ಗೂಗಲ್ ಗೆ ಸದ್ಯ ತನ್ನದೇ ಬ್ರಾಂಡ್ನ ಸ್ಮಾರ್ಟ್ಫೋನ್ ನಿರ್ಮಾಣ ಮಾಡುವ ಯೋಚನೆ ಇಲ್ಲ: ಪಿಚೈ
ಗೂಗಲ್ ಗೆ ಸದ್ಯ ತನ್ನದೇ ಬ್ರಾಂಡ್ನ ಸ್ಮಾರ್ಟ್ಫೋನ್ ಗಳನ್ನು ನಿರ್ಮಿಸುವ ಯೋಚನೆ ಇಲ್ಲ ಎಂದು ಭಾರತೀಯ ಮೂಲದ ಗೂಗಲ್ ನ ಮುಖ್ಯ...
ನ್ಯೂಯಾರ್ಕ್: ಗೂಗಲ್ ಗೆ ಸದ್ಯ ತನ್ನದೇ ಬ್ರಾಂಡ್ನ ಸ್ಮಾರ್ಟ್ಫೋನ್ ಗಳನ್ನು ನಿರ್ಮಿಸುವ ಯೋಚನೆ ಇಲ್ಲ ಎಂದು ಭಾರತೀಯ ಮೂಲದ ಗೂಗಲ್ ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುಂದರ್ ಪಿಚೈ ಅವರು ಹೇಳಿದ್ದಾರೆ.
ಮಾಧ್ಯಮಕ್ಕೆ ನೀಡಿದ ಸಂದರ್ಶನವೊಂದರಲ್ಲಿ ಈ ಬಗ್ಗೆ ಪ್ರತಿಕ್ರಿಯಿಸಿದ ಪಿಚೈ, ಮುಂಬರುವ ದಿನಗಳಲ್ಲಿ ನಮ್ಮ ಜತೆ ಕೈಜೋಡಿಸಿರುವ ಹಾರ್ಡ್ವೇರ್ ಕಂಪನಿಗಳ ಜತೆ ಕೆಲಸ ಮಾಡುವ ಯೋಜನೆ ಕಡೆ ಹೆಚ್ಚಿನ ಒಲವು ತೋರಲಾಗುತ್ತಿದೆ. ‘ನೆಕ್ಸಸ್’ ಮೇಲೆ ಸಾಕಷ್ಟು ಹೂಡಿಕೆ ಮಾಡಲಾಗಿದ್ದು, ನೆಕ್ಸಸ್ ಡಿವೈಸಸ್ಗಳ ಉತ್ತಮ ಸೇವೆಯ ಕಡೆ ಹೆಚ್ಚಿನ ಒಲವು ಹೊಂದಿದ್ದೇವೆ. ನಮ್ಮ ಮುಂದೆ ಸಾಕಷ್ಟು ವೈವಿಧ್ಯತೆಯ ಬಿಡಿ ಭಾಗಗಳಿದ್ದು, ಯಾವುದಕ್ಕೆ ಹೆಚ್ಚು ಮಹತ್ವ ನೀಡಬೇಕೆನ್ನುವುದರ ಬಗ್ಗೆ ಚಿಂತನೆ ನಡೆಸುತ್ತಿದ್ದೇವೆ ಎಂದಿದ್ದಾರೆ.
ಭಾರತ ಮತ್ತು ಚೀನಾದಲ್ಲಿ ಗೂಗಲ್ ಸೇವೆಗಳು ಹೇಗಿವೆ ಎನ್ನುವುದು ಅತ್ಯುತ್ತಮ ಮಾದರಿಯಾಗಿದೆ. ಮಾರುಕಟ್ಟೆಯಲ್ಲಿ ಉತ್ತಮ ಸೇವೆ ಒದಗಿಸುವಲ್ಲಿ ಯಶಸ್ವಿಯಾಗಿದ್ದೇವೆ ಎನ್ನುವ ಸಮಾಧಾನ ನಮಗಿದೆ ಎಂದಿರುವ ಸುಂದರ್ ಪಿಚೈ, ಜಾಗತಿಕವಾಗಿ ಇಂದು ಸಾಕಷ್ಟು ಸ್ಪರ್ಧೆಯಿದೆ. ಸ್ಮಾರ್ಟ್ಫೋನ್, ಹಾರ್ಡ್ವೇರ್ ಹೆಚ್ಚು ಸಮರ್ಥವಾದ ಉದ್ಯಮ ಕ್ಷೇತ್ರಗಳಾಗಿವೆ. ಅಮೇಜಾನ್ ಕೂಡ ಆಂಡ್ರಾಯ್್ಡೆ ಸಾಕಷ್ಟು ಅವಲಂಬಿಸಿದೆ. ಆಂಡ್ರಾಯ್್ಡ ಒಂದು ಅತ್ಯದ್ಭುತವಾದ ವೇದಿಕೆಯಾಗಿದೆ ಎಂದಿದ್ದಾರೆ.
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.