ಫೇಸ್‌ಬುಕ್ (ಸಂಗ್ರಹ ಚಿತ್ರ) 
ವಿಜ್ಞಾನ-ತಂತ್ರಜ್ಞಾನ

ಕೊನೆಗೂ ಡಿಸ್‌ಲೈಕ್ ಸೇರಿಸಲು ಫೇಸ್‌ಬುಕ್ ಒಪ್ಪಿಗೆ

ಫೇಸ್‌ಬುಕ್ ಬಳಕೆದಾರರ ಬಹು ಬೇಡಿಕೆಗಳಲ್ಲೊಂದಾದ ಡಿಸ್ ಲೈಕ್ ಆಪ್ಶನ್ ಗೆ ಇದೀಗ ಫೇಸ್‌ಬುಕ್ ಸಂಸ್ಥೆ ಒಪ್ಪಿಗೆ ಸೂಚಿಸಿದ್ದು, ಶೀಘ್ರದಲ್ಲೇ ಫೇಸ್‌ಬುಕ್ ಜಾಲತಾಣದಲ್ಲಿ 'ಡಿಸ್‌ಲೈಕ್' ಆಪ್ಶನ್ ಬರಲಿದೆ ಎಂದು ಸಂಸ್ಥಾಪಕ ಮಾರ್ಕ್ ಜಕರ್‌ಬರ್ಗ್ ಹೇಳಿದ್ದಾರೆ...

ವಾಷಿಂಗ್ಟನ್: ಫೇಸ್‌ಬುಕ್ ಬಳಕೆದಾರರ ಬಹು ಬೇಡಿಕೆಗಳಲ್ಲೊಂದಾದ ಡಿಸ್ ಲೈಕ್ ಆಪ್ಶನ್ ಗೆ ಇದೀಗ ಫೇಸ್‌ಬುಕ್ ಸಂಸ್ಥೆ ಒಪ್ಪಿಗೆ ಸೂಚಿಸಿದ್ದು, ಶೀಘ್ರದಲ್ಲೇ ಫೇಸ್‌ಬುಕ್ ಜಾಲತಾಣದಲ್ಲಿ 'ಡಿಸ್‌ಲೈಕ್' ಆಪ್ಶನ್ ಬರಲಿದೆ ಎಂದು ಸಂಸ್ಥಾಪಕ ಮಾರ್ಕ್ ಜಕರ್‌ಬರ್ಗ್ ಹೇಳಿದ್ದಾರೆ.

ವಾಷಿಂಗ್ಟನ್ ನಲ್ಲಿ ನಡೆದ ಕಾರ್ಯಕ್ರಮದ ಪ್ರಶ್ನೋತ್ತರ ಸೆಷನ್ ನಲ್ಲಿ ಮಾತನಾಡಿರುವ ಅವರು, ಫೇಸ್‌ಬುಕ್ ಬಳಕೆದಾರರು ಕಳುಹಿಸಿರುವ ಬೇಡಿಕೆಗಳಲ್ಲಿ  ಬಹುತೇಕರು 'ಡಿಸ್‌ಲೈಕ್' ಆಪ್ಶನ್ ಕುರಿತಾಗಿ ಸಾಕಷ್ಟು ಮನವಿಗಳನ್ನು ಮಾಡಿದ್ದರು. ಬಳಕೆದಾರರ ಮನವಿಯನ್ನು ಇದೀಗ ಸಂಸ್ಥೆ ಸ್ವೀಕರಿಸಿದ್ದು, ಈ ಬಗ್ಗೆ ಸಂಸ್ಥೆ ಹಲವು ಪರೀಕ್ಷೆಗಳನ್ನು ನಡುಸುತ್ತದೆ. ಶೀಘ್ರದಲ್ಲೇ ಬಳಕೆದಾರರ ಬೇಡಿಕೆ ಈಡೇರಲಿದೆ ಎಂದು ಹೇಳಿದ್ದಾರೆ.

