ಬೆಂಗಳೂರು: ಮೊಬೈಲ್ ಉತ್ಪಾದನೆ ಮತ್ತು ವಿನ್ಯಾಸದಲ್ಲಿ ಜಾಗತಿಕ ಮಟ್ಟದ ನಾಯಕನಾಗಿರುವ ಜಿಯೋನಿ ಸಂಸ್ಥೆ ಭಾರತದಲ್ಲಿ ತನ್ನ ನೂತನ ಮೊಬೈಲ್ ಪಯೋನಿರ್ ಪಿ7 ಬಿಡುಗಡೆ ಮಾಡಿದೆ.
5 ಇಂಚಿನ ಎಚ್‍ಡಿ ಎಪಿಎಸ್ ಡಿಸ್‍ಪ್ಲೇ 4GVoLTE ಮತ್ತು ಸಿಡಿಎಮ್‍ಎ ಸ್ಮಾರ್ಟ್ ಪೋನ್ ಆಗಿದ್ದು ಇದು ಗ್ರಾಹಕ ಬಜೆಟ್ ಸ್ನೇಹಿ ಎನಿಸಿಕೊಂಡಿದೆ.
ಜಿಯೋನಿ ಪಿ7 1.3GHz ಕ್ವಾಡ್ ಕೋರ್ ಪ್ರೋಸೆಸರ್, 2 ಜಿಬಿ ರಾಮ್ ಮತ್ತು 16 ಜಿಬಿ ಮೆಮೋರಿ (128 ಜಿಬಿ ಎಕ್ಸ್‍ಪಾಂಡೇಬಲ್), 5 ಮೆಗಾ ಪಿಕ್ಸೆಲ್ ಫ್ರಂಟ್ ಕ್ಯಾಮೆರಾ ಜೊತೆಗೆ ಪ್ಲಾಶ್ ಕೂಡ ಇದ್ದು ಅಪರೂಪದ ಸೆಲ್ಫೀ ತೆಗೆಯುವ ಅವಕಾಶ ಈ ವೊಬೈಲ್ ನಿಮಗೆ ಒದಗಿಸುತ್ತದೆ. 8 ಮೆಗಾ ಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ ಹೊಂದಿದೆ.
2300 ಎಂಎಎಚ್ ಲಿ-ಐಯಾನ್ ಪಾಲಿಮರ್ ಬ್ಯಾಟರಿ ಹೊಂದಿದ್ದು, 259 ಗಂಟೆಗಳ ಸುಧೀರ್ಘ ಸ್ಟಾಂಡ್ ಬೈ ಬ್ಯಾಟರಿ ಇರುತ್ತದೆ. ಆ್ಯಂಡ್ರಾಯ್ಡ್ ಲಾಲಿಪಾಪ್ ವಿ6.0 (ಅಮಿಗೋ 3.2) ದಿನ ಆಯಾ ಕೆಲಸವನ್ನು ತಡರಹಿತ ಪ್ರದರ್ಶನದಿಂದ ಸಕ್ರಿಯಗೊಳಿಸುತ್ತದೆ.
ವೈಟ್, ಗೋಲ್ಡ್ ಮತ್ತು ಗ್ರೇ ಬಣ್ಣಗಳಲ್ಲಿ ಲಭ್ಯವಿದೆ. ಎಲ್ಲಾ ಥರದಲ್ಲೂ ಗ್ರಾಹಕ ಸ್ನೇಹಿ ಅನ್ನಿಸಿಕೊಂಡಿರುವ ಜಿಯೋನಿ ಪಿ7 ಮೊಬೈಲ್ ಬೆಲೆ ರೂ. 9,999. ಡಿಸೆಂಬರ್ 12 ರಿಂದ ಭಾರತದಾದ್ಯಂತ ಲಭ್ಯ.
ವೈಶಿಷ್ಟ್ಯಗಳು
• ಸ್ಕ್ರೀನ್ ಟೈಪ್- 12.7 ಸೆಂ.ಮಿ (5.0) ಎಚ್ ಡಿ, ಐಪಿಎಸ್ ಸೋಡಾ ಕೆಪಾಸಿಟಿವ್
• ಸಿಪಿಯು- 1.3 GHz ಕ್ವಾಡ್ ಕೋರ್
• ಮೆಮೋರಿ- 2 ಜಿಬಿ ರ್ಯಾಮ್ + 16 ಜಿಬಿ (128 ಜಿಬಿ ಎಕ್ಸ್‍ಪಾಂಡೇಬಲ್)
• ಕ್ಯಾಮೆರಾ- 8 ಮೆಗಾ ಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ ಜೊತೆ ಎಲ್‍ಇಡಿ ಫ್ಲಾಶ್
• ಫ್ರಂಟ್ ಕ್ಯಾಮೆರಾ- 5 ಮೆಗಾ ಪಿಕ್ಸೆಲ್( ಸ್ಕ್ರೀನ್ ಫ್ಲಾಶ್ )
• ಬ್ಯಾಟರಿ- 2300 ಎಂಎಎಚ್ ಲಿ-ಐಯಾನ್ ಪಾಲಿಮರ್
• ಓಎಸ್- ಆ್ಯಂಡ್ರಾಯ್ಡ್ ಲಾಲಿಪಾಪ್ ವಿ6.0 (ಅಮಿಗೋ 3.2)