ರೇ ಟೋಮಿಲ್‌ಸನ್ 
ವಿಜ್ಞಾನ-ತಂತ್ರಜ್ಞಾನ

ಇಮೇಲ್ ಕಂಡುಹಿಡಿದ ತಂತ್ರಜ್ಞ ರೇ ಟೋಮಿಲ್‌ಸನ್ ನಿಧನ

ತಂತ್ರಜ್ಞಾನ ಲೋಕದಲ್ಲಿ ಬದಲಾವಣೆಯನ್ನು ಸೃಷ್ಟಿಸಿದ ಇಮೇಲ್ ನ್ನು ಕಂಡುಹಿಡಿದ ಮತ್ತು ಇಮೇಲ್‌ಗಳಿಗಾಗಿ @ ಸಂಜ್ಞೆಯನ್ನು ನೀಡಿದ ರೇ...

ವಾಷಿಂಗ್ಟನ್: ತಂತ್ರಜ್ಞಾನ ಲೋಕದಲ್ಲಿ ಬದಲಾವಣೆಯನ್ನು ಸೃಷ್ಟಿಸಿದ ಇಮೇಲ್ ನ್ನು ಕಂಡುಹಿಡಿದ ಮತ್ತು ಇಮೇಲ್‌ಗಳಿಗಾಗಿ @ ಸಂಜ್ಞೆಯನ್ನು ನೀಡಿದ ರೇ ಟೋಮಿಲ್‌ಸನ್(74 ) ಶನಿವಾರ ಸಂಜೆ ನಿಧನರಾಗಿದ್ದಾರೆ. 
1971ರಲ್ಲಿ ರೇ ಟೋಮಿಲ್‌ಸನ್ ಇಮೇಲ್ ತಂತ್ರಜ್ಞಾನವನ್ನು ಪರಿಚಯಿಸಿದ್ದರು. ಅಲ್ಲಿಯವರೆಗೆ ಒಂದು ಕಂಪ್ಯೂಟರ್ ನಿಂದ ಇನ್ನೊಂದು ಕಂಪ್ಯೂಟರ್‌ಗೆ ಮೇಲ್ ಕಳಿಸುವ ತಂತ್ರಜ್ಞಾನವಿರಲಿಲ್ಲ. ರೇ ಅವರು ಇಲೆಕ್ಟ್ರಾನಿಕ್ ಮೇಲ್ ಕಂಡು ಹಿಡಿದ ನಂತರ ಸಂವಹನವೂ ಸುಸೂತ್ರವಾಗಲು ಇದು ಸಹಾಯ ಮಾಡಿತು.
ಮಸಾಚ್ಯುಸೆಟ್ಸ್ ನಲ್ಲಿ ಬಿಬಿಎನ್ ಎಂಬ ಸಂಸ್ಥೆಯೊಂದರಲ್ಲಿ ಕಂಪ್ಯೂಟರ್ ಇಂಜಿನಿಯರ್ ಆಗಿದ್ದ ರೇ, ಸೆಂಡ್ ಮೆಸೇಜ್ ಪ್ರೋಗ್ರಾಂ ಎಂಬ ಸಾಫ್ಟ್‌ವೇರ್ ಮೂಲಕ ಮೊದಲ ಬಾರಿ ಇಮೇಲ್ ಕಳುಹಿಸಿದ್ದರು. 
ಅರ್ಪಾನೆಟ್‌ಗೆ ಹೊಂದುವ ರೀತಿಯಲ್ಲಿ 1972ರಲ್ಲಿ ರೇ, ಇಲೆಕ್ಟ್ರಾನಿಕ್ ಮೇಲ್‌ನ್ನು ಸಿದ್ಧಪಡಿಸಿದ್ದರು. ಅದೇ ವೇಳೆ @ ಎಂಬ ಸಂಜ್ಞೆಯನ್ನೂ ಮೊದಲ ಬಾರಿ ಪರಿಚಯಿಸಿದ ವ್ಯಕ್ತಿಯೂ ರೇ ಆಗಿದ್ದಾರೆ. 1982ರಲ್ಲಿ ಇಲೆಕ್ಟ್ರಾನಿಕ್ ಮೇಲ್ ಅನ್ನು ಇಮೇಲ್ ಎಂದ ಕರೆಯಲಾಯಿತು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಾಜ್ಯ ಸರ್ಕಾರಕ್ಕೆ 'ಸ್ಟಿಂಗ್ ಆಪರೇಷನ್' ಆತಂಕ: ಟ್ರ್ಯಾಪ್‌ಗೆ ಯತ್ನ ನಡೆಯುತ್ತಿದೆ, ಹುಷಾರಾಗಿರಿ ; 5 ಸಚಿವರಿಗೆ ಡಿಕೆಶಿ ಎಚ್ಚರಿಕೆ ಸಂದೇಶ

‘ವೈಯಕ್ತಿಕ ಮಹತ್ವಾಕಾಂಕ್ಷೆ ಅಲ್ಲ, ಧ್ಯೇಯಕ್ಕಾಗಿ ಬದುಕಿದ್ದೇನೆ, ದೇಶದ ಜನತೆಗೆ ತಲೆಬಾಗುತ್ತೇನೆ’: ಆಡಳಿತದಲ್ಲಿ 25 ವರ್ಷ ಪೂರೈಸಿದ ಪ್ರಧಾನಿ ಮೋದಿ ಮಾತು; Video

42 ಎಸೆತ, 102 ರನ್: ವಿರಾಟ್ ಕೊಹ್ಲಿಯ ಸಾರ್ವಕಾಲಿಕ ದಾಖಲೆಯೇ ಉಡೀಸ್‌ ಮಾಡಿದ ಶ್ರೇಯಸ್ ಅಯ್ಯರ್‌!

ಹಾಸನದ ಹೇಮಾವತಿ ನಾಲೆಯಲ್ಲಿ ಪ್ಲಾಸ್ಟಿಕ್‌ ಚೀಲದಲ್ಲಿ ವೃದ್ಧೆಯ ಶವ ಪತ್ತೆ: ಕೊಲೆ ಶಂಕೆ

ರಷ್ಯಾ ಕರಾವಳಿಯಲ್ಲಿ ಡ್ರೋನ್ ದಾಳಿ: ಹೊತ್ತಿ ಉರಿದ ತೈಲ ಟ್ಯಾಂಕರ್‌, 23 ಭಾರತೀಯ ಸಿಬ್ಬಂದಿ ಪಾರು..!