ಟ್ವಿಟರ್ 
ವಿಜ್ಞಾನ-ತಂತ್ರಜ್ಞಾನ

ಟ್ವಿಟರ್‌ನಲ್ಲಿ ಇನ್ಮುಂದೆ ಟ್ವೀಟ್‌ಗಳನ್ನು ಖಾಸಗಿ ಸಂದೇಶದ ಮೂಲಕ ಕಳುಹಿಸಬಹುದು!

ಟ್ವಿಟರ್ ಗ್ರಾಹಕರು ಡೈರೆಕ್ಟ್ ಮೆಸೇಜ್ ಕಳುಹಿಸಿ ಖಾಸಗಿಯಾಗಿ ಟ್ವೀಟ್ ರವಾನಿಸಬಹುದಾಗಿದೆ. ಟ್ವೀಟ್ ಮಾಡಿದ ಕೂಡಲೇ ಅಲ್ಲಿ ಕೆಳಗೆ ಬಲತುದಿಯಲ್ಲಿ...

ನವದೆಹಲಿ: ಟ್ವೀಟ್ ಸಂದೇಶಗಳನ್ನು ಮತ್ತಷ್ಟು ಆಕರ್ಷಣೀಯವಾಗಿಸಲು ಜಿಐಎಫ್ ಚಿತ್ರ, ಇಮೋಟಿಕಾನ್‌ಗಳ ಫೀಚರ್‌ಗಳಿಂದ ಅಪ್‌ಡೇಟ್ ಮಾಡಿದ ನಂತರ ಸಾಮಾಜಿಕ ತಾಣವಾದ ಟ್ವಿಟರ್ ಶೇರ್ ಎ ಟ್ವೀಟ್ ವಯಾ ಡೈರೆಕ್ಟ್ ಮೆಸೇಜ್ ಎಂಬ ಹೊಸದೊಂದು ವೈಶಿಷ್ಟ್ಯವನ್ನು ಪ್ರಸ್ತುತ ಪಡಿಸಿದೆ.
ಅಂದರೆ ಟ್ವಿಟರ್ ಗ್ರಾಹಕರು ಡೈರೆಕ್ಟ್ ಮೆಸೇಜ್ ಕಳುಹಿಸಿ ಖಾಸಗಿಯಾಗಿ ಟ್ವೀಟ್ ರವಾನಿಸಬಹುದಾಗಿದೆ. ಟ್ವೀಟ್ ಮಾಡಿದ ಕೂಡಲೇ ಅಲ್ಲಿ ಕೆಳಗೆ ಬಲತುದಿಯಲ್ಲಿ More ಎಂಬ ಆಪ್ಶನ್ ಕ್ಲಿಕ್ ಮಾಡಿದರೆ Share a tweet via Direct message ಎಂಬ ಬಟನ್ ಕಾಣಿಸಿಕೊಳ್ಳುತ್ತದೆ. ಅಲ್ಲಿ  ನೀವು ಖಾಸಗಿಯಾಗಿ ಸಂದೇಶ ಕಳುಹಿಸಲು ಬಯಸುವ ಟ್ವಿಟರ್ ಅಕೌಂಟ್ ನ್ನು ಆಯ್ಕೆ ಮಾಡಿ ಅವರಿಗೆ  ಟ್ವೀಟ್‌ನ್ನು ಖಾಸಗಿಯಾಗಿ ಕಳುಹಿಸಬಹುದು. 
ಸ್ನೇಹಿತರಿಗೆ ಮತ್ತು ಗ್ರೂಪ್‌ಗಳಲ್ಲಿ ಪ್ರತಿ ದಿನ ದಶಲಕ್ಷಗಳಷ್ಟು ಖಾಸಗಿ ಸಂದೇಶಗಳು ರವಾನಿಸಲ್ಪಡುತ್ತವೆ. 2015ರಲ್ಲಿ ಖಾಸಗಿ ಸಂದೇಶಗಳ ಸಂಖ್ಯೆಯಲ್ಲಿ ಶೇ.60ರಷ್ಟು ವರ್ಧನೆಯುಂಟಾಗಿದೆ ಎಂದು ಟ್ವಿಟರ್ ಹೇಳಿತ್ತು. ಅದೇ ವೇಳೆ ಟ್ವೀಟ್‌ಗಳನ್ನು ಖಾಸಗಿಯಾಗಿ ಕಳುಹಿಸುವುದರಲ್ಲಿ ಶೇ.200 ವರ್ಧನೆಯಾಗಿದೆ ಎಂದು ಟ್ವಿಟರ್ ತಮ್ಮ ಅಧಿಕೃತ ಬ್ಲಾಗ್‌ನಲ್ಲಿ ಹೇಳಿಕೊಂಡಿದೆ.
ಟ್ವೀಟ್‌ಗಳನ್ನು ಖಾಸಗಿ ಸಂದೇಶಗಳ ಮೂಲಕ ಕಳುಹಿಸಲು ಸಾಧ್ಯವಾಗುವ ಸೌಲಭ್ಯ ಕಲ್ಪಿಸಲು ಗ್ರಾಹಕರು ಒತ್ತಾಯಿಸಿದ್ದೇ ಈ ಸೌಲಭ್ಯವನ್ನು ಕಲ್ಪಿಸಲು ಕಾರಣ ಎಂದು ಟ್ವಿಟರ್ ಹೇಳಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಬಾಲಿವುಡ್ ಹಿರಿಯ ನಟ ನಾನಾ ಪಾಟೇಕರ್ ಇನ್ನಿಲ್ಲ

"ಜೀವಕ್ಕೆ ಕುತ್ತು ತರುವ ಹಾದಿ": ರಷ್ಯಾ ಸೇನಾ ನೇಮಕಾತಿ ಆಮಿಷಗಳಿಗೆ ಬಲಿಯಾಗದಂತೆ ನಾಗರಿಕರಿಗೆ ಭಾರತ ಕಟ್ಟುನಿಟ್ಟಿನ ಸೂಚನೆ, 69 ಭಾರತೀಯರ ಬಿಡುಗಡೆಗೆ ಪಟ್ಟು..!

INDIA ಬ್ಲಾಕ್ ನಲ್ಲಿ ಬಿರುಕು?: ಆಪ್ ಕೈ ಕೊಟ್ಟ ಬೆನ್ನಲ್ಲೇ ಭೋಜನ ಕೂಟಕ್ಕೆ ಸಮಾಜವಾದಿ ಪಕ್ಷ ಗೈರು!

ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಎಳೆದೊಯ್ದು ವಶಕ್ಕೆ ಪಡೆದ ಪೊಲೀಸರು; ಬಸ್‌ನ ಟೈರ್ ಪಂಕ್ಚರ್ ಮಾಡಿದ ಕಾರ್ಯಕರ್ತರು

ಭಾರತವನ್ನು ಜಾಗತಿಕ ಶಕ್ತಿಯಾಗಿಸಿದ್ದು ಮೋದಿ, ಅಂತಹವರ ವಿರುದ್ಧವೇ ಸಂಚು: ಸರ್ಬಿಯಾ ಮಾಜಿ ಅಧ್ಯಕ್ಷ, Video ವೈರಲ್