ಸಿ ಇ ಆರ್ ಎನ್ ಪ್ರಯೋಗಾಲಯದ ಒಂದು ದೃಶ್ಯ 
ವಿಜ್ಞಾನ-ತಂತ್ರಜ್ಞಾನ

ಸಿ ಇ ಆರ್ ಎನ್ ವಿಜ್ಞಾನ ಪ್ರಯೋಗಾಲಯದ ಸಹ ಸದಸ್ಯನಾಗಲಿರುವ ಭಾರತ

'ಪಾರ್ಟಿಕಲ್ ಫಿಸಿಕ್ಸ್' (ಕಣ ಭೌತಶಾಸ್ತ್ರ)ನ ಅತಿ ದೊಡ್ಡ ಪ್ರಯೋಗಾಲಯ ಸಿ ಇ ಆರ್ ಎನ್ ನ ಸಹ ಸದಸ್ಯನಾಗಿ ಭಾರತ ಮುಂದಿನ ಕೆಲವು ತಿಂಗಳುಗಳಲ್ಲಿ ಸೇರಿಕೊಳ್ಳಲಿದೆ ಎಂದು ವಿಜ್ಞಾನ ಮತ್ತು ತಂತ್ರಜ್ಞಾನ

ಕೋಲ್ಕತ್ತಾ: 'ಪಾರ್ಟಿಕಲ್ ಫಿಸಿಕ್ಸ್' (ಕಣ ಭೌತಶಾಸ್ತ್ರ)ನ ಅತಿ ದೊಡ್ಡ ಪ್ರಯೋಗಾಲಯ ಸಿ ಇ ಆರ್ ಎನ್ ನ ಸಹ ಸದಸ್ಯನಾಗಿ ಭಾರತ ಮುಂದಿನ ಕೆಲವು ತಿಂಗಳುಗಳಲ್ಲಿ ಸೇರಿಕೊಳ್ಳಲಿದೆ ಎಂದು ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ (ಡಿ ಎಸ್ ಟಿ) ಅಧಿಕಾರಿ ಮಂಗಳವಾರ ತಿಳಿಸಿದ್ದಾರೆ. 
"ಸಹ ಸದಸ್ಯತ್ವಕ್ಕಾಗಿ ಭಾರತ ಸಲ್ಲಿಸಿದ ಅರ್ಜಿಯನ್ನು ಸೆಪ್ಟೆಂಬರ್ ನಲ್ಲಿ ಸಿ ಇ ಆರ್ ಎನ್ ಮಂಡಳಿ ಅನುಮೋದಿಸಿದೆ ಮತ್ತು ಈಗ ಎಲ್ಲ ಒಪ್ಪಂದ ಮತ್ತು ಸಹಿ ಮಾಡುವ ಪ್ರಕ್ರಿಯೆ ಸಂಪೂರ್ಣಗೊಂಡ ಮೇಲೆ ಭಾರತ ಸಿ ಇ ಆರ್ ಎನ್ ನ ಸಹ ಸದ್ಯಸ್ಯನಾಗಲಿದೆ" ಎಂದು ಡಿ ಎಸ್ ಟಿ ಅಧಿಕಾರಿ ಹೇಳಿದ್ದಾರೆ. 
ಮುಂದಿನ ಕೆಲವು ತಿಂಗಳುಗಳಲ್ಲಿ ಈ ಪ್ರಕ್ರಿಯೆ ಸಂಪೂರ್ಣಗೊಳ್ಳಲಿದೆ ಎಂದು ಅವರು ಹೇಳಿದ್ದಾರೆ. 
ಈ ಬೆಳವಣಿಗೆಯ ಬಗ್ಗೆ ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಹರ್ಷವರ್ಷನ್ ಕೂಡ ಟ್ವೀಟ್ ಮಾಡಿದ್ದರು. 
ಸ್ವಿಟ್ಸರ್ ಲ್ಯಾಂಡ್ ನಲ್ಲಿರುವ ಈ ಪ್ರಖ್ಯಾತ ಸಿ ಇ ಆರ್ ಎನ್ ಪ್ರಯೋಗಾಲಯದಲ್ಲಿ ಇತ್ತೀಚಿಗೆ ಹಿಗ್ಸ್ ಬೊಸೊನ್ ಕಣ (ದೇವಾ ಕಣ) ಸಂಶೋಧನೆ ಮಾಡಿದ್ದು ಭಾರಿ ಸುದ್ದಿಯಾಗಿತ್ತು. 
ಸಹ ಸದಸ್ಯನಾದ ನಂತರ ಈ ಪ್ರಯೋಗಾಲಯದ ಹಲವು ಸಭೆಗಳು ಮತ್ತು ಕಾರ್ಯಕ್ರಮಗಳಲ್ಲಿ ಭಾಗಿಯಾವಾಗುವ ಸವಲತ್ತು ಭಾರತಕ್ಕೆ ಸಿಗುತ್ತದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

INDIA ಬ್ಲಾಕ್ ನಲ್ಲಿ ಬಿರುಕು?: ಆಪ್ ಕೈ ಕೊಟ್ಟ ಬೆನ್ನಲ್ಲೇ ಭೋಜನ ಕೂಟಕ್ಕೆ ಸಮಾಜವಾದಿ ಪಕ್ಷ ಗೈರು!

ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಎಳೆದೊಯ್ದು ವಶಕ್ಕೆ ಪಡೆದ ಪೊಲೀಸರು; ಬಸ್‌ನ ಟೈರ್ ಪಂಕ್ಚರ್ ಮಾಡಿದ ಕಾರ್ಯಕರ್ತರು

ಭಾರತವನ್ನು ಜಾಗತಿಕ ಶಕ್ತಿಯಾಗಿಸಿದ್ದು ಮೋದಿ, ಅಂತಹವರ ವಿರುದ್ಧವೇ ಸಂಚು: ಸರ್ಬಿಯಾ ಮಾಜಿ ಅಧ್ಯಕ್ಷ, Video ವೈರಲ್

SIR ವಿರುದ್ಧ ಕಾಂಗ್ರೆಸ್ ಪ್ರತಿಭಟನೆ: ಡಿಎಂಕೆ ಯು-ಟರ್ನ್!

ಗ್ರಾಹಕರಿಗೆ ನೆಮ್ಮದಿ: ಕಟಾವಿಗೆ ಬಂದ ಖಾರಿಫ್ ಬೆಳೆ, ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ಈರುಳ್ಳಿ ದರ ಕುಸಿತ ಸಾಧ್ಯತೆ, 2 ಲಕ್ಷ ಕ್ವಿಂಟಾಲ್‌ ಪೂರೈಕೆ!