ಜನರು ಕೆಲವು ಬಾರಿ ಕೆಲವು ದುಖಃಕರ ವಿಚಾರ ಹಾಗೂ ನೋವಿನ ಸಂಗತಿಗಳನ್ನು ಹಂಚಿಕೊಂಡಿರುತ್ತಾರೆ ಈ ವೇಳೆ ಇಂತಹ ವಿಷಯಗಳಿಗೆ ಲೈಕ್ ಕೊಡುವುದು ಹಿತಕರವಲ್ಲ ಎಂಬ ಭಾವನೆಗಳು ಬಳಕೆದಾರರಲ್ಲಿ ಉಂಟುಮಾಡುತ್ತಿದೆ ಎಂದು ಹೇಳಿ ಸಾಕಷ್ಟು ಮನವಿಗಳು ಸಂಸ್ಥೆಗೆ ಬಂದಿತ್ತು. ಈ ಬಗ್ಗೆ ಸಂಸ್ಥೆ ಸಹ ಸಾಕಷ್ಟು ಬಾರಿ ಚರ್ಚೆ ನಡೆಸಿತ್ತು. ಇದೀಗ ಬಳಕೆದಾರರ ಬೇಡಿಕೆ ಕುರಿತಂತೆ ಸಂಸ್ಥೆ ಕೆಲಸ ಮಾಡುತ್ತಿದ್ದು, ಶೀಘ್ರದಲ್ಲೇ ಡಿಸ್ ಲೈಕ್ ಆಪ್ಶನ್ ನ್ನು ನೀಡಲಾಗುತ್ತದೆ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಇಸ್ರೇಲ್‌ ಜೊತೆ ನಮ್ಮ ಸಂಬಂಧ 'ರಕ್ತ ಮತ್ತು ತ್ಯಾಗ'ದಲ್ಲಿ ಬರೆಯಲ್ಪಟ್ಟಿದೆ, ನಾನು ಹುಟ್ಟಿದ ವರ್ಷ ಭಾರತ ಇಸ್ರೇಲ್ ಗೆ ಮಾನ್ಯತೆ ನೀಡಿತು': ಪ್ರಧಾನಿ ಮೋದಿ-Video

ಹಗರಣ ರಹಿತ ಹುದ್ದೆ ಭರ್ತಿಗೆ ಕ್ರಮ: ಯುವಕರು ಧೈರ್ಯವಾಗಿರಿ, ನಿಮ್ಮ ಸಮಸ್ಯೆ ಬಗೆಹರಿಸುತ್ತೇವೆ, ಸದ್ಯದಲ್ಲೇ ಸಂದೇಶ ನೀಡುತ್ತೇವೆ; ಡಿ ಕೆ ಶಿವಕುಮಾರ್

ವಿದೇಶಿ ಮಹಿಳೆಗೆ ಪತ್ರ ಬರೆದು ಅಂಬೇಡ್ಕರ್ ಸೋಲನ್ನು ನೆಹರು ಸಂಭ್ರಮಿಸಿದ್ದು ನಿಜವಲ್ಲವೇ? 'ಗೂಗಲ್ ಬೇಬಿ'ಯಂತೆ ವರ್ತಿಸಬೇಡಿ!

'ಭಯೋತ್ಪಾದನೆಯನ್ನು ಯಾವುದೂ ಸಮರ್ಥಿಸಲು ಸಾಧ್ಯವಿಲ್ಲ, ಭಾರತ ಇಸ್ರೇಲ್ ಜೊತೆ ದೃಢವಾಗಿ ನಿಲ್ಲುತ್ತದೆ': ನೆಸ್ಸೆಟ್‌ನಲ್ಲಿ ಪ್ರಧಾನಿ ಮೋದಿ ಭಾಷಣ

'ನ್ಯಾಯಾಂಗದಲ್ಲಿ ಭ್ರಷ್ಟಾಚಾರ' ಪಾಠ: ಸುಪ್ರೀಂ ಕೋರ್ಟ್ ಚಾಟಿ ನಂತರ ವೆಬ್‌ಸೈಟ್‌ನಿಂದ ಪಠ್ಯಪುಸ್ತಕ ತೆಗೆದ NCERT

SCROLL FOR NEXT