ಸಾಂಕೇತಿಕ ಚಿತ್ರ 
ವಿಜ್ಞಾನ-ತಂತ್ರಜ್ಞಾನ

ಮಂಗಳನ ಅಂಗಳಕ್ಕೆ ತಲುಪಲು 3 ದಿನ ಸಾಕು!

ಶಕ್ತಿಶಾಲಿ ಲೇಸರ್ ಕಿರಣಗಳ ಸಹಾಯದಿಂದ ಮಂಗಳ ಅಂಗಳಕ್ಕೆ ಅಂತರಿಕ್ಷ ನೌಕೆಗಳನ್ನು ಕಳುಹಿಸುವ ಬಗ್ಗೆ ನಾಸಾ ಪ್ರಯೋಗಗಳನ್ನು....

ವಾಷಿಂಗ್ಟನ್: ಬಾಹ್ಯಾಕಾಶ ಯಾತ್ರೆಗೆ ಸಂಬಂಧಪಟ್ಟಂತೆ ನಾಸಾ ಹೊಸ ರೀತಿಯ ಪ್ರಯೋಗಗಳಿಗೆ ಕೈ ಹಾಕಿದ್ದು, ಈ ಪ್ರಯೋಗ ಯಶಸ್ವಿಯಾದರೆ ಕೇವಲ ಮೂರು ದಿನಗಳಲ್ಲಿ ಮಂಗಳನ ಅಂಗಳಕ್ಕೆ ತಲುಪಬಹುದು.
ಶಕ್ತಿಶಾಲಿ ಲೇಸರ್ ಕಿರಣಗಳ ಸಹಾಯದಿಂದ ಮಂಗಳ ಅಂಗಳಕ್ಕೆ ಅಂತರಿಕ್ಷ ನೌಕೆಗಳನ್ನು ಕಳುಹಿಸುವ ಬಗ್ಗೆ ನಾಸಾ ಪ್ರಯೋಗಗಳನ್ನು ಮಾಡುತ್ತಿದೆ.
ಒಂದು ಗ್ರಾಂನಷ್ಟಿರುವ ವಸ್ತುವನ್ನು ಶೇ. 25 ಪಟ್ಟು ವೇಗದಲ್ಲಿ ಸಂಚರಿಸುವಂತೆ ಮಾಡುವ ಶಕ್ತಿ ಲೇಸರ್‌ಗಿದೆ. ಇದು ಸಾಧ್ಯವಾಗುವುದಾದರೆ ಭೂಮಿಯಿಂದ ಅತೀ ಹತ್ತಿರವಿರುವ ನಕ್ಷತ್ರಕ್ಕೆ ಸಾಗಲು 20 ವರುಷಗಳಷ್ಟೇ ಸಾಕು. ಕ್ಯಾಲಿಫೋರ್ನಿಯಾ ವಿಶ್ವ ವಿದ್ಯಾನಿಲಯದ ಫಿಲಿಪ್ ಲುಬಿನ್ ಎಂಬವರು ನಡೆಸಿದ ಈ ಯೋಜನೆಗೆ ಅಮೆರಿಕ ಬಾಹ್ಯಾಕಾಶ ಸಂಸ್ಥೆ ನಾಸಾ ಸೈ ಎಂದಿದೆ.
ಪ್ರಸ್ತುತ ರಾಕೆಟ್ ಉಡ್ಡಯಣ ರೀತಿಯಲ್ಲಾದರೆ ಬಾಹ್ಯಾಕಾಶ ನೌಕೆಯೊಂದು ಭೂಮಿಯಿಂದ ಮಂಗಳ ಗ್ರಹಕ್ಕೆ ತಲುಪಬೇಕಾದರೆ 5 ತಿಂಗಳುಗಳೇ ಬೇಕು. ಆದರೆ ಲೇಸರ್ ತಂತ್ರಜ್ಞಾನ ಬಳಸಿದರೆ 100 ಕೆಜಿ ತೂಕದ ಬಾಹ್ಯಾಕಾಶ ನೌಕೆ 3 ದಿನಗಳಲ್ಲಿ  ಮಂಗಳನ ಅಂಗಳ ಸೇರುತ್ತದೆ.  ಲೇಸರ್‌ಗೆ ವಸ್ತುವೊಂದನ್ನು ಚಲಿಸುವಂತೆ ಮಾಡುವ ಗುಣವಿದೆ. ಈ ಆಧಾರದಲ್ಲಿ ಲೇಸರ್ ತಂತ್ರಜ್ಞಾನವನ್ನು ಇಲ್ಲಿ ಬಳಸಲಾಗುತ್ತದೆ. ಆದಾಗ್ಯೂ, ಈ ತಂತ್ರಜ್ಞಾನವನ್ನು ಬಳಸಿ ಅಂತರಿಕ್ಷ ನೌಕೆಯನ್ನು ಕಳುಹಿಸುವ ಕಾಲ ದೂರವಿಲ್ಲ ಎಂದು ನಾಸಾ ಹೇಳಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸಿಇಸಿ ವಿರುದ್ಧದ ವಿಪಕ್ಷಗಳ ಪ್ರತಿಭಟನೆ: ವಶಕ್ಕೆ ಪಡೆದ ಬೆನ್ನಲ್ಲೇ ರಾಹುಲ್, ಪ್ರಿಯಾಂಕಾ ಗಾಂಧಿ ಬಿಡುಗಡೆ

ಅಧಿಕಾರಿಯಂತೆ ನಟಿಸಿ ಆಪ್ ನಾಯಕನಿಗೆ ಧೋಕಾ; ಮದುವೆಯಾಗಿ ಆಭರಣಗಳೊಂದಿಗೆ ಮಹಿಳೆ ಪರಾರಿ!

ಆಪರೇಷನ್ ಸಿಂಧೂರ್, ರಕ್ಷಕ್‌ನಲ್ಲಿ ಪ್ರಮುಖ ಪಾತ್ರವಹಿಸಿದ್ದ ಅಶುತೋಷ್ ದೀಕ್ಷಿತ್ ವಾಯುಪಡೆಯ ನೂತನ ಮುಖ್ಯಸ್ಥ!

ಮಚ್ಛಾರ್ ಆರೋಗ್ಯಯಲ್ಲಿ 'ಸ್ಥಿರ ಸುಧಾರಣೆ': ಭಾರತೀಯ ರಾಯಭಾರ ಕಚೇರಿ

KPSC ನೇಮಕಾತಿ ಹಗರಣ: EDಯಿಂದ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್‌, ಸದಸ್ಯೆ ಗೀತಾ ಬಂಧನ!