ವಾಷಿಂಗ್ಟನ್: ಹಾಲಿವುಡ್‍ನ ಸೈಂಟಿಫಿಕ್ ಫಿಕ್ಷನ್ ಸ್ಟಾರ್ ಟ್ರೆಕ್ ಚಿತ್ರದಿಂದ ಪ್ರಭಾವಿತವಾದಂತೆ ಗೂಗಲ್ ಇದೀಗ ಹೊಸತೊಂದು ಯಂತ್ರ ಆವಿಷ್ಕರಿಸಿದೆ.
ಸ್ಟಾರ್ ಟ್ರೆಕ್ ಚಿತ್ರದಲ್ಲಿ ಕ್ಯಾಪ್ಟನ್ ಪಿಕಾರ್ಡ್ ಬಳಸುತ್ತಿದ್ದ ಪಿನ್ ರೀತಿಯಲ್ಲೇ ಇದನ್ನೂ ಎದೆ ಭಾಗದಲ್ಲಿ ಅಂಟಿಸಿಕೊಂಡರಾಯ್ತು. ವೈರ್‍ಲೆಸ್ ಮೂಲಕ ನಿಮ್ಮ ಫೋನ್‍ಗಳ ಸಂದೇಶವು ನಿಮ್ಮನ್ನು ತಲುಪುತ್ತಿರುತ್ತದೆ.
ಹೆಡ್ಫೋನ್ ಮೂಲಕ ಆಲಿಸಬಹುದು. ವೃತ್ತಾಕಾರದಲ್ಲಿರುವ ಇದರಲ್ಲಿ ಮೈಕ್ರೋಫೋನ್ ಅಳವಡಿಸಲಾಗಿದ್ದು, ಬ್ಲೂಟೂತ್ ಮೂಲಕ ಸ್ಮಾರ್ಟ್ ಫೋನ್ ಜೊತೆಗೆ ಇದು ಸಂಪರ್ಕ ಸಾಧಿಸುತ್ತದೆ ಎಂದು ಗೂಗಲ್ ನ ಹಿರಿಯ ಉಪಾಧ್ಯಕ್ಷ ಅಮಿತ್ ಸಿಂಘಾಲ್ ಹೊಸ ಯಂತ್ರದ ಬಗ್ಗೆ ಮಾಹಿತಿ ನೀಡಿದ್ದಾರೆ.