ಜಗತ್ತಿನ ಜನಪ್ರಿಯ ಸಾಮಾಜಿಕ ತಾಣವಾದ ಫೇಸ್ಬುಕ್ 2016ರಲ್ಲಿ ತನ್ನದೇ ಆದ ಉಪಗ್ರಹವೊಂದನ್ನು ಉಡಾವಣೆ ಮಾಡಲಿದೆ. ಈ ವಿಷಯವನ್ನು ಫೇಸ್ಬುಕ್ ಸಂಸ್ಥಾಪಕ ಮಾರ್ಕ್ ಜೂಕರ್ಬರ್ಗ್ ಅವರು ತಮ್ಮ ಫೇಸ್ ಬುಕ್ ಅಧಿಕೃತ ಪುಟದಲ್ಲಿ ಬಹಿರಂಗಗೊಳಿಸಿದ್ದಾರೆ.
ಆಫ್ರಿಕಾ ಖಂಡದಲ್ಲಿರುವ ಜನರಿಗೆ ಉಚಿತ ಇಂಟರ್ನೆಟ್ ಸಂಪರ್ಕ ಕಲ್ಪಿಸುವುದಕ್ಕಾಗಿಯೇ ಈ ಉಪಗ್ರಹವನ್ನು ಉಡ್ಡಯನ ಮಾಡಲಾಗುತ್ತಿದೆ.
ಫ್ರಾನ್ಸ್ Eutelsat ಸಹಭಾಗಿತ್ವದೊಂದಿಗೆ ಫೇಸ್ಬುಕ್ ಕೃತಕ ಉಪಗ್ರಹವೊಂದನ್ನು ತಯಾರಿಸಲಿದೆ ಎಂದು ಜೂಕರ್ಬರ್ಗ್ ತಮ್ಮ ಪೋಸ್ಟ್ ನಲ್ಲಿ ಹೇಳಿದ್ದಾರೆ. ಉಪಗ್ರಹದ ಹೆಸರು AMOS-6 ಎಂದಾಗಿದೆ. ಇದೀಗ ನಿರ್ಮಾಣ ಹಂತದಲ್ಲಿರುವ ಉಪಗ್ರಹದ ಫೋಟೋ ಕೂಡಾ ಅವರು ಫೇಸ್ ಬುಕ್ ನಲ್ಲಿ ಶೇರ್ ಮಾಡಿದ್ದಾರೆ.
ಜಗತ್ತಿನ ಎಲ್ಲ ಪ್ರದೇಶಗಳ ನಡುವೆ ಪರಸ್ಪರ ಸಂಪರ್ಕ ಕಲ್ಪಿಸುವುದುಕ್ಕಾಗಿಯೇ ಈ ಉಪಗ್ರಹವನ್ನು ನಿರ್ಮಿಸಲಾಗುತ್ತಿದೆ. ಫೇಸ್ಬುಕ್ನ ಇಂಟರ್ನೆಟ್ ಆರ್ಗ್ ಯೋಜನೆಯ ಅಂಗವಾಗಿದೆ ಇದು
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics