ಫೇಸ್ ಬುಕ್ (ಸಂಗ್ರಹ ಚಿತ್ರ) 
ವಿಜ್ಞಾನ-ತಂತ್ರಜ್ಞಾನ

ಫೇಸ್ ಬುಕ್ ನಲ್ಲಿ 200 ಕ್ಕಿಂತ ಹೆಚ್ಚು ಸ್ನೇಹಿತರಿರಲು ಸಾಧ್ಯವೇ ಇಲ್ಲ ಎನ್ನುತ್ತಿದೆ ಈ ಸಂಶೋಧನೆ

ಫೇಸ್ ಬುಕ್ ನಲ್ಲಿ ಯಾರಾದರೂ ತನೆಗೆ 1,000 ಸ್ನೇಹಿತರಿದ್ದಾರೆ ಎಂದರೆ ಅವರು ಸುಳ್ಳು ಹೇಳುತ್ತಿದ್ದಾರೆ ಎಂದರ್ಥ. ಹೇಗೆ ಅಂತೀರಾ?

ಲಂಡನ್: ಫೇಸ್ ಬುಕ್ ನಲ್ಲಿ ಯಾರಾದರೂ ತನೆಗೆ 1,000 ಸ್ನೇಹಿತರಿದ್ದಾರೆ ಎಂದರೆ ಅವರು ಸುಳ್ಳು ಹೇಳುತ್ತಿದ್ದಾರೆ ಎಂದರ್ಥ. ಹೇಗೆ ಅಂತೀರಾ? ಹೊಸ ಸಂಶೋಧನಾ ವರದಿ ಪ್ರಕಾರ ಫೇಸ್ ಬುಕ್ ನಲ್ಲಿ 200 ಕ್ಕಿಂತ ಹೆಚ್ಚು ನಿಜವಾದ ಆಪ್ತ  ಸ್ನೇಹಿತರು ಇರುವುದಕ್ಕೆ ಸಾಧ್ಯವಿಲ್ಲವಂತೆ.

ಆಕ್ಸ್ ಫರ್ಡ್ ವಿಶ್ವವಿದ್ಯಾನಿಲಯದ ಮನಶ್ಶಾಸ್ತ್ರಜ್ಞ ಪ್ರಾಧ್ಯಾಪಕ ರಾಬಿನ್ ಡನ್ಬಾರ್ ಈ ಬಗ್ಗೆ ಎರಡು ಸಮೀಕ್ಷೆ ನಡೆಸಿದ್ದು, ನಿರಂತರವಾಗಿ ಫೇಸ್ ಬುಕ್ ಬಳಕೆ ಮಾಡುವವರಿಗೆ ಇರುವ ನಿಜವಾದ ಆಪ್ತ ಸ್ನೇಹಿತರು( ವಯಕ್ತಿಕವಾಗಿ ಗುರುತಿರುವವರ) ಸಂಖ್ಯೆ ಕೇವಲ 155 ಆಗಿತ್ತು. ಎರಡನೇ ಸಮೀಕ್ಷೆಯಲ್ಲಿ ಈ ಸಂಖ್ಯೆ 183 ಕ್ಕೆ ತಲುಪಿದ್ದು ಓರ್ವ ವ್ಯಕ್ತಿಯ ಸ್ನೇಹಿತರ ಪಟ್ಟಿಯಲ್ಲಿ ಚೆನ್ನಾಗಿ ಪರಿಚಯವಿರುವವರ ಸಂಖ್ಯೆ 200 ದಾಟುವುದಿಲ್ಲ ಎಂದು ತಿಳಿದುಬಂದಿದೆ.     
ಮಹಿಳೆಯರು ತಮಗೆ ಗುರುತಿರುವವರ ಸ್ನೇಹಿತರನ್ನು ಹೊಂದಿರುವುದರಲ್ಲಿ ಪುರುಷರಿಗಿಂತ ಮುಂದಿದ್ದಾರೆ. ಡನ್ಬಾರ್ ಪ್ರಕಾರ ಸ್ನೇಹಿತರನ್ನು ಮುಖಃ ಭೇಟಿ ಮಾಡದೆ ಇದ್ದರೆ ಸ್ನೇಹ ಸಂಬಂಧಗಳು ಹೆಚ್ಚು ದಿನ ಉಳಿಯುವುದಿಲ್ಲವಂತೆ. ಆದ್ದರಿಂದ ಮುಖತಃ ಪರಿಚಯವಿರುವ ಸ್ನೇಹಿತರ ಪಟ್ಟಿ 200 ನ್ನು ದಾಟುವುದಿಲ್ಲ ಎಂದು ಸಮೀಕ್ಷೆ ಆಧಾರಿತ ಸಂಶೋಧನೆ ಹೇಳಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ನನ್ನ ವಿರುದ್ಧ 100 ಎಫ್‌ಐಆರ್‌ ದಾಖಲಿಸಿ ಹೆದರಲ್ಲ, ಪ್ರತಿಯೊಂದೂ ನನಗೆ ಪದಕ': ರಾಹುಲ್ ಗಾಂಧಿ

CM ಆಗಲು ಸಿದ್ದರಾಮಯ್ಯ ವಿರುದ್ಧ ಡಿಕೆಶಿ ಸ್ಟಿಂಗ್ ಆಪರೇಷನ್; ಈಗ ಸಚಿವರ ವಿರುದ್ಧವೂ ಅದೇ ತಂತ್ರ: ಕುಮಾರಸ್ವಾಮಿ ಗಂಭೀರ ಆರೋಪ

'ನಾನು ಕ್ಯಾಬ್‌ನಲ್ಲಿ ಓಡಾಡೋ ಹುಡುಗಿ ಕಣ್ರೋ.. ಹೋಗ್ಲಿ ಪಾಪ ಅಂತಾ ಬಸ್`ನಲ್ಲಿ ಬಂದೆ': MTC ಬಸ್‌ನಲ್ಲಿ ಕುಡಿದ ಮತ್ತಿನಲ್ಲಿ ಯುವತಿ ರಂಪಾಟ, Video ವೈರಲ್

ಅಮೆರಿಕ ಸೇನೆಯ ಮಾಜಿ ಮೇಜರ್‌ಗೆ ಶೂಟ್ ಮಾಡುವ ಮೂಲಕ ಮರಣದಂಡನೆ ಶಿಕ್ಷೆ: 65 ವರ್ಷಗಳಲ್ಲಿ ಇದೇ ಮೊದಲು!

SIR ವೇಳೆ ಡಿಲೀಟ್ ಆಗಿರುವ 13.3 ಕೋಟಿ ಮತದಾರರ ಪತ್ತೆಗೆ ಕಾಂಗ್ರೆಸ್‌ನಿಂದ ‘ಮತ ರಕ್ಷಕ’ರ ನೇಮಕ!