ಸಾಂದರ್ಭಿಕ ಚಿತ್ರ 
ವಿಜ್ಞಾನ-ತಂತ್ರಜ್ಞಾನ

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಆ್ಯಪಲ್ ಐಫೋನ್ ತಯಾರಿಕಾ ಘಟಕ

ಆ್ಯಪಲ್‌ ಐಫೋನ್‌ ತಯಾರಿಕಾ ಘಟಕ ಬೆಂಗಳೂರಿನಲ್ಲಿ ಆರಂಭವಾಗಲಿದೆ. ಪೀಣ್ಯ ಕೈಗಾರಿಕಾ ಪ್ರದೇಶದಲ್ಲಿ ಘಟಕ ಆರಂಭಾಗಲಿದ್ದು...

ಬೆಂಗಳೂರು: ಆ್ಯಪಲ್‌ ಐಫೋನ್‌ ತಯಾರಿಕಾ ಘಟಕ ಬೆಂಗಳೂರಿನಲ್ಲಿ ಆರಂಭವಾಗಲಿದೆ.
ಪೀಣ್ಯ ಕೈಗಾರಿಕಾ ಪ್ರದೇಶದಲ್ಲಿ ಘಟಕ ಆರಂಭಾಗಲಿದ್ದು, ಇನ್ನು ಮೂರು ತಿಂಗಳೊಳಗೆ ಕಂಪನಿ ಕಾರ್ಯ ಆರಂಭಿಸಲಿದೆ ಎಂದು ಮಾಹಿತಿ ಮತ್ತು ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.

ಘಟಕ ಆರಂಭವಾಗಲು ಅವಶ್ಯಕತೆ ಇರುವ ಎಲ್ಲಾ  ಸೌಲಭ್ಯಗಳನ್ನು ಸರ್ಕಾರ ಒದಗಿಸಲಿದೆ ಎಂದು ಅವರು ತಿಳಿಸಿದ್ದಾರೆ. ರಾಜ್ಯ ಸರ್ಕಾರದ ಪ್ರಯತ್ನದ ಫಲವಾಗಿ ಬೆಂಗಳೂರಲ್ಲಿ ಘಟಕ ಸ್ಥಾಪನೆ ಮಾಡಲು ಕಂಪೆನಿ ಒಪ್ಪಿಗೆ ಸೂಚಿಸಿದೆ’ ಎಂದರು.

ಐಫೋನ್‌ ಕಾರ್ಯಾಚರಣೆಯ ಉಪಾಧ್ಯಕ್ಷೆ ಪ್ರಿಯಾ ಬಾಲಸುಬ್ರಮಣಿಯಂ ನೇತೃತ್ವದ ತಂಡಕ್ಕೆ ರಾಜ್ಯದ ಉದ್ಯಮಸ್ನೇಹಿ ನೀತಿ ಮನವರಿಕೆ ಮಾಡಿಕೊಡಲಾಯಿತು. ಹೀಗಾಗಿ ಕಂಪೆನಿ ಇಲ್ಲಿ ಹೂಡಿಕೆಗೆ ಆಸಕ್ತಿ ತೋರಿತು ಎಂದು ಹೇಳಿದರು.ಭಾರತಕ್ಕೆ ಅವಶ್ಯ ಇರುವಷ್ಟು ಐ ಫೋನ್‌ಗಳನ್ನು ಬೆಂಗಳೂರಿನಲ್ಲಿ ತಯಾರಿಸಲು ಕಂಪೆನಿ ಮುಂದಾಗಿದೆ. ಎಷ್ಟು ಪ್ರಮಾಣದಲ್ಲಿ ಬಂಡವಾಳ ಹೂಡಿಕೆ ಮಾಡಲಿದೆ ಎಂಬುದು ಇನ್ನಷ್ಟೇ ನಿರ್ಧಾರವಾಗಬೇಕಿದೆ ಎಂದು  ಹೇಳಿದರು.

ಕ್ಯಾಲಿಪೊರ್ನಿಯಾ ಮೂಲ ದ ಆ್ಯಪಲ್ ಕಂಪನಿ ತೈವಾನ್ ಕಂಪನಿಯ ಸಹಯೋಗದೊಂದಿಗೆ ನಗರದಲ್ಲಿ ಕಂಪನಿ ಆರಂಭಿಸಲಿದೆ

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ನ್ಯಾಯಾಂಗದಲ್ಲಿ ಭ್ರಷ್ಟಾಚಾರದ ಪಾಠ: ಕೇಂದ್ರ ಕ್ಷಮೆಯಾಚಿಸುತ್ತಿದ್ದಂತೆ NCERT ಪಠ್ಯ ಪುಸ್ತಕ ಬ್ಯಾನ್, ಪ್ರತಿಗಳನ್ನು ವಶಕ್ಕೆ ಪಡೆಯಲು ಸುಪ್ರೀಂ ಸೂಚನೆ

ಬಿಕಿನಿ ಧರಿಸಿರುವ ಮಹಿಳೆಯರ ಜೊತೆಗೆ ಸ್ಟೀಫನ್ ಹಾಕಿಂಗ್! Epstein ಫೈಲ್ಸ್ ನಲ್ಲಿ ಪೋಟೋ ಬಿಡುಗಡೆ

ಅಜಿತ್ ಪವಾರ್ ವಿಮಾನ ಪತನ ವಿಧ್ವಂಸಕ ಕೃತ್ಯವೋ ಅಥವಾ ನಿರ್ಲಕ್ಷ್ಯವೋ? ಸಿಐಡಿ ಹೇಳಿದ್ದೇನು?

'The Kerala Story 2: Goes Beyond' ಬಿಡುಗಡೆಗೆ ಕೇರಳ ಹೈಕೋರ್ಟ್ ತಡೆ

ಅಪ್ರಾಪ್ತ ಬಾಲಕಿಯೊಂದಿಗೆ ಅನುಚಿತ ವರ್ತನೆ: ಪೋಕ್ಸೋ ಕೇಸ್ ದಾಖಲಾಗುತ್ತಿದಂತೆ ಮಲ್ಲಿಕಾರ್ಜುನ ಮುತ್ಯಾ video ರಿಲೀಸ್!

SCROLL FOR NEXT