ಕ್ಯಾಲಿಫೋರ್ನಿಯ: ಆ್ಯಪಲ್ ಎಲೆಕ್ಟ್ರಾನಿಕ್ ಗ್ಯಾಡ್ಜೆಟ್ ಮತ್ತು ಕಂಪ್ಯೂಟರ್ಗಳ ಸೀಮಿತ ಪರಿಧಿಯಿಂದ ಹೊರಬರುವ ಸುಳುಹು ನೀಡಿದೆ. ಶೀಘ್ರದಲ್ಲೇ ಎಲೆಕ್ಟ್ರಿಕ್ ಕಾರ್ ಒಂದನ್ನು ಪರಿಚಯಿಸುವತ್ತ ದಾಪುಗಾಲು ಹಾಕಿರುವ ಆ್ಯಪಲ್ , ಈ ಯೋಜನೆಯನ್ನು ಚುರುಕುಗೊಳಿಸಿದೆ.
ವಾಲ್ ಸ್ಟ್ರೀಟ್ ಜರ್ನಲ್ ನಲ್ಲಿ ಈ ಸುದ್ದಿ ಪ್ರಕಟವಾಗಿದ್ದು, ಅದರ ಪ್ರಕಾರ ಟೈಟಾನ್ ಎಂಬ ಕೋಡ್ನೇಮ್ ನಲ್ಲಿ ಈ ಪ್ರಾಜೆಕ್ಟ್ ಪ್ರಾರಂಭವಾಗಿದೆ. 2019ರಲ್ಲಿ ಆ್ಯಪಲ್ ಕಾರ್ ಗಳು ರಸ್ತೆಗಿಳಿಯುವುದು ಬಹುತೇಕ ಖಚಿತ ಎಂದು ಹೇಳಲಾಗುತ್ತಿದೆ. ಆದರೆ ಈ ಬಗ್ಗೆ ಆ್ಯಪಲ್ ಇನ್ನೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಗೂಗಲ್ ಸ್ವಯಂಚಾಲಿತ ಕಾರುಗಳನ್ನು ಹೊರತಂದಿರುವ ಬೆನ್ನಲ್ಲೇ ಆ್ಯಪಲ್ ಕಂಪನಿಯಿಂದಲೂ ಕಾರು ಬರುತ್ತಿರುವುದು ಕುತೂಹಲ ಮೂಡಿಸಿದೆ.