ನವದೆಹಲಿ: ನಾಸಾ ಹಾಲಿ ಕೈಗೊಂಡಿರುವ ಮಾನವ ಸಹಿತ ಬಾಹ್ಯಾಕಾಶ ಯಾನದ ಯಶಸ್ಸಿಗೆ ಮುನ್ನುಡಿ ಬರೆದಿದ್ದ, ಜಾರ್ಜ್ ಮುಲ್ಲರ್ (97) ನಿಧನರಾಗಿದ್ದಾರೆ.
ಅನಾರೋಗ್ಯದ ಕಾರಣದಿಂದ ಅವರು ಅ.12ರಂದೇ ಕೊನೆಯುಸಿರೆಳೆದಿದ್ದರು. ಅವರನ್ನು ಬಾಹ್ಯಾಕಾಶ ನೌಕೆಗಳ ಜನಕ ಎಂದೇ ಕರೆಯಲಾಗುತ್ತಿದೆ. 1960ರ ದಶಕದಲ್ಲಿ ನಾಸಾದ ಮಾನವಚಾಲಿತ ಗಗನನೌಕಾ ಯೋಜನೆಗಳ ಮುಂದಾಳತ್ವ ವಹಿಸಿದ್ದರು.
ಪ್ರತಿಷ್ಠಿತ ಸಂಸ್ಥೆಯಲ್ಲಿ ಅವರು ಕೇವಲ ಆರು ವರ್ಷಗಳ ಕಾಲ ಕಾರ್ಯನಿರ್ವಹಿಸಿದ್ದರು. ಮ್ಯುಲ್ಲರ್ ಅವರು ಆಪೋಲೋ ಯೋಜನೆಯ ಮೇಲುಸ್ತುವಾರಿ ಹಾಗೂ ಸ್ಕೈಲ್ಯಾಬ್ ಸೇರಿದಂತೆ ಇನ್ನಿತರ 3 ಸ್ಪೇಸ್‍ಶಟಲ್ ಯೋಜನೆಗಳ ಯಶಸ್ಸಿನ ರೂವಾರಿಯಾಗಿದ್ದರು.
ತಮ್ಮ ಕೆಲವು ಐಡಿಯಾಗಳಿಂದ ವಿವಾದಕ್ಕೂ ಗುರಿಯಾಗಿದ್ದ ಮ್ಯುಲ್ಲರ್‍ಗೆ ನಾಸಾದ ಅತ್ಯುನ್ನತ ಪ್ರಶಸ್ತಿ ಹಾಗೂ ನ್ಯಾಷನಲ್ ಮೆಡಲ್ ಆಫ್ ಸೈನ್ಸಸ್ ಪ್ರಶಸ್ತಿ ಗಳಿಸಿದ್ದರು. ಹಿರಿಯ ಜೀವ ಪತ್ನಿ, ನಾಲ್ವರು ಮಕ್ಕಳು, 13 ಮೊಮ್ಮಕ್ಕಳು 13 ಮರಿಮಕ್ಕಳನ್ನು ಅಗಲಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics