿಲ್ಲ. ಏಕೆಂದರೆ ಅದರೊಳಗೆ ಸದಾ ಕಾಲ ತಂಪು...
ಪುರುಷರಿಗಾಗಿ ತಯಾರಿಸಲಾದ ಈ ಏರ್ ಕಂಡಿಷನ್ಡ್ ಶೂಗಳು ಎಂದಿಗೂ ನಾರುವುದಿಲ್ಲ. ಏಕೆಂದರೆ ಅದರೊಳಗೆ ಸದಾ ಕಾಲ ತಂಪು ಗಾಳಿಯಾಡುತ್ತದೆ. ಈ ಶೂಗಳೊಳಗೆ ಹೈಡ್ರೋ ಟೆಕ್ನಾಲಜಿ ಬಳಸಲಾಗಿದೆ.
ಪಾದಗಳನ್ನು ಸದಾ ಕಾಲ ತಂಪಾಗಿಯೂ, ಸ್ವಚ್ಛವಾಗಿಯೂ ಇಟ್ಟು, ರಿಫ್ರೆಶಿಂಗ್ ಫೀಲ್ ನೀಡುತ್ತದೆ. ಮೇಲ್ಭಾಗದ ಸೋಲ್ ನಲ್ಲಿ ಪುಟ್ಟ ಪುಟ್ಟ ರಂಧ್ರಗಳಿದ್ದು ಅದರ ಮೂಲಕ ತಂಪಾದ ಗಾಳಿ ಪಾದಗಳಿಗೆ ಸೋಕುತ್ತದೆ.
ಇದರಲ್ಲಿರುವ ಮೆಂಬ್ರೇನ್ ಗಾಳಿಯನ್ನು ಒಳಬಿಡುತ್ತದೆ. ಆಧರೆ ಮಳೆ ಹನಿಗಳನ್ನು ತಡೆಯುತ್ತದೆ. ಹೀಗಾಗಿ ಶೂ ಎಲ್ಲ ಕಾಲಕ್ಕೂ ಸೂಕ್ತವೆನಿಸುತ್ತದೆ.
ವಾಸನೆ ಬೀರುವ ಪಾದಗಳಿಗೆ, ಸಾಕ್ಸ್ ಗಳಿಗೆ ಖಂಡಿತಾ ಮುಕ್ತಿ ಸಿಗುತ್ತದೆ.
ಸದ್ಯ 78 ಡಾಲರ್ ಬೆಲೆ ಬಾಳವು ಈ ಬ್ರೀಜ್ ವಾಕ್ ಶೂಗಳನ್ನು ಜಪಾನಿ ಕಂಪನಿ ತಯಾರಿಸಿದೆ. ಸದ್ಯಕ್ಕೆ ಇದು ನಿಮಗೆ ಲಭ್ಯವಿಲ್ಲ. ಇನ್ನೂ ಸ್ವಲ್ಬದಿನ ಕಾಯಲೇಬೇಕು. ಏಕೆಂದರೆ ಭಾರತಕ್ಕಿನ್ನೂ ಈ ಶೂ ಕಾಲಿಟ್ಟಿಲ್ಲ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.