ಫೇಸ್ಬುಕ್ ಅಕೌಂಟ್ ನಲ್ಲಿ ಆಧಾರ್ ನಲ್ಲಿರುವಂತೆ ಹೆಸರು ನಮೂದಿಸಿ
ನವದೆಹಲಿ: ಮೊಬೈಲ್ ಸಿಮ್, ಬ್ಯಾಂಕ್ ಖಾತೆ ಬಳಿಕ ಇದೀಗ ಫೇಸ್ಬುಕ್ ಅಕೌಂಟ್ ತೆರೆಯಲೂ ಆಧಾರ್ ಬೇಕು!
ಫೇಸ್ ಬುಕ್ ನಲ್ಲಿ ನಕಲಿ ಖಾತೆಗಳ ಹಾವಳಿ ಹೆಚ್ಚಾಗುತ್ತಿದ್ದು ಇದನ್ನು ತಡೆಯುವ ಸಲುವಾಗಿ ಸಂಸ್ಥೆ ಈ ನಿರ್ಧಾರಕ್ಕೆ ಬಂದಿದೆ. ಹೊಸ ಫೇಸ್ಬುಕ್ ಖಾತೆ ತೆರೆಯುವವರಿಗೆ ಸಂಸ್ಥೆಯು ಆಧಾರ್ ಕಾರ್ಡ್ನಲ್ಲಿರುವಂತೆ ಹೆಸರನ್ನು ನಮೂದಿಸುವಂತೆ ಸೂಚನೆ ನೀಡುತ್ತಿದ್ದು ಇದು ನಿಮ್ಮ ಸ್ನೇಹಿತರಿಗೆ ನಿಮ್ಮನ್ನು ಗುರುತಿಸಲು ನೆರವಾಗಲಿದೆ ಎಂದು ಹೇಳಿದೆ
ಫೇಸ್ಬುಕ್ ಬಳಸುವ ನಿಮ್ಮ ಸ್ನೇಹಿತರು ನಿಮ್ಮನ್ನು ಗುರುತಿಸಲು ಇದರಿಂದ ಅನುಕೂಲವಾಗುತ್ತದೆ. ನೀವು ನಿಮ್ಮ ಆಧಾರ್ ಕಾರ್ಡ್ ನಲ್ಲಿರುವಂತೆ ಹೆಸರು ನಮೂದಿಸಿ ಎಂದು ಸೂಚನೆಗಳಲ್ಲಿ ತಿಳಿಸುವ ಸಂಸ್ಥೆ ಮುಂದಿನ ದಿನಗಳಲ್ಲಿ ಆಧಾರ್ ಕಾರ್ಡ್ಸಂಖ್ಯೆ ನಮೂದಿಸುವುದನ್ನು ಕಡ್ಡಾಯಗೊಳಿಸಬಹುದು ಎನ್ನಲಾಗಿದೆ.
ಜಗತ್ತಿನಾದ್ಯಂತ ಸುಮಾರು 200 ಕೋಟಿ ಬಳಕೆದಾರರನ್ನು ಹೊಂದಿರುವ ಫೇಸ್ ಬುಕ್ ಒಂದು ವೇಳೆ ಆಧಾರ್ ಮಾಹಿತಿ ನೀಡುವುದನ್ನು ಕಡ್ಡಾಯಗೊಳಿಸಿದರೆ ಮಾಹಿತಿ ಸೋರಿಕೆಯಾಗುವ ಅಪಾಯವೂ ಇದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics