ಬಹುನಿರೀಕ್ಷಿತ ಆ್ಯಪಲ್ ವಾಚ್ ಮಾರುಕಟ್ಟೆಗೆ ಲಗ್ಗೆಯಿಟ್ಟಿದೆ. ಮಾರುಕಟ್ಟೆಗೆ ಬಿಡುಗಡೆ ಮಾಡಿದ ಸಂದರ್ಭದಲ್ಲಿ ಆ್ಯಪಲ್ ಸಂಸ್ಥೆಯ ಮಾಲೀಕ ಟಿಂ ಕುಕ್ ಇದು ಬದುಕನ್ನೇ ಬದಲಿಸುತ್ತದೆ ಎಂದು ಹೇಳಿದ್ದರು .
ರು . 22283 ಬೆಲೆಯಿರುವ ಈ ವಾಚ್‌ನಲ್ಲಿರುವ ವಿಶೇಷತೆಗಳೇನು? ಇಲ್ಲಿದೆ ಉತ್ತರ
- 38 ವ್ಯತ್ಯಸ್ತ ಮಾಡೆಲ್‌ಗಳಲ್ಲಿ ಆ್ಯಪಲ್ ವಾಚ್ ಲಭ್ಯವಿದೆ
- ರು. 22283 ನಿಂದ ತೊಡಗಿ ರು. 10,68, 072 ರಷ್ಟಿದೆ ಈ ವಾಚ್‌ನ ಬೆಲೆ. ಏಪ್ರಿಲ್ 10 ರಿಂದ ಆನ್ ಲೈನ್ ಬುಕ್ಕಿಂಗ್ ಆರಂಭವಾಗಿದ್ದು, ಶೇ. 90ಕ್ಕಿಂತಲೂ ಹೆಚ್ಚು ಜನ ಆನ್ ಲೈನ್ ಬುಕ್ಕಿಂಗ್ ಮಾಡಿದ್ದರು.
- ಸ್ಯಾನ್‌ಫ್ರಾನ್ಸಿಸ್ಕೋದಲ್ಲಿ ನಡೆದ ಆ್ಯಪಲ್ ಚೀಫ್ ಎಕ್ಸಿಕ್ಯೂಟಿವ್ ಟೀಂ ಕುಕ್ ವಾಚ್ ಬಿಡುಗಜೆ ಮಾಡಿದ್ದರು. ಆ್ಯಪಲ್ ಐಫೋನ್ 6 ಜತೆ ಈ ವ್ಯಾಚ್‌ನ ವಿಶೇಷತೆಗಳನ್ನು ಅವರು ವಿವರಿಸಿದ್ದರು
- ಇಮೇಲ್ ಚೆಕ್ ಮಾಡುವುದರಿಂದ ಹಿಡಿದು ಬಾಗಿಲು ತೆರೆಯಲಿರುವ ಕೀಲಿ ಕೈ ಆಗಿಯೂ ಈ ವಾಚ್ ಬಳಸಬಹುದು ಎಂದು ಹೇಳಿದೆ ಆ್ಯಪಲ್ ಸಂಸ್ಥೆ.
- ಐಫೋನ್‌ಗೆ ಸಂಪರ್ಕವಿಟ್ಟುಕೊಂಡೇ ಈ ವಾಚ್ ಕಾರ್ಯವೆಸಗುತ್ತದೆ.
- ವಾಚ್‌ನಲ್ಲಿ ಬಳಸಲಾಗಿರುವ ವಸ್ತುಗಳು, ಸ್ಟ್ರಾಪ್ ಮೊದಲಾದವುಗಳ ಬೆಲೆಯನುಸರಿಸಿ ವಾಚ್ ಬೆಲೆಯಲ್ಲಿ ವ್ಯತ್ಯಾಸವಿದೆ. ಅಲ್ಯುಮಿನಿಯಂ, ಸ್ಟೀಲ್, ಗೋಲ್ಡ್ ಸ್ಟ್ರಾಪ್‌ಗಳಿರುವ ವಾಚ್‌ಗಳು ಲಭ್ಯ.
- 18 ಗಂಟೆಗಳ ಕಾಲ ಬ್ಯಾಟರಿ ಲೈಫ್
- 15 ಸಾವಿರ ಡಾಲರ್ ಬೆಲೆಬಾಳುವ ವಾಚ್ 18 ಕ್ಯಾರೆಟ್ ರೋಸ್‌ಗೋಲ್ಡ್‌ನಿಂದ ತಯಾರಿಸಲಾಗಿದೆ. ಗೋಲ್ಡನ್ ವಾಚ್ಗೆ ಮ್ಯಾಗ್ನಟಿಕ್ ಚಾರ್ಜಿಂಗ್ ಕೂಡಾ ಇದೆ.
- ಫೋನ್ ಕರೆಗಳನ್ನು ಸ್ವೀಕರಿಸಲು, ಎಸ್ಸೆಮ್ಮೆಸ್ ಓದಲು ಈ ವಾಚ್‌ನ್ನೊಮ್ಮೆ ನೋಡಿದರೆ ಸಾಕು. ಫೇಸ್ ಬುಕ್, ಇನ್‌ಸ್ಟಾಗ್ರಾಂ ಮೊದಲಾದ ಮೊಬೈಲ್ ಅಪ್ಲಿಕೇಶನ್‌ಗಳೆಲ್ಲಾ ಈ ವಾಚ್‌ನಲ್ಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics