ಅದೇನೇ ಮಾಹಿತಿಗಳನ್ನು ತಿಳಿದುಕೊಳ್ಳಬೇಕಾದರೂ ನಾವು ಗೂಗಲ್ ಸರ್ಚ್ ಇಂಜಿನ್‌ನ ಮೊರೆ ಹೋಗುತ್ತೇವೆ. ಆದರೆ ಅಮೆರಿಕ ಸೇರಿದಂತೆ ಹಲವು ದೇಶಗಳ ಜನರು ಗೂಗಲ್ ಸರ್ಚ್ ಬದಲಿಗೆ ವಾಯ್ಸ್ ಅಸಿಸ್ಟೆಂಟ್ ಸೌಕರ್ಯಗಳ ಮೊರೆ ಹೋಗುತ್ತವೆ.
ಆ್ಯಪಲ್ ಸಿರಿ (Siri) , ಮೈಕ್ರೋಸಾಫ್ಟ್ ಕೊರ್ಟಾನಾ (Cortana) , ಗೂಗಲ್ ನೌ (Google now) ಈ ಮೂರು ವಾಯ್ಸ್ ಅಸಿಸ್ಟೆಂಟ್‌ಗಳಿಲ್ಲದೇ ಇದ್ದರೆ ಇಲ್ಲಿನವರಿಗೆ ಏನೂ ಮಾಡಲು ಸಾಧ್ಯವಿಲ್ಲ ಎಂಬ ಪರಿಸ್ಥಿತಿ
ಸರ್ಚ್ ಬಾರ್‌ನಲ್ಲಿ ಟೈಪ್ ಮಾಡುವ ಬದಲು ನಮ್ಮ ದನಿಯಲ್ಲೇ ಪ್ರಶ್ನೆಗಳನ್ನು ಕೇಳಿದರೆ ಉತ್ತರ ಸಿಕ್ಕಿ ಬಿಡುವುದರಿಂದ ಈ ವಾಯ್ಸ್ ಅಸಿಸ್ಟೆಂಟ್ ಬಳಸುವುದಕ್ಕೆ ತುಂಬಾನೇ ಸುಲಭ. ನಿಮ್ಮ ದನಿಯನ್ನು ವಾಯ್ಸ್ ಕಮಾಂಡ್ ಆಗಿ ಬದಲಾಯಿಸಿ ಅದನ್ನು ಸರ್ಚ್ ಇಂಜಿನ್ ಮೂಲಕ ಹುಡುಕಿ ಈ ವಾಯ್ಸ್ ಅಸಿಸ್ಟೆಂಟ್‌ಗಳು ನಮಗೆ ಮಾಹಿತಿಯನ್ನು ನೀಡುತ್ತವೆ. ಆರ್ಟಿಫಿಶಲ್ ಇಂಟೆಲಿಜೆನ್ಸ್ ಬಳಸಿ ಈ ವಾಯ್ಸ್ ಅಸಿಸ್ಟೆಂಟ್ ಗಳು ಕಾರ್ಯ ನಿರ್ವಹಿಸುತ್ತವೆ.
ವಾಯ್ಸ್ ಅಸಿಸ್ಟೆಂಟ್‌ಗಳು ಹೆಚ್ಚು ಅನುಕೂಲವಾಗಿದ್ದರೂ, ಅವುಗಳನ್ನು ಆಫ್ ಲೈನ್‌ನಲ್ಲಿ ಬಳಸುವಂತೆ ಮಾಡುವುದು ಹೇಗೆ ಎಂಬುದರ ಬಗ್ಗೆ ಗೂಗಲ್ ಪ್ರಯತ್ನ ಆರಂಭಿಸಿದೆ ಎಂಬುದು ಸದ್ಯದ ಸುದ್ದಿ.
ಗೂಗಲ್‌ನ ಆಂಡ್ರಾಯ್ಡ್ ಒಎಸ್ ನ ಜತೆ ಗೂಗಲ್ ನೌ ಎಂಬ ವಾಯ್ಸ್ ಅಸಿಸ್ಟೆಂಟ್ ಇದೆ. ಇತ್ತೀಚೆಗೆ ಬಿಡುಗಡೆಯಾದ ಮಾರ್ಷ್‌ಮೆಲ್ಲೋ ವರ್ಷನಲ್ಲಿಯೂ ನೌ ಆನ್ ಟಾಪ್ ಎಂಬ ವಾಯ್ಸ್ ಅಸಿಸ್ಟೆಂಟ್ ಆಪ್ಶನ್ ಜನರಿಗೆ ಇಷ್ಟವಾಗಿತ್ತು. ಇದೀಗ ಆಫ್ ಲೈನ್ ನಲ್ಲಿ ವಾಯ್ಸ್ ಅಸಿಸ್ಟೆಂಟ್ ಸೌಕರ್ಯ ಕಲ್ಪಿಸುವ ಬಗ್ಗೆ ಗೂಗಲ್ ಚಿಂತನೆ ನಡೆಸಿದೆ.
ಏತನ್ಮಧ್ಯೆ, ಡಾಟಾ ಕನೆಕ್ಷನ್ ಇಲ್ಲದೆ ಆರ್ಟಿಫಿಷನ್ ಇಂಟೆಲಿಜೆನ್ಸ್ ಹೇಗೆ ಕಾರ್ಯಗತ ಮಾಡಬಹುದು ಎಂಬುದನ್ನು ವಿವರಿಸುವ ಅಧ್ಯಯನ ಪ್ರಬಂಧವೊಂದನ್ನು ಕಳೆದ ವಾರ ಗೂಗಲ್ ಪ್ರಕಟಿಸಿತ್ತು. ಇಲ್ಲಿ ಮನುಷ್ಯರ ದನಿ ಮತ್ತು ವೇಗವನ್ನು ಅರ್ಥೈಸಿಕೊಂಡು ಲೋಕಲ್ ವಾಯ್ಸ್ ಸಿಸ್ಟಂ ಉತ್ತರವನ್ನು ನೀಡುತ್ತದೆ. ಈ ವಾಯ್ಸ್ ಸಿಸ್ಟಂನ ಅಂತಿಮ ತಯಾರಿಯಲ್ಲಿ ನಾವಿದ್ದೇವೆ ಎಂದು ಗೂಗಲ್ ಹೇಳಿತ್ತು.
ಒಟ್ಟು 20.3 ಎಂಬಿ ಗಾತ್ರವಿರುವ ಈ ಹೊಸ ವಾಯ್ಸ್ ಸಿಸ್ಟಂಗಳು ಈಗಿರುವ ವಾಯ್ಸ್ ಸಿಸ್ಟಂಗಳಿಗಿಂತ ಏಳು ಪಟ್ಟು ವೇಗದಲ್ಲಿ ಕಾರ್ಯವೆಸಗಲಿದೆ ಎಂದು ಗೂಗಲ್ ಹೇಳಿದೆ. ಪ್ರಸ್ತುತ ವರ್ಷದಲ್ಲಿ ಈ ಸಿಸ್ಟಂನ್ನು ಕಾರ್ಯಗತ ಮಾಡಲು ಗೂಗಲ್ ಚಿಂತನೆ ನಡೆಸಿದ್ದು, ಮುಂಬರುವ ಆಂಡ್ರಾಯ್ಡ್ ವರ್ಷನ್ ಗಳಲ್ಲಿ ಈ ಸಿಸ್ಟಂ ಸ್ಥಾನ ಪಡೆದುಕೊಳ್ಳುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics