ಚೀನಾದಲ್ಲಿ ಮಾನವ ತದ್ರೂಪಿ ರೊಬೋಟ್!
ಮನುಷ್ಯರೊಂದಿಗೆ ಸರಳ ಸಂವಹನ ನಡೆಸುವ ಸಾಮರ್ಥ್ಯ ಹೊಂದಿರುವ ಜಿಯಾ ಜಿಯಾ ಹೆಸರಿನ ಮಾನವ ತದ್ರೂಪಿ ರೊಬೋಟ್ ನ್ನು ಅಭಿವೃದ್ಧಿಪಡಿಸಲಾಗಿದೆ.
ಶಾಂಘೈ: ಮನುಷ್ಯರೊಂದಿಗೆ ಸರಳ ಸಂವಹನ ನಡೆಸುವ ಸಾಮರ್ಥ್ಯ ಹೊಂದಿರುವ ಜಿಯಾ ಜಿಯಾ ಹೆಸರಿನ ಮಾನವ ತದ್ರೂಪಿ ರೊಬೋಟ್ ನ್ನು ಅಭಿವೃದ್ಧಿಪಡಿಸಲಾಗಿದೆ.
ರೊಬೋಟ್ ನ್ನು ತಯಾರಿಸಿರುವ ವಿಜ್ಞಾನಿಗಳು ಮಾನವ ತದ್ರೂಪಿ ರೊಬೋಟ್ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಅದನ್ನು ಚೀನಾದ ಭವಿಷ್ಯದ ಯಂತ್ರ ಎಂದು ಹೇಳಿದ್ದಾರೆ. ಚೆನ್ ಕ್ಸಿಯೋಪಿಂಗ್ ಮಾನವ ತದ್ರೂಪಿ ರೊಬೋಟ್ ನ್ನು ಅಭಿವೃದ್ಧಿಪಡಿಸಿದ ತಂಡದ ಮುಖ್ಯಸ್ಥರಾಗಿದ್ದು, ಶಾಂಘೈನಲ್ಲಿ ಮೊಟ್ಟಮೊದಲ ಬಾರಿಗೆ ರೊಬೋಟ್ ನ್ನು ಬಹಿರಂಗಗೊಳಿಸಲಾಗಿದೆ.
ಇನ್ನೊಂದು ದಶಕದ ವೇಳೆಗೆ ಜಿಯಾ ಮಾದರಿಯ ಕೃತಕ ಬುದ್ಧಿಮತ್ತೆ ಹೊಂದಿರುವ ಮಾನವ ತದ್ರೂಪಿ ನ್ರೊಬೋಟ್ ಗಳು ಚೀನಾದ ರೆಸ್ಟೋರೆಂಟ್, ಆಸ್ಪತ್ರೆ, ಮನೆಗಳಲ್ಲಿ ಕಾರ್ಯನಿರ್ವಹಿಸಲು ಪ್ರಾರಂಭಿಸುತ್ತವೆ. 5-10 ವರ್ಷಗಳಲ್ಲಿ ರೊಬೋಟ್ ಗಳಿಗೆ ಚೀನಾದಲ್ಲಿ ಉತ್ತಮ ಭವಿಷ್ಯವಿದೆ ಎಂದು ಚೆನ್ ಕ್ಸಿಯೋಪಿಂಗ್ ಹೇಳಿದ್ದಾರೆ.
ಚೀನಾದಲ್ಲಿ ಅಭಿವೃದ್ಧಿಯಾಗಿರುವ ಮಾನವತದ್ರೂಪಿ ರೋಬೋ ಹವಾಮಾನದ ಬಗ್ಗೆ ಮಾಹಿತಿ ನೀಡುವ, ಸರಳ ಸಂವಹನ ನಡೆಸುವ, ಪ್ರಶ್ನೆ ಕೇಳುವವರು ಮಹಿಳೆಯರೋ ಪುರುಷರೋ ಎಂಬುದನ್ನು ಗುರುತಿಸುವ ಸಾಮರ್ಥ್ಯ ಹೊಂದಿದೆ, ಪ್ರಾರಂಭದಲ್ಲಿ ರೋಬೋ ಓರ್ವ ವ್ಯಕ್ತಿಗೆ ನೀನು ಸುಂದರ ವ್ಯಕ್ತಿ ಎಂದು ಹೇಳಿದ್ದು, ತಾವು ಯಾರನ್ನಾದರೂ ಪ್ರೀತಿಸುತ್ತೀರಾ ಎಂಬ ಪ್ರಶ್ನೆಗೆ ನಾನು ಏಕಾಂಗಿಯಾಗಿರಲು ಇಚ್ಛಿಸುತ್ತೇನೆ ಎಂದು ರೋಬೋ ಹೇಳಿದೆ.