ಸ್ಯಾನ್ ಫ್ರಾನ್ಸಿಸ್ಕೊ: ನಕಲಿ ಸುದ್ದಿಗಳು ಮತ್ತು ದ್ವೇಷಪೂರಿತ ಭಾಷಣಗಳನ್ನು ಹತ್ತಿಕ್ಕಲು ಮತ್ತು ಯಾವುದೋ ವಿಷಯದ ಬಗ್ಗೆ ಹುಡುಕಿದಾಗ ತಪ್ಪು ಮಾಹಿತಿ, ಅವಮಾನಕಾರಿ ಮತ್ತು ಪ್ರಚೋದನಕಾರಿ ವಿಷಯಗಳನ್ನು ಪಟ್ಟಿ ಮಾಡುವುದನ್ನು ತಡೆಯುವುದಕ್ಕೆ ಗೂಗಲ್ ಸಂಸ್ಥೆ ತನ್ನ ಸರ್ಚ್ ಎಂಜಿನ್ ನಲ್ಲಿ ಭಾರಿ ಬದಲಾವಣೆಗಳನ್ನು ಘೋಷಿಸಿದೆ.
'ಪ್ರಾಜೆಕ್ಟ್ ಔಲ್' ಎಂಬ ಗೂಗಲ್ ಅಪ್ಡೇಟ್ ಈಗ ತನ್ನ ಗ್ರಾಹಕರಿಗೆ ಹುಡುಕಿದ ಮಾಹಿತಿಯ ಸತ್ಯಾಸತ್ಯತೆಯನ್ನು ವರದಿ ಮಾಡಲು ಅವಕಾಶ ನೀಡುತ್ತದೆ.
ಹಾಗೆಯೇ ಸರಿಯಾದ ಮಾಹಿತಿಯನ್ನು ಮಾತ್ರ ಪಟ್ಟಿ ಮಾಡಲು ಹಲವು ತಂಡಗಳನ್ನು ಗೂಗಲ್ ರಚಿಸಿಕೊಂಡಿದೆ ಎಂದು ಮಂಗಳವಾರ ಫಾರ್ಚುನ್ ವರದಿ ಮಾಡಿದೆ.
ಈ ಎಲ್ಲ ಬದಲಾವಣೆಗಳು ಒಂದರ ನಂತರ ಒಂದಂತೆ ಸರ್ಚ್ ತಾಣದಲ್ಲಿ ಕಾಣಿಸಿಕೊಳ್ಳಲಿವೆ ಎಂದು ಸಂಸ್ಥೆ ತಿಳಿಸಿದೆ.