ನವದೆಹಲಿ: 67 ನೇ ಗಣರಾಜ್ಯೋತ್ಸವ ಪ್ರಯುಕ್ತ ಸರ್ಚ್ ಇಂಜಿನ್ ಗೂಗಲ್ ವಿಶೇಷ ಡೂಡಲ್ ತಯಾರಿಸಿದೆ. ಗಣರಾಜ್ಯೋತ್ಸವ ಪರೇಡ್ನ ಪ್ರಮುಖ ಆಕರ್ಷಣೆಯಾದ ಬಿಎಸ್ಎಫ್ ನ ಒಂಟೆ ದಳದ ಪಥಸಂಚನದ ಚಿತ್ರವನ್ನು ಡೂಡಲ್ ನಲ್ಲಿ ಬಳಸಲಾಗಿದೆ.
ವರ್ಣ ರಂಜಿತವಾಗಿ ಅಲಂಕಾರಗೊಂಡ ಆರು ಒಂಟೆಗಳ ಮೇಲೆ ಸಂಗೀತವಾದ್ಯ ನುಡಿಸುತ್ತಾ ಸಾಗುವ ವಾದ್ಯ ತಂಡದ ಪಥಸಂಚಲನವನ್ನು ಈ ಬಾರಿ ಗೂಗಲ್ ತಮ್ಮ ಡೂಡಲ್ ಮೂಲಕ ಬಿಂಬಿಸಿದೆ.
ಗಣರಾಜ್ಯೋತ್ಸವದ ಪರೇಡ್ನಲ್ಲಿ ಬಿಎಸ್ಎಫ್ ಮಾತ್ರ ಪ್ರಾಣಿಗಳನ್ನು ಸಿಂಗರಿಸಿ ಪಥಸಂಚಲನ ಮಾಡುವುದು ಅತ್ಯಾಕರ್ಷಕವಾಗಿರುತ್ತದೆ.