ಮಂಗಳ ಗ್ರಹ (ಕೃಪೆ :ನಾಸಾ) 
ವಿಜ್ಞಾನ-ತಂತ್ರಜ್ಞಾನ

ಮಂಗಳ ಗ್ರಹದಲ್ಲಿ ವಾತಾವರಣ ನಾಶವಾಗಲು ಸೌರಗಾಳಿ ಕಾರಣ: ನಾಸಾ

ಮಂಗಳ ಗ್ರಹದಲ್ಲಿ ವಾಸಯೋಗ್ಯವಾದ ವಾತಾವರಣ ನಾಶವಾಗಲು ಹಲವಾರು ವರ್ಷಗಳಿಂದ ಸೂರ್ಯನಿಂದ ಬರುತ್ತಿರುವ ಪ್ರಬಲವಾದ...

ವಾಷಿಂಗ್ಟನ್ : ಮಂಗಳ ಗ್ರಹದಲ್ಲಿ ವಾಸಯೋಗ್ಯವಾದ ವಾತಾವರಣ ನಾಶವಾಗಲು ಹಲವಾರು ವರ್ಷಗಳಿಂದ ಸೂರ್ಯನಿಂದ ಬರುತ್ತಿರುವ ಪ್ರಬಲವಾದ ಸೌರ ಗಾಳಿಯೇ ಕಾರಣ ಎಂದು ನಾಸಾ ಹೇಳಿದೆ. ಒಂದು ಕಾಲದಲ್ಲಿ ಮಂಗಳ ಗ್ರಹ ಕೂಡಾ ಭೂಮಿಯಂತೆಯೇ ಜೀವಿಸಲು ಯೋಗ್ಯ  ವಾತಾವರಣವನ್ನು ಹೊಂದಿತ್ತು. ಆದರೆ ಪ್ರಬಲವಾದ ಸೌರಗಾಳಿಯಿಂದಾಗಿ ಕ್ರಮೇಣ ಅಲ್ಲಿನ ಪರಿಸರ ನಾಶವಾಯಿತು.
ಸುಮಾರು 4.4 ಬಿಲಿಯನ್ ವರ್ಷಗಳ ಹಿಂದೆ ಈ ರೀತಿಯ ಬದಲಾವಣೆ ಆಗಿತ್ತು ಎಂದಿದೆ ನಾಸಾ.
ನಾಸಾದ ಸ್ಪೇಸ್ ಕ್ರಾಫ್ಟ್  'ಮಾವೇನ್‌' ಮಂಗಳದಲ್ಲಿ ನಡೆಸಿದ ಸಂಶೋಧನೆಯನ್ನಾಧರಿಸಿ ನಾಸಾ ಈ ವರದಿಯನ್ನು ಬಹಿರಂಗಪಡಿಸಿದೆ. ಸೂರ್ಯನಿಂದ ಬರುವ ಪ್ರಬಲವಾದ ಸೌರಗಾಳಿ ಮತ್ತು ಕಾಂತೀಯ ಪ್ರವಾಹವು ಮಂಗಳನ ವಾತಾವರಣವನ್ನೇ ನಾಶ ಮಾಡಿತು. ಇದೀಗ ಭೂಮಿಯ ವಾತಾವರಣದ ಶೇ. 1 ರಷ್ಟು ವಾತಾವರಣವಷ್ಟೇ ಈಗ ಮಂಗಳನಲ್ಲಿದೆ.  ಸೌರಗಾಳಿಯ ಬಗ್ಗೆ ಹೇಳುವುದಾದರೆ ಭೂಮಿಯ ಮೇಲೂ ಇದರ ಕರಿಛಾಯೆ ಇದ್ದೇ ಇದೆ.  ಸೌರಗಾಳಿಯ ಪ್ರಮಾಣ ಭೂಮಿಯನ್ನು ಹೆಚ್ಚಾಗಿ ಸೋಕಿದರೆ ಭೂಮಿಯಲ್ಲಿನ ವಾತಾವರಣಕ್ಕೂ ಇದೇ ಅವಸ್ಥೆ ಬರುವ ಸಾಧ್ಯತೆ ಇದೆ ಎಂಬ ಮುನ್ನೆಚ್ಚರಿಕೆಯನ್ನೂ ನಾಸಾ ನೀಡಿದೆ.
ವರುಷಗಳ ಹಿಂದೆ ಮಂಗಳ ಗ್ರಹದಲ್ಲಿ ನೀರಿತ್ತು. ಭೂಮಿಯಂತೆ ವಾಸಯೋಗ್ಯವಾದ ಗ್ರಹವಾಗಿತ್ತು ಅದು. ಆದರೆ ಸೌರವ್ಯೂಹದಲ್ಲಿನ ಕೆಲವು ಬದಲಾವಣೆಗಳಿಂದಾಗಿ ಇಲ್ಲಿನ ವಾತಾವರಣವೆಲ್ಲವೂ ಉಲ್ಟಾ ಪಲ್ಟಾ ಆಗಿ ಬಿಟ್ಟಿತು. ಮಂಗಳನ ಅಂಗಳದಲ್ಲಿ ಸೌರ ಸ್ಫೋಟದ ಕುರುಹುಗಳನ್ನು ಮಾವೇನ್‌ ಪತ್ತೆ ಹಚ್ಚಿತ್ತು.   

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಾವು ದಾಳಿ ಮಾಡದೇ ಹೋಗಿದ್ದರೆ ಇಷ್ಟು ಹೊತ್ತಿಗೆ Iran ಅಣ್ವಸ್ತ್ರ ರಾಷ್ಟ್ರವಾಗಿರುತ್ತಿತ್ತು': ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು

IPL 2026: ತವರಿನಲ್ಲಿ ಮುಂಬೈ ಗೆ ಮುಖಭಂಗ; RCB ಗೆ 18 ರನ್ ಭರ್ಜರಿ ಗೆಲುವು!

7 ತಿಂಗಳ ಮಗುವಿಗಾಗಿ ಕೆಲಸದ ಸಮಯದ ಹೊಂದಾಣಿಕೆ ಕೋರಿದ ಭಾರತೀಯ ಉದ್ಯೋಗಿ; US ಮ್ಯಾನೇಜರ್ ಪ್ರತಿಕ್ರಿಯೆ ಬಗ್ಗೆ ಜಾಲತಾಣಗಳಲ್ಲಿ ಭಾರಿ ಚರ್ಚೆ!

ಗುರಿ ಇಟ್ಟಿದ್ದು ಜಿಹಾದಿ ಬಂಡುಕೋರರಿಗೆ, ಗುರಿಯಾಗಿದ್ದು ಸ್ಥಳೀಯ ಮಾರ್ಕೆಟ್; 100 ಕ್ಕೂ ಹೆಚ್ಚು ನಾಗರಿಕರ ಮಾರಣಹೋಮ!

IPL 2026: ಮುಂಬೈ ವಿರುದ್ದ ಭರ್ಜರಿ ಬ್ಯಾಟಿಂಗ್; ಬಾಬರ್ ಆಜಂ, ಕ್ರಿಸ್ ಗೇಯ್ಲ್ ದಾಖಲೆ ಮುರಿದ Virat Kohli!

SCROLL FOR NEXT