ವಿಜ್ಞಾನ-ತಂತ್ರಜ್ಞಾನ

ಫೇಸ್ ಬುಕ್ ನಲ್ಲಿ ದಿನಕ್ಕೆರಡು ಕಾಮೆಂಟ್ ಮಾಡಿ, ಚಿಂತೆಗಳನ್ನು ದೂರವಿಡಿ!

ಪ್ರತಿ ದಿನ ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ ಎರಡು ಕಾಮೆಂಟ್ ಮಾಡುವುದು ನಿಮ್ಮ ಚಿಂತೆಗಳನ್ನೆಲ್ಲವನ್ನು ದೂರ ಮಾಡಬಲ್ಲದು ಎನ್ನುತ್ತಿದೆ ಹೊಸ ಸಂಶೋಧನೆ.

ನ್ಯೂಯಾರ್ಕ್: ಪ್ರತಿ ದಿನ ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ ಎರಡು ಕಾಮೆಂಟ್ ಮಾಡುವುದು ನಿಮ್ಮ ಚಿಂತೆಗಳನ್ನೆಲ್ಲವನ್ನು ದೂರ ಮಾಡಬಲ್ಲದು ಎನ್ನುತ್ತಿದೆ ಹೊಸ ಸಂಶೋಧನೆ.
ಸಾಮಾಜಿಕ ಜಾಲತಾಣಗಳಲ್ಲಿ ಕಾಮೆಂಟ್ ಮಾಡುವುದು ಭಾವನೆ, ಯೋಗಕ್ಷೇಮ ಮತ್ತು ತೃಪ್ತಿದಾಯಕ ಮನಸ್ಥಿತಿಯ ಮೇಲೆ ಪರಿಣಾಮ ಬೀರಲಿದೆ ಎಂದು ಪೆನ್ಸಿಲ್ವೇನಿಯಾದ ಪಿಟ್ಸ್ ಬರ್ಗ್ ನಲ್ಲಿರುವ ಕಾರ್ನೆಗೀ ಮೆಲಾನ್ ವಿಶ್ವವಿದ್ಯಾಲಯದ ಸಂಶೋಧನಾ ವರದಿ ತಿಳಿಸಿದೆ.
ತಮಗೆ ಪರಿಚಯವಿರುವವರು ತಮ್ಮ ಬಗ್ಗೆ ಮಾಡುವ ವ್ಯಕ್ತಿಗತ ಪೋಸ್ಟ್ ಗಳು ಅಥವಾ ಕಾಮೆಂಟ್ ಗಳಿಂದ ಜನರಿಗೆ ಸಂತೋಷವಾಗಲಿದ್ದು. ಫೇಸ್ ಬುಕ್ ನಲ್ಲಿ ಕಾಮೆಂಟ್ ಗಳ ಮೂಲಕ ಸಂವಹನ ನಡೆಸುವುದರಿಂದ ಚಿಂತೆಗಳು ದೂರವಾಗುತ್ತದೆ ಎಂದು ಅಧ್ಯಯನ ವರದಿ ಹೇಳಿದೆ.
ಕಂಪ್ಯೂಟರ್ ಮಿಡಿಯೇಟೆಡ್ ಕಮ್ಯುನಿಕೇಶನ್ ನ ಜರ್ನಲ್ ನಲ್ಲಿ ಅಧ್ಯಯನ ವರದಿ ಪ್ರಕಟವಾಗಿದ್ದು,  91 ರಾಷ್ಟ್ರಗಳ 1,910 ಫೇಸ್ ಬುಕ್ ಬಳಕೆದಾರರನ್ನು ಪ್ರತಿ ತಿಂಗಳಿಗೆ ಒಂದು ಬಾರಿಯಂತೆ ಮೂರೂ ತಿಂಗಳು ಸಮೀಕ್ಷೆಗೆ ಒಳಪಡಿಸಲಾಗಿದೆ, ಈ ಸಮೀಕ್ಷೆ ವೇಳೆ ಫೇಸ್ ಬುಕ್ ಸಂವಹನದಿಂದ ಮನಸ್ಸನ್ನು ಚಿಂತೆಯಿಂದ ದೂರವಿಡಬಹುದು ಎಂಬುದನ್ನು ಕಂಡುಕೊಳ್ಳಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸರ್ಕಾರದ 200 ಅಧಿಕಾರಿಗಳು ವಿರೋಧ ಪಕ್ಷದ ಸಂಪರ್ಕದಲ್ಲಿ: ಪ್ರತಿಭಟನಾ ಜಾಥಾಕ್ಕೂ ಮುನ್ನ ರಾಹುಲ್ ಗಾಂಧಿ ಹೊಸಬಾಂಬ್!

ಪ್ರತಿಭಟನಾಕಾರರಿಗೆ ಬಿಗ್ ಶಾಕ್; ಇನ್ಮುಂದೆ ದೆಹಲಿ Jantar Mantarನಲ್ಲಿ ಧರಣಿ ನಡೆಸುವಂತಿಲ್ಲ..!

'ಹೃದಯದ ಪ್ರಮುಖ ರಕ್ತನಾಳದಲ್ಲಿ ರಕ್ತದ ಹೆಪ್ಪುಗಟ್ಟುವಿಕೆ'; ಮರಣೋತ್ತರ ಪರೀಕ್ಷೆಯಲ್ಲಿ ನಟ ನಾನಾ ಪಟೇಕರ್ ಸಾವಿನ ಕಾರಣ ಬಹಿರಂಗ!

‘ಪ್ರತಿಭಟನೆ ನಮ್ಮ ಸಾಂವಿಧಾನಿಕ ಹಕ್ಕು’: Jantar Mantar ಧರಣಿಗೆ ದಿನಾಂಕ ನಿಗದಿಪಡಿಸಿ; ದೆಹಲಿ ಪೊಲೀಸರಿಗೆ 24 ಗಂಟೆಗಳ ಗಡುವು ಕೊಟ್ಟ Cockroach Janta Party..!

‘Vote chori’ ಹೈಡ್ರಾಮಾ: "ಭೇಟಿ ಸಾಧ್ಯವಿಲ್ಲ, ಏನಿದ್ದರೂ ಕೋರ್ಟ್ ಮೂಲಕವೇ ಬನ್ನಿ; ರಾಹುಲ್ ಗಾಂಧಿ-ಖರ್ಗೆ ಭೇಟಿ ಮನವಿ ತಿರಸ್ಕರಿಸಿದ CJI ಸೂರ್ಯ ಕಾಂತ್..!