ರೊಬೊಟಿಕ್ ಮೊಬೈಲ್ 
ವಿಜ್ಞಾನ-ತಂತ್ರಜ್ಞಾನ

ವಿಶ್ವದ ಪ್ರಥಮ ರೊಬೋಟಿಕ್ ಮೊಬೈಲ್ ಅಭಿವೃದ್ಧಿಪಡಿಸಿದ ಜಪಾನ್

ವಿಶ್ವದ ಪ್ರಥಮ ರೊಬೊಟಿಕ್ ಮೊಬೈಲ್ ನ್ನು ಜಪಾನ್ ಮಾರುಕಟ್ಟೆಗೆ ಪರಿಚಯಿಸಿದೆ.

ಟೊಕಿಯೋ: ವಿಶ್ವದ ಪ್ರಥಮ ರೊಬೊಟಿಕ್ ಮೊಬೈಲ್ ನ್ನು ಜಪಾನ್ ಮಾರುಕಟ್ಟೆಗೆ ಪರಿಚಯಿಸಿದೆ.
ರೊಬೋಟಿಕ್ ಮೊಬೈಲ್ ರೊಬೋಹೊನ್ ನನ್ನು ಟೊಮೋಟಕ ತಕಹಶಿ ಎಂಬ ಇಂಜಿನಿಯರ್ ಮಾನವನ ಆಕೃತಿಯಲ್ಲೇ ಅಭಿವೃದ್ಧಿ ಪಡಿಸಿದ್ದು, 198 ,000 ಯೆನ್ (1,800 ) ಡಾಲರ್ ಪ್ರಾರಂಭಿಕ ಬೆಳೆಯಾಗಿದೆ. ನಡೆಯುವುದು ಹಾಗೂ ನೃತ್ಯ ಮಾಡುವ ಸಾಮರ್ಥ್ಯ ಹೊಂದಿರುವುದು ಈ ರೊಬೊಟಿಕ್ ಮೊಬೈಲ್ ನ ಮತ್ತೊಂದು ವೈಶಿಷ್ಟ್ಯ.
ಜಪಾನ್ ನ ಎಲೆಕ್ಟ್ರಾನಿಕ್ ಸಂಸ್ಥೆಯ ಸಹಯೋಗದಲ್ಲಿ ಈ ರೊಬೊಟಿಕ್ ಮೊಬೈಲ್ ತಯಾರಾಗಿದ್ದು, ಸಾರ್ವಜನಿಕರು ಹೊಸ ಮಾದರಿಯ ಸ್ಮಾರ್ಟ್ ಫೋನ್ ನ್ನು ಪರೀಕ್ಷೆ ಮಾಡುವುದಕ್ಕೆ ಅನುಕೂಲವಾಗಲು ಎಲೆಕ್ಟ್ರಾನಿಕ್ ಸಂಸ್ಥೆ ರೋಬೊಹೋನ್ ಕೆಫೆ ಪ್ರಾರಂಭಿಸಿದ್ದು ಜೂ.8 ವರೆಗೆ ಕಾರ್ಯನಿರ್ವಹಣೆ ಮಾಡಲಿದೆ.  
ಜಪಾನ್ ನ ಎಲೆಕ್ಟ್ರಾನಿಕ್ ಉಪಕರಣಗಳ ಉತ್ಪಾದಕ ಸಂಸ್ಥೆ ಪ್ರತಿ ತಿಂಗಳು 5,000 ಯುನಿಟ್ ರೊಬೋಟಿಕ್ ಮೊಬೈಲ್ ಗಳನ್ನು ಉತ್ಪಾದನೆ ಮಾಡಲಿದ್ದು ಐಫೋನ್ ಹಾಗೂ ಐಪ್ಯಾಡ್ ಗಳ ಜೋಡಣೆಯಲ್ಲಿ ನಿರತವಾಗಿರುವ ಫಾಕ್ಸ್ ಕಾನ್ ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಳ್ಳಲಿದೆ.
ಮಾನವ ಆಕೃತಿಯಲ್ಲೇ ಇರುವ ರೊಬೊಟಿಕ್ ಮೊಬೈಲ್ 19 .5 ಸೆಂಟಿ ಮೀಟರ್‌ ನಷ್ಟು ಉದ್ದವಿದ್ದು 390 ಗ್ರಾಂ ಗಳಷ್ಟು ತೂಕ ಹೊಂದಿದೆ. ಇದನ್ನು ಮೊಬೈಲ್ ರೀತಿಯಲ್ಲಷ್ಟೇ ಅಲ್ಲದೆ ವಿಡಿಯೋ, ಫೋಟೊ, ಮ್ಯಾಪ್ ಗಳನ್ನೂ ಪ್ರದರ್ಶಿಸಲು ಪ್ರೊಜೆಕ್ಟರ್ ರೀತಿಯಲ್ಲಿಯೂ ಬಳಸಬಹುದಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಅಂತ್ಯ ಸನ್ನಿಹಿತ?: ಇರಾನ್ ನತ್ತ ಮುಖ ಮಾಡಿದ ಅಮೆರಿಕದ ಅತ್ಯಂತ ವಿಧ್ವಂಸಕ ಕ್ಷಿಪಣಿ

ವಿಶೇಷ ಪಡೆ, ಹತ್ತಾರು ಸೇನಾ ವಿಮಾನ: ಶತ್ರು ನೆಲದಲ್ಲಿ ಬಿದ್ದ ತನ್ನ ಪೈಲಟ್​ ನ್ನು ಅಮೆರಿಕ ರಕ್ಷಿಸಿದ್ದೇ ರೋಚಕ!

ಏ.10 ಕ್ಕೆ ರಾಜ್ಯಸಭಾ ಸದಸ್ಯರಾಗಿ ನಿತೀಶ್ ಕುಮಾರ್ ಪ್ರಮಾಣ ವಚನ ಸ್ವೀಕಾರ! ಸಿಎಂ ಸ್ಥಾನಕ್ಕೆ ರಾಜೀನಾಮೆ?

ಬಾಗಲಕೋಟೆ ಉಪಚುನಾವಣೆ: BJP ಅಭ್ಯರ್ಥಿ ವಿರುದ್ಧ ಕರಪತ್ರ ಹಂಚಿಕೆ: ಇಬ್ಬರು ಪೊಲೀಸ್ ಅಧಿಕಾರಿಗಳ ಎತ್ತಂಗಡಿ!

ಅಕ್ರಮ ಬಾಂಗ್ಲಾ ವಲಸಿಗರಿಗೆ ಹೊಸ ತಲೆನೋವು; ಗಡಿಗಳಲ್ಲಿ ಹಾವು. ಮೊಸಳೆಗಳ ನಿಯೋಜನೆ: BSF ಗಂಭೀರ ಚಿಂತನೆ!

SCROLL FOR NEXT