ಸಾಂದರ್ಭಿಕ ಚಿತ್ರ 
ವಿಜ್ಞಾನ-ತಂತ್ರಜ್ಞಾನ

ನಾಸಾ ವೆಬ್‌ಸೈಟ್ ಮೇಲೆ ಸೈಬರ್ ದಾಳಿ

ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾದ ಕಂಪ್ಯೂಟರ್ ನೆಟ್ವರ್ಕ್‌ನ್ನು ಹ್ಯಾಕರ್‌ಗಳು ಹ್ಯಾಕ್ ಮಾಡಿದ್ದಾರೆ. ಇಸಿಸ್‌ನ ದೊಡ್ಡ ರಹಸ್ಯವೊಂದು...

ವಾಷಿಂಗ್ಟನ್: ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾದ ಕಂಪ್ಯೂಟರ್ ನೆಟ್ವರ್ಕ್‌ನ್ನು ಹ್ಯಾಕರ್‌ಗಳು ಹ್ಯಾಕ್ ಮಾಡಿದ್ದಾರೆ. ಇಸಿಸ್‌ನ ದೊಡ್ಡ ರಹಸ್ಯವೊಂದು ನಾಸಾಗೆ ತಿಳಿದಿದೆ ಎಂಬ ಸಂದೇಹದಿಂದ ಹ್ಯಾಕರ್‌ಗಳು ಹ್ಯಾಕ್ ಮಾಡಿದ್ದಾರೆ ಎಂದು ಸುದ್ದಿಮೂಲಗಳು ವರದಿ ಮಾಡಿವೆ.
 ನಾಸಾದ ಪ್ರಧಾನ ವೆಬ್‌ಸೈಟ್ ಮತ್ತು ಇಮೇಲ್ ಸರ್ವರ್ ಮೇಲೆ ಹ್ಯಾಕರ್‌ಗಳು ದಾಳಿ ಮಾಡಿದ್ದರೂ, ನಾಸಾದ ವೆಬ್‌ಸೈಟ್‌ನ ಕಾರ್ಯಗಳ ನ್ನು ಈ ಹ್ಯಾಕಿಂಗ್ ಬಾಧಿಸಿಲ್ಲ. ಅದೇ ವೇಳೆ ನಾಸಾದ ವೆಬ್‌ಸೈಟ್‌ನಲ್ಲಿರುವ ಇಮೇಲ್ ಸೇವೆಗಳಿಗೆ ಅಡಚಣೆಯಾಗಿರುವ ಬಗ್ಗೆ ಸಂದೇಶಗಳು ಡಿಸ್‌ಪ್ಲೇ ಆಗುತ್ತಿರುವುದನ್ನು ಹ್ಯಾಕಿಂಗ್ ಮಾಡಿದುದರ ಸಾಕ್ಷಿ ಎಂದು ಹ್ಯಾಕರ್‌ಗಳ ಪ್ರಕಟಿಸಿದ್ದಾರೆ.
ಉಗ್ರ ಸಂಘಟನೆಯಾದ ಇಸಿಸ್ ಬಗ್ಗೆ ಪ್ರಧಾನ ರಹಸ್ಯವೊಂದನ್ನು ನಾಸಾಗೆ ತಿಳಿದಿದ್ದು, ಇದು ನಾಗರಿಕರಿಗೆ ಗೊತ್ತಾಗಲೇ ಬೇಕು ಎಂಬ ಉದ್ದೇಶದಿಂದ ಸೈಬರ್ ದಾಳಿ ನಡೆಸಿರುವುದಾಗಿ ಹ್ಯಾಕರ್‌ಗಳು ಹೇಳಿದ್ದಾರೆ. ಆದರೆ ಅದೇನು ರಹಸ್ಯ ಎಂಬುದನ್ನು ಹ್ಯಾಕರ್‌ಗಳು ಬಹಿರಂಗ ಪಡಿಸಿಲ್ಲ.
ಏತನ್ಮಧ್ಯೆ, ಸೈಬರ್ ದಾಳಿಯ ಬಗ್ಗೆ ನಾಸಾ ಅಧಿಕೃತ ಹೇಳಿಕೆಯನ್ನು ನೀಡಿಲ್ಲ. ಇಸ್ಲಾಮಿಕ್ ಸ್ಟೇಟ್‌ಗೆ ಸಂಬಂಧಿಸಿ ಆ ದೊಡ್ಡ ರಹಸ್ಯವನ್ನು ನಾವು ಹೇಳುವುದಿಲ್ಲ, ಇದರ ಬಗ್ಗೆ ವಿವರಿಸಲು ನಿಮಗೆ ನಾವು ಅವಕಾಶವನ್ನು ನೀಡುತ್ತೇವೆ ಎಂದು ಹ್ಯಾಕರ್‌ಗಳು ಹೇಳುತ್ತಿದ್ದಾರೆ. ಆಪರೇಷನ್ ಸೆನ್ಸರ್‌ಶಿಪ್ ಎಂಬ ಅಭಿಯಾನದ ಅಂಗವಾಗಿ ತಾವು ನಾಸಾ ವಿರುದ್ಧ ಸೈಬರ್ ದಾಳಿ ನಡೆಸಿದ್ದೇವೆ ಎಂದು ಹ್ಯಾಕರ್‌ಗಳು ಹೇಳಿದ್ದು, ಅಮೆರಿಕದ ಅಧ್ಯಕ್ಷ ಸ್ಥಾನ ಆಕಾಂಕ್ಷಿ ಡೊನಾಲ್ಡ್ ಟ್ರಂಪ್ ವಿರುದ್ಧವೂ ಸೈಬರ್ ದಾಳಿ ನಡೆಸುವುದಾಗಿ ಈ ಹ್ಯಾಕರ್‌ಗಳು ಬೆದರಿಕೆಯೊಡ್ಡಿದ್ದಾರೆ. ಏಪ್ರಿಲ್ 1 ರಂದು ಟ್ರಂಪ್ ವಿರುದ್ಧ ಸೈಬರ್ ದಾಳಿ ನಡೆಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Lionel Messi: 21 ವರ್ಷಗಳ ಬಳಿಕ ತವರಿನಲ್ಲೇ ಫುಟ್ಬಾಲ್​ ದಿಗ್ಗಜ ಲಿಯೋನೆಲ್ ಮೆಸ್ಸಿ ಭಾವುಕ ವಿದಾಯ; ಹೇಗಿತ್ತು ನೋಡಿ ಅಂತಿಮ ಪಂದ್ಯ; Video

