ವಾಟ್ಸ್ ಆಪ್ ನಲ್ಲಿ ವಿಡಿಯೋ ಕರೆ! 
ವಿಜ್ಞಾನ-ತಂತ್ರಜ್ಞಾನ

ವಾಟ್ಸ್ ಆಪ್ ನಲ್ಲಿ ವಿಡಿಯೋ ಕರೆ!

ಶತಕೋಟಿ ಬಳಕೆದಾರರನ್ನು ಹೊಂದಿರುವ ವಾಟ್ಸ್ ಆಪ್ ಬಳಕೆದಾರರ ಬೇಡಿಕೆಯನ್ನು ಈಡೇರಿಸಿದ್ದು, ವಾಟ್ಸ್ ಆಪ್ ನಲ್ಲಿ ವಿಡಿಯೋ ಕರೆ ವ್ಯವಸ್ಥೆಯನ್ನು ಜಾರಿಗೊಳಿಸಿದೆ.

ನವದೆಹಲಿ: ಶತಕೋಟಿ ಬಳಕೆದಾರರನ್ನು ಹೊಂದಿರುವ ವಾಟ್ಸ್ ಆಪ್ ಬಳಕೆದಾರರ ಬೇಡಿಕೆಯನ್ನು ಈಡೇರಿಸಿದ್ದು, ವಾಟ್ಸ್ ಆಪ್ ನಲ್ಲಿ ವಿಡಿಯೋ ಕರೆ ವ್ಯವಸ್ಥೆಯನ್ನು ಜಾರಿಗೊಳಿಸಿದೆ. 
ಆಂಡ್ರಾಯ್ಡ್, ಐಒಎಸ್, ವಿಂಡೋಸ್ ಫೋನ್ ಗಳಲ್ಲಿ ಈ ಆಯ್ಕೆ ಇರಲಿದೆ ಎಂದು ವಾಟ್ಸ್ ಆಪ್ ಸಂಸ್ಥೆ ತಿಳಿಸಿದೆ. ಭಾರತದಲ್ಲಿ 160 ಮಿಲಿಯನ್ ವಾಟ್ಸ್ ಆಪ್ ನ ಬಳಕೆದಾರರು ಇದ್ದು, ವಾಟ್ಸ್ ಆಪ್ ವಿಡಿಯೋ ಕಾಲಿಂಗ್ ಗೆ ಭಾರತದ ಗ್ರಾಹಕರೂ ಸಹ ಒತ್ತಡ ಹೇರಿದ್ದರು. "ಭಾರತದ ಗ್ರಾಹಕರಿಗೆ ಈ ವ್ಯವಸ್ಥೆಯನ್ನು ಜಾರಿಗೊಳಿಸಲು ಅತ್ಯಂತ ಹೆಮ್ಮೆಯಾಗುತ್ತಿದೆ, ಭಾರತೀಯ ಗ್ರಾಹಕರು ತಮ್ಮ ಪ್ರೀತಿಪಾತ್ರರೊಂದಿಗೆ ಮುಖಾಮುಖಿ ಮಾತನಾಡುವುದನ್ನು ಎದುರುನೋಡುತ್ತಿದ್ದೇವೆ ಎಂದು ವಾಟ್ಸ್ ಆಪ್ ನ ಸಿಇಒ ಜಾನ್ ಕೌಮ್ ತಿಳಿಸಿದ್ದಾರೆ. 
ಪ್ರಾರಂಭದಲ್ಲಿ ಮೆಸೇಜ್ ಹಾಗೂ ಗ್ರೂಪ್ ಚಾಟ್ ನೊಂದಿಗೆ ಪ್ರಾರಂಭವಾದ ವಾಟ್ಸ್ ಆಪ್ ನಂತರದ ದಿನಗಳಲ್ಲಿ ಧ್ವನಿ ಕರೆಯ ವ್ಯವಸ್ಥೆಯನ್ನು ಜಾರಿಗೊಳಿಸಿತ್ತು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ದರ್ಶನ್‌ಗೆ ಹೈಕೋರ್ಟ್‌ನಿಂದ ತಾತ್ಕಾಲಿಕ ರಿಲೀಫ್: 59ನೇ ಸಿಹೆಚ್ ಹೆಚ್ ಕೋರ್ಟ್ ಆದೇಶ ರದ್ದು!

ಯುಕ್ರೇನ್ ವಿರುದ್ಧದ ಯುದ್ಧ: ಭಾರತದ ಶಾಂತಿ ಪ್ರಯತ್ನಗಳನ್ನು ಸ್ವಾಗತಿಸುತ್ತೇವೆ- ರಷ್ಯಾ; ಆ.11 ರಂದು ಮೋದಿ-ಪುಟಿನ್ ದ್ವಿಪಕ್ಷೀಯ ಮಾತುಕತೆ

ಬಡ ವಿದ್ಯಾರ್ಥಿಗಳ ನೆರವಿಗೆ ಧಾವಿಸಿದ ಸಂಜು ಸ್ಯಾಮ್ಸನ್; 1 ಸಾವಿರ UPSC ಆಕಾಂಕ್ಷಿಗಳಿಗೆ ಸ್ಕಾಲರ್‌ಶಿಪ್!

ಕಾಂಗ್ರೆಸ್ 10 ವರ್ಷದಲ್ಲಿ 50 ಸಾವಿರ ಶೌಚಾಲಯ ಕಟ್ಟಲಿಲ್ಲ, ನಾವು 50 ಸಾವಿರ ರೈಲು ಕೋಚ್ ನಿರ್ಮಿಸಿದೆವು: ಪ್ರಧಾನಿ ಮೋದಿ

'ತಂದೆಯ ಮುಖವನ್ನೇ ನೋಡಿಲ್ಲ': ʻಬಿಗ್‌ ಬಾಸ್‌ʼ ವೇದಿಕೆಯಲ್ಲಿ ಅಪ್ಪ-ಅಮ್ಮನ ಡಿವೋರ್ಸ್‌ ನೋವು ಹಂಚಿಕೊಂಡ ʻಪ್ರೇಮಕಾವ್ಯʼ ನಟಿ ವೈಷ್ಣವಿ!