ವಿಜ್ಞಾನ-ತಂತ್ರಜ್ಞಾನ

ಐಆರ್​ಎನ್​ಎಸ್​ಎಸ್-1ಎಫ್ ಉಪಗ್ರಹ ಉಡಾವಣೆಗೆ ಕ್ಷಣಗಣನೆ

Vishwanath S

ಚೆನ್ನೈ: ಭಾರತೀಯ ಪ್ರಾದೇಶಿಕ ಮಾರ್ಗಸೂಚಿ ಉಪಗ್ರಹ ವ್ಯವಸ್ಥೆಯ ಭಾಗವಾಗಿ 6ನೇ ಐಆರ್​ಎನ್​ಎಸ್​ಎಸ್-1ಎಫ್ ಉಪಗ್ರಹ ಉಡಾವಣೆಗೆ ಕ್ಷಣಗಣನೆ ಶುರುವಾಗಿದೆ.

ಉಪಗ್ರಹ ಉಡಾವಣೆಗೆ ಇಸ್ರೋ ಸಿದ್ಧತೆ ಪೂರ್ಣಗೊಳಿಸಿದ್ದು, ಮಾರ್ಚ್ 10 ರಂದು ಶ್ರೀಹರಿ ಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಸಂಜೆ 4 ಗಂಟೆಗೆ ಉಪಗ್ರಹ ಉಡಾವಣೆಯಾಗಲಿದೆ. ಪಿಎಸ್​ಎಲ್​ವಿ-ಸಿ32 ರಾಕೆಟ್ ಉಪಗ್ರಹವನ್ನು ಅಂತರಿಕ್ಷಕ್ಕೆ ಹೊತ್ತೊಯ್ಯಲಿದೆ.

ಉಪಗ್ರಹ ಒಟ್ಟು 1425 ಕೆ.ಜಿ. ತೂಕವಿದ್ದು, ಈಗಾಗಲೇ ಉಡಾಯಿಸಲಾಗಿರುವ ಐಆರ್​ಎನ್​ಎಸ್​ಎಸ್ 1ಎ, 1ಬಿ, 1ಸಿ, 1ಡಿ ಮತ್ತು 1ಇ ಉಪಗ್ರಹಗಳೊಂದಿಗೆ ಕಾರ್ಯ ನಿರ್ವಹಿಸಲಿದೆ.

2013ರ ಜುಲೈ 1 ರಂದು ಐಆರ್​ಎನ್​ಎಸ್​ಎಸ್ 1ಎ. 2014ರ ಏಪ್ರಿಲ್ 4ರಂದು 1ಬಿ.  2014ರ ಅಕ್ಟೋಬರ್ 16 ರಂದು 1ಸಿ. 2015ರ ಮಾರ್ಚ್ 28ರಂದು 1ಡಿ ಹಾಗೂ 1ಇ ಉಪಗ್ರಹವನ್ನು ಜನವರಿ 20ರಂದು ಯಶಸ್ವಿಯಾಗಿ ಉಡಾಯಿಸಲಾಗಿದೆ. ಇನ್ನೂ ಒಂದು ಉಪಗ್ರಹ ಉಡಾವಣೆ ಬಾಕಿಯಿದ್ದು, ಎಲ್ಲಾ ಉಪಗ್ರಹಗಳು ಉಡಾವಣೆಯಾದ ನಂತರ ಪ್ರಾದೇಶಿಕ ಮಾರ್ಗಸೂಚಿ ವ್ಯವಸ್ಥೆಯನ್ನು ಕಾರ್ಯಾರಂಭವಾಗಲಿದೆ.

SCROLL FOR NEXT