ಮತ ಬೇಟೆ ತಡೆಯಲು 'ಕೈ' ಕಲಿಗಳ ಮಾಸ್ಟರ್ ಪ್ಲ್ಯಾನ್: ಸಿಎಂ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ಮಹತ್ವದ ಸಭೆ, ಬೂತ್ ಮಟ್ಟದಲ್ಲಿ ಸಮರಕ್ಕೆ ಸಜ್ಜು..!

‘ಮತ ಕಳ್ಳತನ’ದ ಆರೋಪದಲ್ಲಿ ಹುರುಳಿಲ್ಲ, ಸುಖಾಸುಮ್ಮನೆ ರಾಹುಲ್ ಗಾಂಧಿಯಿಂದ ಗೊಂದಲ ಸೃಷ್ಟಿ: ಹೆಚ್‌.ಡಿ. ಕುಮಾರಸ್ವಾಮಿ ಆರೋಪ

SIR ಗೊಂದಲ: ಅಕ್ರಮ ಬಯಲಾಗುವ ಭೀತಿಯಿಂದಲೇ ರಾಜಪಾಲರ ಬಳಿ ಓಡಿದ್ದಾರೆ: NDA ನಾಯಕರ ವಿರುದ್ಧ ಡಿಕೆ.ಶಿವಕುಮಾರ್ ವಾಗ್ದಾಳಿ

ಕೋಟಿ ಕೋಟಿ ಲೂಟಿ: ಅರಣ್ಯ ಇಲಾಖೆ ಮಾಜಿ ಅಧಿಕಾರಿಗೆ ಕೋರ್ಟ್ ಶಾಕ್; ಬರೋಬ್ಬರಿ 1.38 ಕೋಟಿ ದಂಡ, 3 ವರ್ಷ ಜೈಲು ಶಿಕ್ಷೆ..!