ನವದೆಹಲಿ: ಸಾಮಾಜಿಕ ಮಾಧ್ಯಮ ಫೇಸ್ ಬುಕ್ ನಲ್ಲಿ ತಮ್ಮ ಮಕ್ಕಳು ಸುರಕ್ಷಿತವಾಗಿರಲು ಪೋಷಕರಿಗೆ ಪೋರ್ಟಲ್ ವೊಂದನ್ನು ಆರಂಭಿಸಿದೆ.
ಪೋಷಕರು ತಮ್ಮ ಅನುಭವಗಳನ್ನು ಬಳಸಿಕೊಂಡು ಮಕ್ಕಳ ಅನುಭವದ ಜೊತೆ ಹಂಚಿಕೊಂಡು ಫೇಸ್ ಬುಕ್ ನ್ನು ಸುರಕ್ಷಿತವಾಗಿ ಬಳಸಲು ಪೋಷಕರ ಪೋರ್ಟಲ್ ಆರಂಭಿಸಲಾಗಿದೆ. ಇದರಲ್ಲಿ ಪೋಷಕರು, ಹದಿಹರೆಯದವರು ವಿಶ್ವಾದ್ಯಂತ ಭಾಗಿಯಾಗುತ್ತಾರೆ ಎಂದು ಫೇಸ್ ಬುಕ್ ಹೇಳಿಕೆಯಲ್ಲಿ ತಿಳಿಸಿದೆ.
ಅಮೆರಿಕಾ ಮೂಲದ ಕಂಪೆನಿಯಾದ ಫೇಸ್ ಬುಕ್ ಇತ್ತೀಚೆಗೆ ತನ್ನ ಸುರಕ್ಷತಾ ಕೇಂದ್ರವನ್ನು ಉನ್ನತದರ್ಜೆಗೇರಿಸಿದ್ದು ಬೆದರಿಕೆ ತಡೆಗಟ್ಟುವಿಕೆಯನ್ನು ಇದು ಒಳಗೊಂಡಿದೆ.
ಪೋಷಕರಿಗೆ ಫೇಸ್ ಬುಕ್ ಹೇಗೆ ಕೆಲಸ ಮಾಡುತ್ತದೆ, ಮಕ್ಕಳೊಂದಿಗೆ ಮಾತನಾಡುವುದು ಹೇಗೆ ಎಂದು ತಿಳಿದುಕೊಳ್ಳುವುದು, ಆನ್ ಲೈನ್ ನಲ್ಲಿ ಸುರಕ್ಷಿತವಾಗಿರುವುದು ಹೇಗೆ ಮತ್ತು ವಿಶ್ವದ ತಜ್ಞರಿಂದ ಸಂಪನ್ಮೂಲಗಳನ್ನು ಪೋಷಕರ ಪೋರ್ಟಲ್ ಒಳಗೊಂಡಿದೆ.55 ಭಾಷೆಗಳನ್ನು ಇದು ಒಳಗೊಂಡಿದ್ದು 11 ಭಾರತೀಯ ಭಾಷೆಗಳಲ್ಲಿ ಸಿಗುತ್ತದೆ. ಇದು ಮೊಬೈಲ್ ಸ್ನೇಹಿಯಾಗಿದ್ದು ಹಂತ ಹಂತವಾದ ವಿಡಿಯೋ ಒಳಗೊಂಡಿದೆ.
ನಮ್ಮ ಜನಸಮುದಾಯವನ್ನು ಸುರಕ್ಷಿತವಾಗಿಟ್ಟುಕೊಳ್ಳುವುದನ್ನು ನಾವು ನೋಡುತ್ತೇವೆ. ಫೇಸ್ ಬುಕ್ ನಲ್ಲಿ ಜನರು ಅದು ಸುರಕ್ಷಿತವಾಗಿದೆ, ತಮ್ಮ ಬೇರೆಯವರ ಜೊತೆ ಹಂಚಿಕೊಳ್ಳಬಹುದು ಎಂದು ದೃಢಪಟ್ಟ ಮೇಲೆ ಫೇಸ್ ಬುಕ್ ನಲ್ಲಿ ಖಾತೆ ತೆರೆಯುತ್ತಾರೆ, ಇದನ್ನು ನಾವು ಗಮನದಲ್ಲಿಟ್ಟುಕೊಳ್ಳುತ್ತೇವೆ ಎನ್ನುತ್ತಾರೆ ಫೇಸ್ ಬುಕ್ ನ ಸಾರ್ವಜನಿಕ ಯೋಜನೆಯ ನಿರ್ದೇಶಕ ಅಂಖಿ ದಾಸ್.
ಪೋಷಕರ ಪೋರ್ಟಲ್ www.facebook.com/safety/parents ನಲ್ಲಿ ಸಿಗುತ್ತದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics