ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ವಿಜ್ಞಾನ-ತಂತ್ರಜ್ಞಾನ

ಡಿವೈಸ್ ರಹಿತ ಭಾವೀ ಬದುಕು ಬಗ್ಗೆ 'ತೆರೆದ ಪತ್ರ'ದಲ್ಲಿ ವಿವರಿಸಿದ ಸುಂದರ್ ಪಿಚೈ

ಸ್ಮಾರ್ಟ್‌ಫೋನ್ ಮತ್ತು ಕಂಪ್ಯೂಟರ್‌ಗಳ ಯುಗ ಅಂತ್ಯವಾಗಲಿದೆ ಎಂದು ಗೂಗಲ್ ಸಿಇಒ ಸುಂದರ್ ಪಿಚೈ ಅಭಿಪ್ರಾಯಪಟ್ಟಿದ್ದಾರೆ. ಇತಿಹಾಸದಲ್ಲಿ ...

ಸುಂದರ್ ಪಿಚೈ
Rashmi Kasaragodu
Updated On : 1 May 2016, 4:18 am
ಸ್ಮಾರ್ಟ್‌ಫೋನ್ ಮತ್ತು ಕಂಪ್ಯೂಟರ್‌ಗಳ ಯುಗ ಅಂತ್ಯವಾಗಲಿದೆ ಎಂದು ಗೂಗಲ್ ಸಿಇಒ ಸುಂದರ್ ಪಿಚೈ ಅಭಿಪ್ರಾಯಪಟ್ಟಿದ್ದಾರೆ. ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಆ್ಯಪಲ್ ಕಂಪನಿಯ ಉತ್ಪನ್ನಗಳು ಮಾರಾಟದಲ್ಲಿಯೂ ಲಾಭ ಗಳಿಸುವುದರಲ್ಲಿಯೂ ಹಿನ್ನಡೆ ಸಾಧಿಸಿರುವ ಬೆನ್ನಲ್ಲೇ ಪಿಚೈ ಈ ರೀತಿಯ ಅಭಿಪ್ರಾಯವೊಂದನ್ನು ಹೇಳಿದ್ದಾರೆ .
ಗೂಗಲ್ ನೌಕರರಿಗಾಗಿ ಬರೆದ ತೆರೆದ ಪತ್ರವೊಂದರಲ್ಲಿ ಮುಂದಿನ ಡಿವೈಸ್‌ಲೆಸ್ (ಸಾಧನ ರಹಿತ) ಬದುಕಿನ ಬಗ್ಗೆ ಪಿಚೈ ಬೆಳಕು ಚೆಲ್ಲಿದ್ದಾರೆ. ತಂತ್ರಜ್ಞಾನ ಮುಂದುವರಿಯುತ್ತಿದ್ದಂತೆ ದೊಡ್ಡ ಗಾತ್ರದ ಕಂಪ್ಯೂಟರ್‌ಗಳನ್ನು  ಅದೃಶ್ಯ  ಲ್ಯಾಪ್‌ಟಾಪ್‌ಗಳು ಹಿಂದಿಕ್ಕಿವೆ. ಯಾವುದೇ ವಿಷಯವನ್ನು ಮನೆಗೆ ಹೋಗಿ ಹುಡುಕುವ ಕಾಲ ಹೋಯಿತು. ಈಗ ಎಲ್ಲವೂ ಆನ್‌ಲೈನ್ ಮೂಲಕ ಬೆರಳ ತುದಿಯಲ್ಲಿ ಸಿಕ್ಕಿ ಬಿಡುತ್ತದೆ.  300 ಮಿಲಿಯನ್‌ಗಿಂತ  3 ಬಿಲಿಯನ್ ಬಳಕೆದಾರರವರೆಗೆ ಎಲ್ಲರೂ ಮೊಬೈಲ್ ಫೋನ್‌ನ ದಾಸರಾಗಿದ್ದೇವೆ. ಮೊಬೈಲ್ ಫೋನ್ ಗಳು ನಮ್ಮೆಲ್ಲಾ ಕೆಲಸವನ್ನು ಸುಲಭವಾಗುವಂತೆ ಮಾಡಿ ಸಮಯವನ್ನು ಉಳಿಸುತ್ತದೆ. ಹೀಗೆಲ್ಲಾ ಆಗಬಹುದೆಂದು ಯಾರಾದರೂ ಊಹಿಸಿದ್ದರೆ? ಆದರೆ ಗೂಗಲ್ ಎಲ್ಲವನ್ನೂ ಸಾಧಿಸಿಯೇ ಬಿಟ್ಟಿತು. 
ಈ ತೆರೆದ ಪತ್ರದಲ್ಲಿ ಅವರು ಕೆಲವು ವಿಷಯಗಳನ್ನು ಪ್ರಸ್ತಾಪಿಸಿದ್ದಾರೆ. ಅವುಗಳು ಹೀಗಿವೆ

Advertisement

Advertisement

ಮುಂಬರುವ ವರುಷಗಳಲ್ಲಿ ಕೃತಕ ಬುದ್ಧಿಮತ್ತೆ (ಆರ್ಟಿಫಿಶಲ್ ಇಂಟೆಲಿಜೆನ್ಸ್) ಮೊಬೈಲ್ ಫೋನ್‌ಗಳನ್ನು ಹಿಂದಿಕ್ಕಲಿವೆ. ಅಂದರೆ ಮುಂದೆ ಜನರ ಕೈಯಲ್ಲಿ ಯಾವುದೇ ಸಾಧನ (ಡಿವೈಸ್) ವಿರುವುದಿಲ್ಲ, ಎಲ್ಲದಕ್ಕೂ ಆರ್ಟಿಫಿಶನ್ ಇಂಟೆಲಿಜೆನ್ಸ್ ಮೂಲವಾಗಲಿದೆ.
ತಂತ್ರಜ್ಞಾನವು ತುಂಬಾ ಬೆಳೆದು ಬಿಟ್ಟಿದೆ. ಕಿಲೋಗಳಿಂದ ಗ್ರಾಂಗಳಿಗೆ, ತೂಕ ರಹಿತದಿಂದ ಅದೃಶ್ಯ ವಸ್ತುಗಳನ್ನು ನಿರ್ಮಿಸುವರೆಗೆ ಎಲ್ಲವೂ ತಂತ್ರಜ್ಞಾನದ್ದೇ ಕಾರುಬಾರು. 0.5 ಕೆಜಿ ಫೋ ನ್ ಬಳಸುತ್ತಿದ್ದ ಆ ಕಾಲ ಹೋಯಿತು. ತಂತ್ರಜ್ಞಾನದ ಲೋಕದಲ್ಲಿ ಗೂಗಲ್ ಚಮತ್ಕಾರವನ್ನೇ ಮಾಡಿದೆ ಎಂದು ಪಿಚೈ ಹೇಳಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments