ವಾಷಿಂಗ್ಟನ್: ಇಂಟರ್ನೆಟ್ ದೈತ್ಯ ಗೂಗಲ್ 18ನೇ ವಸಂತಕ್ಕೆ ಕಾಲಿಟ್ಟಿದೆ. ತನ್ನ 18ನೇ ಹುಟ್ಟು ಹಬ್ಬದ ಅಂಗವಾಗಿ ಗೂಗಲ್ ವಿಶಿಷ್ಟ ಆ್ಯನಿಮೇಟೆಡ್ ಡೂಡಲ್‌ನೊಂದಿಗೆ ಮಂಗಳವಾರ ತನ್ನ 18ನೇ ವರ್ಷದ ಬರ್ತ್‌ಡೇ ಆಚರಿಸಿಕೊಳ್ಳುತ್ತಿದೆ.
ಕ್ಯಾಲಿಫೋರ್ನಿಯಾದ ಸ್ಟ್ಯಾನ್ಫೋರ್ಡ್ ವಿವಿಯ ವಿದ್ಯಾರ್ಥಿಗಳಾದ ಲ್ಯಾರಿ ಪೇಜ್ ಮತ್ತು ಸರ್ಜೆ ಬ್ರಿನ್ 1998ರಲ್ಲಿ ಹುಟ್ಟುಹಾಕಿದ ಗೂಗಲ್, ತನ್ನ ಹೋಂಪೇಜ್‌ನಲ್ಲಿ ಸೆಪ್ಟೆಂಬರ್ 27ರಂದು ಸ್ಥಾಪನಾ ದಿನ ಆಚರಿಸಿಕೊಳ್ಳುತ್ತಿದೆ. ಆದರೆ, ನಿಜವಾಗಿ ಸಂಸ್ಥೆ ಆರಂಭವಾದ ದಿನ ಸ್ವತಃ ಗೂಗಲ್‌ಗೂ ಗೊತ್ತಿಲ್ಲವಂತೆ. 2006 ರಿಂದ ಸೆಪ್ಟೆಂಬರ್ 27ರಂದು ಬರ್ತಡೇ ಆಚರಿಸುತ್ತಿರುವ ಗೂಗಲ್,
18 ವರ್ಷಗಳ ಹಿಂದೆ ಅಸ್ತಿತ್ವಕ್ಕೆ ಬಂದ ಗೂಗಲ್ ವಿಶ್ವದ ಪ್ರಭಾವಿ ಸಂಸ್ಥೆಗಳಲ್ಲೊಂದು. ಮಾರುಕಟ್ಟೆಯಲ್ಲಿ ಆ್ಯಪಲ್ ನಂತರ ಎರಡನೇ ಸ್ಥಾನ ಗೂಗಲ್‌ನದ್ದು. ಫೋರ್ಬ್ಸ್ ಸಿರಿವಂತರ ಪಟ್ಟಿಯಲ್ಲಿ ಪೇಜ್ ಹಾಗೂ ಬ್ರಿನ್ ಕ್ರಮವಾಗಿ 12 ಹಾಗೂ 13ನೇ ಸ್ಥಾನದಲ್ಲಿದ್ದಾರೆ.