ಡಿಜಿಟಲ್ ಇಂಡಿಯಾ ಅಭಿಯಾನಕ್ಕೆ ಹ್ಯಾಕರ್ ಅಂಕಿತ್ ಫಾಡಿಯಾ ಪ್ರಚಾರ ರಾಯಭಾರಿ
ನೈತಿಕ ಹ್ಯಾಕರ್ ಮತ್ತು ಹಲವು ಪುಸ್ತಕಗಳ ಬರಹಗಾರ ಅಂಕಿತ್ ಫಾಡಿಯಾ ಅವರನ್ನು 'ಡಿಜಿಟಲ್ ಇಂಡಿಯ' ಅಭಿಯಾನಕ್ಕೆ ಪ್ರಚಾರ ರಾಯಭಾರಿಯಾಗಿ ನೇಮಿಸಲಾಗಿದೆ
ನವದೆಹಲಿ: ನೈತಿಕ ಹ್ಯಾಕರ್ ಮತ್ತು ಹಲವು ಪುಸ್ತಕಗಳ ಬರಹಗಾರ ಅಂಕಿತ್ ಫಾಡಿಯಾ ಅವರನ್ನು 'ಡಿಜಿಟಲ್ ಇಂಡಿಯ' ಅಭಿಯಾನಕ್ಕೆ ಪ್ರಚಾರ ರಾಯಭಾರಿಯಾಗಿ ನೇಮಿಸಲಾಗಿದೆ ಎಂದು ತಿಳಿದುಬಂದಿದೆ.
ತಮ್ಮ ಫೇಸ್ಬುಕ್ ಪುಟದಲ್ಲಿ ಈ ಘೋಷಣೆಯನ್ನು ಮಾಡಿಕೊಂಡಿರುವ ೩೦ ವರ್ಷದ ಫಾಡಿಯಾ, ಕೇಂದ್ರ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ನೀಡಿರುವ ಪ್ರಮಾಣ ಪತ್ರದ ಫೋಟೋವನ್ನು ಕೂಡ ಹಾಕಿಕೊಂಡಿದ್ದಾರೆ.
"ನರೇಂದ್ರ ಮೋದಿ ಅವರ ಡಿಜಿಟಲ್ ಇಂಡಿಯಾ ಅಭಿಯಾನಕ್ಕೆ ನನ್ನನ್ನು ರಾಯಭಾರಿಯಾಗಿ ನೇಮಕ ಮಾಡಿರುವುದಕ್ಕೆ ನನಗ ಗೌರವ ತಂದಂತಿದೆ ಹಾಗೂ ಇದರಿಂದ ವಿನೀತನಾಗಿದ್ದೇನೆ" ಎಂದು ಅವರು ಬರೆದುಕೊಂಡಿದ್ದಾರೆ.
ಇವರ ಹ್ಯಾಕಿಂಗ್ ತಂತ್ರಜ್ಞಾನವನ್ನು ಹಲವಾರು ತಜ್ಞರು ಟೀಕಿಸಿರುವ ಹಿನ್ನಲೆಯಲ್ಲಿ ಈ ನೇಮಕ ಕುತೂಹಲ ಕೆರಳಿಸಿದೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.