ವಾಷಿಂಗ್ಟನ್: ಫೇಸ್‌ಬುಕ್ ಮೆಸೆಂಜರ್‌ನಲ್ಲಿ ಉಚಿತ ವೀಡಿಯೋ ಕರೆ ಸೌಲಭ್ಯವನ್ನು ಕಲ್ಪಿಸಿದ್ದು, ಇದೀಗ ಈ ಸೌಲಭ್ಯ ಜಗತ್ತಿನೆಲ್ಲೆಡೆ ಲಭ್ಯವಾಗಿದೆ ಎಂದು ಫೇಸ್‌ಬುಕ್ ಹೇಳಿದೆ.
ಆದಾಗ್ಯೂ, ಕೆಲವೊಂದು ರಾಷ್ಟ್ರಗಳಲ್ಲಿ ಫೇಸ್‌ಬುಕ್ ಮೆಸೆಂಜರ್‌ಗೆ ಅಡಚಣೆ ಇದ್ದು, ಅಲ್ಲಿ ವೀಡಿಯೋ ಗುಣಮಟ್ಟ ಹೆಚ್ಚಿಸುವ ಬಗ್ಗೆ ಗಮನ ಹರಿಸಲಾಗಿದೆ ಎಂದು ಫೇಸ್‌ಬುಕ್ ಹೇಳಿಕೆಯನ್ನು ದ ವೆರ್ಜ್ ಮಾಧ್ಯಮ ಉಲ್ಲೇಖಿಸಿದೆ.
ಫೇಸ್‌ಬುಕ್ ಮೆಸೆಂಜರ್‌ನಲ್ಲಿ ಉಚಿತ ವೀಡಿಯೋ ಕರೆ ಸೌಲಭ್ಯ ಭಾರೀ ನಿರೀಕ್ಷೆ ಹುಟ್ಟಿಸಿತ್ತು. ಮೊದಲ ಹಂತದಲ್ಲಿ 18 ರಾಷ್ಟ್ರಗಳಲ್ಲಿ ಈ ಸೌಲಭ್ಯ ಬಿಡುಗಡೆಯಾಗಿತ್ತು. ಇದೀಗ ಫೇಸ್‌ಬುಕ್‌ನಲ್ಲಿ ತಿಂಗಳಿಗೆ 600 ಮಿಲಿಯನ್ ಸಕ್ರಿಯ ಸದಸ್ಯರಿದ್ದಾರೆ.
ಇದರೊಂದಿಗೇ ಫೇಸ್‌ಬುಕ್ ಮೆಸೆಂಜರ್‌ನಲ್ಲಿ ಆ್ಯಪ್ಸ್ ಮತ್ತು ಗೇಮ್ಸ್ ಅಳವಡಿಸುವ ಬಗ್ಗೆಯೂ ಕಂಪನಿ ಚಿಂತನೆ ನಡೆಸಿದೆ.