ವಿಜ್ಞಾನ-ತಂತ್ರಜ್ಞಾನ

ಯೂಟ್ಯೂಬ್ ಗೆ ಪೈಪೋಟಿ ನೀಡಲು ಫೇಸ್ ಬುಕ್ ನಿಂದ "ವಾಚ್" ಬಿಡುಗಡೆ!

Srinivas Rao BV
ಸ್ಯಾನ್ ಫ್ರಾನ್ಸಿಸ್ಕೋ: ಗೂಗಲ್ ಒಡೆತನದ ಯುಟ್ಯೂಬ್ ಗೆ ಪೈಪೋಟಿ ನೀಡಲು ಫೇಸ್ ಬುಕ್ ವಾಚ್ ಎಂಬ ಹೊಸ ಸಾಮಾಜಿಕ ಜಾಲತಾಣಾವನ್ನು ಪರಿಚಯಿಸಿದೆ. 
ಕಳೆದ ವರ್ಷ ಅಮೆರಿಕಾದಲ್ಲಿ ಫೇಸ್ ಬುಕ್ ವಿಡಿಯೋ ಟ್ಯಾಬ್ ನ್ನು ಪರಿಚಯಿಸಿ, ಫೇಸ್ ಬುಕ್ ನಲ್ಲಿ ವಿಡಿಯೋಗಳನ್ನು ಹುಡುಕುವ ಸೌಲಭ್ಯ ಕಲ್ಪಿಸಿತ್ತು. ಈಗ ಮತ್ತೊಂದು ಹೆಜ್ಜೆ ಮುಂದಿಟ್ಟಿರುವ ಫೇಸ್ ಬುಕ್ ಯೂಟ್ಯೂಬ್ ಗೆ ಪೈಪೋಟಿ ನೀಡಲು ವಾಚ್ ಎಂಬ ಹೊಸ ಸಾಮಾಜಿಕ ಜಾಲತಾಣವನ್ನು ಆರಂಭಿಸಿದೆ. 
ಮೊಬೈಲ್, ಡೆಸ್ಕ್ ಟಾಪ್, ಲ್ಯಾಪ್ ಟಾಪ್ ಹಾಗೂ ಟಿವಿ ಆಪ್ ಗಳಲ್ಲಿ ಫೇಸ್ ಬುಕ್ ನ ಹೊಸ ಫೀಚರ್ ಲಭ್ಯವಿರಲಿದೆ ಎಂದು ಸಂಸ್ಥೆ ಬ್ಲಾಗ್ ನಲ್ಲಿ ತಿಳಿಸಿದೆ. 
SCROLL FOR NEXT