ಆ್ಯಪಲ್ ಕಂಪನಿಯ ಸಿಇಓ ಟಿಮ್ ಕುಕ್ 
ವಿಜ್ಞಾನ-ತಂತ್ರಜ್ಞಾನ

ಬೆಂಗಳೂರಿನಲ್ಲಿ ಆ್ಯಪಲ್ ಸಂಸ್ಥೆಯ ಡಿಸೈನ್ ಕೇಂದ್ರ ಸ್ಥಾಪನೆ: ಟಿಮ್ ಕುಕ್

ಆ್ಯಪಲ್ ಕಂಪನಿಯ ಸಿಇಓ ಟಿಮ್ ಕುಕ್, ಭಾರತಕ್ಕೆ ಭೇಟಿ ನೀಡಿದ್ದು ಬೆಂಗಳೂರಿನಲ್ಲಿ ಆ್ಯಪಲ್ ಸಂಸ್ಥೆಯ ಡಿಸೈನ್ ಕೇಂದ್ರವನ್ನು ಪ್ರಾರಂಭಿಸುವುದಾಗಿ ಘೋಷಣೆ ಮಾಡಿದ್ದಾರೆ.

ನವದೆಹಲಿ: ಆ್ಯಪಲ್ ಕಂಪನಿಯ ಸಿಇಓ ಟಿಮ್ ಕುಕ್, ಭಾರತಕ್ಕೆ ಭೇಟಿ ನೀಡಿದ್ದು ಬೆಂಗಳೂರಿನಲ್ಲಿ ಆ್ಯಪಲ್ ಸಂಸ್ಥೆಯ ಡಿಸೈನ್ ಕೇಂದ್ರವನ್ನು ಪ್ರಾರಂಭಿಸುವುದಾಗಿ ಘೋಷಣೆ ಮಾಡಿದ್ದಾರೆ.

ಬೆಂಗಳೂರಿನಲ್ಲಿ ಪ್ರಾರಂಭವಾಗಲಿರುವ ಡಿಸೈನ್ ಕೇಂದ್ರ( ವಿನ್ಯಾಸ ಕೇಂದ್ರ) ದೇಶಾದ್ಯಂತ ಇರುವ ಐಫೋನ್ ಡೆವಲಪರ್ ಗಳಿಗೆ ಸಹಕಾರಿಯಾಗುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಲಿದೆ. ಕುಕ್ ಭೇಟಿಗೂ ಮುನ್ನ ಪ್ರಕಟವಾಗಿದ್ದ ವರದಿಗಳ ಪ್ರಕಾರ ಈ ವಿನ್ಯಾಸ ಕೇಂದ್ರ ಹೈದರಾಬಾದ್ ನಲ್ಲಿ ಪ್ರಾರಂಭವಾಗಲಿದೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ಆ್ಯಪಲ್ ಸಂಸ್ಥೆ ಅಂತಿಮವಾಗಿ ಬೆಂಗಳೂರಿನಲ್ಲೇ ಡಿಸೈನ್ ಕೇಂದ್ರವನ್ನು ಪ್ರಾರಂಭಿಸುವುದಾಗಿ ತಿಳಿಸಿದೆ.

ಆ್ಯಪಲ್ ಸಂಸ್ಥೆ ಭಾರತದಲ್ಲಿ ಡಿಸೈನ್ ಕೇಂದ್ರ ಪ್ರಾರಂಭಿಸಲು ಈಗಾಗಲೇ 100 ಮಿಲಿಯನ್ ಡಾಲರ್ ಗಳನ್ನು ಹೂಡಿಕೆ ಮಾಡಿದ್ದು 2017 ರ ವೇಳೆಗೆ ಡಿಸೈನ್ ಕೇಂದ್ರ ಕಾರ್ಯಾರಂಭ ಮಾಡುವ ನಿರೀಕ್ಷೆ ಇದೆ. ಭಾರತಕ್ಕೆ ಭೇಟಿ ನೀಡಿರುವ ಆ್ಯಪಲ್ ಕಂಪನಿಯ ಸಿಇಓ ಟಿಮ್ ಕುಕ್ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಲಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಾಜ್ಯ ಸರ್ಕಾರಕ್ಕೆ 'ಸ್ಟಿಂಗ್ ಆಪರೇಷನ್' ಆತಂಕ: ಟ್ರ್ಯಾಪ್‌ಗೆ ಯತ್ನ ನಡೆಯುತ್ತಿದೆ, ಹುಷಾರಾಗಿರಿ ; 5 ಸಚಿವರಿಗೆ ಡಿಕೆಶಿ ಎಚ್ಚರಿಕೆ ಸಂದೇಶ

‘ವೈಯಕ್ತಿಕ ಮಹತ್ವಾಕಾಂಕ್ಷೆ ಅಲ್ಲ, ಧ್ಯೇಯಕ್ಕಾಗಿ ಬದುಕಿದ್ದೇನೆ, ದೇಶದ ಜನತೆಗೆ ತಲೆಬಾಗುತ್ತೇನೆ’: ಆಡಳಿತದಲ್ಲಿ 25 ವರ್ಷ ಪೂರೈಸಿದ ಪ್ರಧಾನಿ ಮೋದಿ ಮಾತು; Video

ಹಾಸನದ ಹೇಮಾವತಿ ನಾಲೆಯಲ್ಲಿ ಪ್ಲಾಸ್ಟಿಕ್‌ ಚೀಲದಲ್ಲಿ ವೃದ್ಧೆಯ ಶವ ಪತ್ತೆ: ಕೊಲೆ ಶಂಕೆ

ರಷ್ಯಾ ಕರಾವಳಿಯಲ್ಲಿ ಡ್ರೋನ್ ದಾಳಿ: ಹೊತ್ತಿ ಉರಿದ ತೈಲ ಟ್ಯಾಂಕರ್‌, 23 ಭಾರತೀಯ ಸಿಬ್ಬಂದಿ ಪಾರು..!

Lionel Messi: 21 ವರ್ಷಗಳ ಬಳಿಕ ತವರಿನಲ್ಲೇ ಫುಟ್ಬಾಲ್​ ದಿಗ್ಗಜ ಲಿಯೋನೆಲ್ ಮೆಸ್ಸಿ ಭಾವುಕ ವಿದಾಯ; ಹೇಗಿತ್ತು ನೋಡಿ ಅಂತಿಮ ಪಂದ್ಯ; Video