ಗೂಗಲ್ ಸರ್ಚ್ನಲ್ಲಿ ಪ್ರಾಣಿಗಳ ದನಿಯನ್ನೂ ಕೇಳಬಹುದು!
ಉದಾಹರಣೆಗೆ ಬಳಕೆದಾರರು ಗೂಗಲ್ ನಲ್ಲಿ ಈ ಪ್ರಾಣಿಯ ದನಿ ಯಾವುದು ಎಂಬ ಪ್ರಶ್ನೆ ಕೇಳಿದರೆ, ಸರ್ಚ್ ಇಂಜಿನ್ ಆ ಪ್ರಾಣಿಯ...
ನವದೆಹಲಿ: ಗೂಗಲ್ ಸರ್ಚ್ನಲ್ಲಿ ಪ್ರಾಣಿಗಳ ಚಿತ್ರಗಳನ್ನು ಹುಡುಕಿದರೆ ಕ್ಷಣ ಮಾತ್ರಕ್ಕೆ ಅದರ ಬಗ್ಗೆ ಮಾಹಿತಿ ಸಿಗುತ್ತದೆ. ಆದರೆ ಇದೀಗ ಪ್ರಾಣಿಗಳ ದನಿಯನ್ನೂ ಕೇಳುವಂಥಾ ಸೌಲಭ್ಯವನ್ನು ಗೂಗಲ್ ಒದಗಿಸಿದೆ. ಪ್ರಾಣಿಗಳ ದನಿ ಹೇಗಿರುತ್ತದೆ ಎಂಬುದನ್ನು ಮಕ್ಕಳಿಗೆ ಹೇಳಿಕೊಡುವುದಕ್ಕಾಗಿ ಗೂಗಲ್ ಈ ಸೌಲಭ್ಯವನ್ನು ಒದಗಿಸಿದೆ.
ಉದಾಹರಣೆಗೆ ಬಳಕೆದಾರರು ಗೂಗಲ್ ನಲ್ಲಿ ಈ ಪ್ರಾಣಿಯ ದನಿ ಯಾವುದು ಎಂಬ ಪ್ರಶ್ನೆ ಕೇಳಿದರೆ, ಸರ್ಚ್ ಇಂಜಿನ್ ಆ ಪ್ರಾಣಿಯ ಇಲ್ಯುಸ್ಟ್ರೇಷನ್, ಪ್ರಾಣಿಯ ಹೆಸರು ಜತೆ ಆ ಪ್ರಾಣಿಯ ದನಿಯ ಸ್ಯಾಂಪಲ್ ನ್ನೂ ತೋರಿಸುತ್ತದೆ.
ವರದಿಗಳ ಪ್ರಕಾರ ಈಗಾಗಲೇ ಗೂಗಲ್ ಸರ್ಚ್ ಇಂಜಿನ್ನಲ್ಲಿ ಜೀಬ್ರಾ, ಕೋತಿ, ಬೆಕ್ಕು, ಸಿಂಹ, ಹಂದಿ, ಆನೆ, ಕುದುರೆ ಮೊದಲಾದ 19 ಪ್ರಾಣಿಗಳ ದನಿ ಲಭ್ಯವಾಗುತ್ತಿದೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.