ನವದೆಹಲಿ: ಸರ್ಚ್ ಇಂಜಿನ್ ದೈತ್ಯ ಗೂಗಲ್ ಭೂದಿನ ಪ್ರಯುಕ್ತ ವಿಶೇಷ ಅನಿಮೇಟೆಡ್ ಡೂಡಲ್ ತಯಾರಿಸಿದೆ.
ಗೂಗಲ್ ಹೋಮ್‌ಪೇಜ್‌ನಲ್ಲಿ ಪೊಲಾರ್ ಬೇರ್, ನರಿ, ಆನೆ, ಆಮೆ ಮತ್ತು ಅಕ್ಟೋಪಸ್ ಮೊದಲಾದ ಪ್ರಾಣಿಗಳ ಚಿತ್ರವನ್ನು ನೀಡಲಾಗಿದೆ.
ಈ ಗೂಗಲ್ ಡೂಡಲ್‌ನ್ನು ಸೋಫಿ ಡಿಯೋ ವಿನ್ಯಾಸ ಮಾಡಿದ್ದಾರೆ.
ಏಪ್ರಿಲ್ 22 ರಂದು ವಿಶ್ವ ಭೂಮಿ ದಿನವನ್ನು ಆಚರಿಸಲಾಗುತ್ತಿದ್ದು, 1970ರಿಂದ ಇದು ಆಚರಣೆಗೆ ಬಂದಿದೆ.